ತಾಯಿ ನೆನೆದು ಭಾವಾನಾತ್ಮಕ ಪೆÇೀಸ್ಟ್

ಮುಂಬೈ,ಆ.14-ತಾಯಿ ಮತ್ತು ಮಗಳ ನಡುವಿನ ಸಂಬಂಧವು ವಿಶ್ವದ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದಾಗಿದೆ. ನಟಿ ಜಾನ್ವಿ ಕಪೂರ್ ತಮ್ಮ ದಿವಂಗತ ತಾಯಿ ಶ್ರೀದೇವಿ ಅವರ 62 ನೇ ಜನ್ಮ ದಿನಾಚರಣೆಯನ್ನು ಇನ್ಸ್ಟಾಗ್ರಾಮ್ ನಲ್ಲಿ ಕುಟುಂಬದ ಕೆಲವು ಅಪರೂಪದ ಫೆÇೀಟೋಗಳನ್ನು ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದಾರೆ.ಜಾನ್ವಿ ತಮ್ಮ ಬಾಲ್ಯದ ಕೆಲವು ಭಾವನಾತ್ಮಕ ಚಿತ್ರಗಳನ್ನು ಇನ್‍ಸ್ಟಾಗ್ರಾಮ್ ಪೆÇೀಸ್ಟ್‍ನಲ್ಲಿ ಹಂಚಿಕೊಂಡಿದ್ದಾರೆ.

ಆ ಫೆÇೀಟೋಗಳಲ್ಲಿ ಚಿಕ್ಕ ವಯಸ್ಸಿನ ಶ್ರೀದೇವಿ ಮತ್ತು ಬೋನಿ ಕಪೂರ್ ತಮ್ಮ ಪುಟ್ಟ ಮಗು ಜಾನ್ವಿಯನ್ನು ಎತ್ತಿಕೊಂಡು ಕುಳಿತಿದ್ದು, ಜಾನ್ವಿ ಇತ್ತೀಚೆಗೆ ತಿರುಮಲಕ್ಕೆ ಭೇಟಿ ನೀಡಿದ್ದ ಫೆÇೀಟೋಗಳು ಕೂಡ ಸೇರಿವೆ.
ಈ ಚಿತ್ರಗಳ ಜೊತೆಗೆ, ಜಾನ್ವಿ ಹುಟ್ಟುಹಬ್ಬದ ಶುಭಾಶಯಗಳು ಅಮ್ಮ ನಾನು ಪ್ರತಿ ಹೆಜ್ಜೆಯಲ್ಲೂ ನನ್ನ ತಾಯಿಯ ಹೆಸರನ್ನು ಹೃದಯದಲ್ಲಿಟ್ಟುಕೊಂಡು ನಡೆಯುತ್ತೇನೆ ಶೀರ್ಷಿಕೆಯನ್ನು ಬರೆದಿದ್ದಾರೆ.

ಈ ಪೆÇೀಸ್ಟ್‍ಗೆ ಅನೇಕ ಅಭಿಮಾನಿಗಳು ಮತ್ತು ಸ್ನೇಹಿತರು ಕಾಮೆಂಟ್ ಮಾಡಿದ್ದಾರೆ.
ಶನಯಾ ಕಪೂರ್ ಕಾಮೆಂಟ್‍ಗಳಲ್ಲಿ ಹೃದಯದ ಎಮೋಜಿಯನ್ನು ಕಳುಹಿಸಿದ್ದಾರೆ. ಅಭಿಮಾನಿಯೊಬ್ಬರು ಜಾನ್ವಿಯ ಭಾವನೆಗಳನ್ನು ಗೌರವಿಸಿ, ಚಿತ್ರಗಳಲ್ಲಿನ ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.ಮತ್ತೊಬ್ಬ ಅಭಿಮಾನಿ, ನಿಮ್ಮಲ್ಲಿ ಶ್ರೀದೇವಿಯವರ ಚಿತ್ರಣ ನನಗೆ ಕಾಣುತ್ತಿದೆ ಎಂದು ಬರೆದಿದ್ದಾರೆ.