
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.02: ಜಿಲ್ಲೆಯ ಸಂಡೂರು ತಾಲೂಕಿನ ತಾಳೂರು ಗ್ರಾಮದ ಮನೆಯೊಂದರಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಪೋಟ ಆಗಿದ್ದು. ಈ ಸ್ಪೋಟದ ತೀವ್ರತಗೆ. ಇದರಿಂದ ಮನೆ ಛಿದ್ರ ಛಿದ್ರಗೊಂಡಿದೆ.
ಸುಭಾನಿ ಸಾಬ್ ಎನ್ನುವರ ಮನೆಯಲ್ಲಿ ಇಂದು ಬೆಳಿಗ್ಗೆ ಹೊಸ ಸಿಲಿಂಡರ್ ತಂದು ಕೂಡಿಸುವಾಗ ಗ್ಯಾಸ್ ಲೀಕೆಜ್ ಅಗಿದೆ. ಕೂಡಲೇ ಮನೆಯವರೆಲ್ಲ ಹೊರಗೆ ಬಂದಿದ್ದಾರೆ. ಆಗ ಕ್ಷಣಾರ್ಧದಲ್ಲಿ ಸಿಲಿಂಡರ್ ಬ್ಲಾಸ್ಟ್ ಅಗಿದೆ.
ಅದೃಷ್ಟವಾಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಫೋಟದ ತೀವ್ರತೆಗೆ ಪಕ್ಷದ ಮನೆಯೂ ಕುಸಿದು ಹೋಗಿದೆ. ಸುಬಾನಿ ಸಾಬ್ ಸೇರಿದಂತೆ ಇನ್ನಿಬ್ಬರಿಗೆ ಗಾಯವಾಗಿದೆ. ಅವರನ್ನು ತೊರಣಗಲ್ಲು ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಿದೆ. ಈ ಬಗ್ಗೆ ತೋರಣಗಲ್ಲು ಪೊಲೀಸರು ಪ್ರಜರಣ ದಾಖಲಿಸಿಕೊಂಡು ಮುಂದಿನಕ್ರಮ ಕೈಗೊಂಡಿದ್ದಾರೆ.



























