
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.12:- ಶಾಸಕನಾಗಿರುವ ಕೊನೆಯ ದಿನದವರೆಗೂ ನನ್ನ ತಾಲ್ಲೂಕಿನ ಅಭಿವೃದ್ದಿಗಾಗಿ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅವರು ರಾಮನಕೊಪ್ಪಲು ಗ್ರಾಮದಲ್ಲಿ ಸುಮಾರು ಇಪ್ಪತ್ತು ಲಕ್ಷ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವಿರೋಧ ಪಕ್ಷದ ಶಾಸಕನಾಗಿದ್ದರೂ ತಾಲ್ಲೂಕಿನ ಅಭಿವೃದ್ಧಿಗಾಗಿ ಎಲ್ಲಾ ಸಚಿವರ ಬಳಿ ತೆರಳಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದೇನೆ ಅದೇ ರೀತಿ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ತಿಳಿಸಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ ಇನ್ನೂ ಎರಡುಕಾಲು ವರ್ಷ ಮುಖ್ಯಮಂತ್ರಿಗಳಿಗೂ ಸಮಯ ವಿದೆ.ಅನುದಾನಕ್ಕಾಗಿ ಸಚಿವರ ಮನವೊಲಿಸುವ ಕೆಲಸವನ್ನು ಕೊನೆಯವರೆಗೂ ಮಾಡುತ್ತೇನೆ. ಈಗ ಲಭ್ಯವಾದ ಅನುದಾನವನ್ನು ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಸಿಗುವಂತೆ ನೋಡಿಕೊಂಡಿದ್ದೇನೆ.ನನಗೆ ಎಲ್ಲಾ ಗ್ರಾಮಗಳೂ ಚಿರಪರಿಚಿತ ವಾಗಿದ್ದು ಯಾವುದೇ ಗ್ರಾಮಗಳನ್ನೂ ಸಹ ಕಡೆಗಣಿಸುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್,ನಾಗರಘಟ್ಟ ದಿಲೀಪ್ ಕುಮಾರ್, ಗ್ರಾಪಂ ಮಾಜಿ ಸದಸ್ಯರುಗಳು, ಗ್ರಾಮದ ಮುಖಂಡರುಗಳು ಸಾರ್ವಜನಿಕರು ಸೇರಿದಂತೆ ಹಲವರು ಹಾಜರಿದ್ದರು.






























