
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.06: ನಗರದ ಸರ್ಕಾರಿ ತಾರಾನಾಥ ಆಯುರ್ವೇದ ಆಸ್ಪತ್ರೆಯ ನೌಕರರುಗಳಾದ ಶುಶ್ರೂಷಧಿಕಾರಿ ಗುರುಸ್ವಾಮಿ, ಕುಕ್ ಪ್ರಮೀಳಾ, ಮಸಾಜಿಷ್ಟ್ ಚಂದ್ರಪ್ಪ ವರ್ಗಾವಣೆಯಾಗಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಅವರನ್ನು ನಿನ್ನೆ ಬೀಳ್ಕೊಟ್ಟರು. ಈ ವೇಳೆ ತಾರಾನಾಥ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ.ಕೊಟ್ರೇಶ ಮಾತನಾಡಿ ಈ ಮೂರು ಜನ ನೌಕರರು ವರ್ಗಾವಣೆಯಾಗಿರುವುದರಿಂದ ಸಿಬ್ಬಂದಿಗಳ ಕೊರತೆಯನ್ನು ಆಸ್ಪತ್ರೆ ಎದುರಿಸುತ್ತಿರುವಾಗ ಇವರ ವರ್ಗಾವಣೆ ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆಂದರು.
ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ತಮಿಮ್ ಅನ್ಸಾರಿ, ಡಾ. ರತ್ನ ಶ್ರೀ, ಡಾ.ಪ್ರಭಾವತಿ, ಆಸ್ಪತ್ರೆಯ ಶುಶ್ರೂಷಾ ಧೀಕ್ಷಕಿ ನಿರ್ಮಲ, ಮೂಗಪ್ಪ, ಮಲ್ಲಿಕಾರ್ಜುನ, ಟಿ ರಾಧ,ದೇವರಾಜ, ಬಸವರಾಜ, ವಾಜಿದ್ ಅಲಿ ಫಾರ್ಮಸಿ ಅಧಿಕಾರಿ ರಂಜಿತ್, ಮುಬಿನಾವಾಜ್ ಕಾರ್ಯಕ್ರಮ ನಿರೂಪಿಸಿದರು ಫಾರ್ಮಸಿ ಅಧಿಕಾರಿ ಸೀಮಾ ವಂದಿಸಿದರು.




















