ತಾಂಡವ ಕಲಾನೃತ್ಯ ಸಂಸ್ಥೆಯಿಂದ ಶಾಸ್ತ್ರೀಯ, ಜಾನಪದ ನೃತ್ಯ ಪ್ರದರ್ಶನ

ಸಂಜೆವಾಣಿ ವಾರ್ತೆ

ಬಳ್ಳಾರಿ, ಡಿ.28: ತಾಂಡವ ಕಲಾ ನೃತ್ಯ ಸಂಸ್ಥೆ ತಾಂಡವ ನೃತ್ಯ ಕಲೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಿಕೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ಮತ್ತು ಜಾನಪದ ನೃತ್ಯಗಳನ್ನು ಪ್ರದರ್ಶನ ಮಾಡಲಾಯಿತು ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಯಲ್ಲನಗೌಡ ಶಂಕರ ಬಂಡಿ ಅಧ್ಯಕ್ಷರು ಜಿಲ್ಲಾ ಕಲಾವಿದ ಸಂಘ ಇವರು ಮಾತನಾಡುತ್ತಾ ಸಾಂಸ್ಕೃತಿಕ ಪರಂಪರೆಗೆ ಮಕ್ಕಳಿಗೆ ತರಬೇತಿ ನೀಡುವ ಮೂಲಕ ಮುಂದುವರಿಸುವ ಕಾರ್ಯಕ್ರಮವನ್ನು ಇಂತಹ ಸಂಘ-ಸಂಸ್ಥೆಗಳು ಹಲವಾರು ಮಾಡುತ್ತಾ ಬಂದಿದೆ ಅಂತಹ ಸಂಸ್ಥೆಗಳಿಗೆ ವೇದಿಕೆಯನ್ನು ಕಲ್ಪಿಸುವಲ್ಲಿ ನಮ್ಮ ಜಿಲ್ಲಾ ಕಲಾವಿದರ ಸಂಘವು ನಿರಂತರವಾಗಿ ಪ್ರಯತ್ನ ಪಡುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಂಘದಿಂದ ಇಂತಹ ಕಲಾ ಸಂಘಗಳಿಗೆ ವೇದಿಕೆಯನ್ನು ಕಲ್ಪಿಸಲಾಗುತ್ತದೆ ಎಂಬುದಾಗಿ ಉದ್ಘಾಟನದಲಿ ಮಾತನಾಡಿದರು

 ಕಾರ್ಯಕ್ರಮದಲ್ಲಿ ಕೊಟ್ರೇಶ್ ಶಿಕ್ಷಕರು ಬಳ್ಳಾರಿ ಇವರ ಮಾತಾನಾಡುತ್ತಾ ಸಾಂಸ್ಕೃತಿಕ ಪರಂಪರೆಗಳನ್ನ ನೃತ್ಯ ಸಂಗೀತ ನಾಟಕಗಳ ಮೂಲಕ ಮಕ್ಕಳಿಗೆ ಈಗಿಂದಲೇ ತರಬೇತಿ ನೀಡಿದರೆ ಒಳ್ಳೆಯ ಸಂಸ್ಕಾರವಂತ ಮಕ್ಕಳಾಗಿ ನಾಡಿನ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದಾಗುತ್ತದೆ ಎಂಬುದಾಗಿ ನುಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಣ್ಣಾಜಿ ಕೃಷ್ಣರೆಡ್ಡಿ ಉಪನ್ಯಾಸಕರು ಪ್ರದರ್ಶನ ಕಲೆ ನಾಟಕ ವಿಭಾಗ ಮಾತನಾಡುತ್ತಾ ಮಕ್ಕಳು ಮತ್ತು ಪೋಷಕರು ಇಬ್ಬರೂ ಕೂಡ ಸಾಂಸ್ಕೃತಿಕ ರಾಯಭಾರಿಗಳು ಮಕ್ಕಳು ನೃತ್ಯವನ್ನು ಮಾಡಿದರೆ ಪೋಷಕರು ನಾಟಕಗಳನ್ನು ಮಾಡಬೇಕು ಮತ್ತೆ ತರಬೇತಿಗಳನ್ನು ಪಡೆಯುವ ಮೂಲಕ ಅವರು ಕೂಡ ಸಾಂಸ್ಕೃತಿಕ ಪರಂಪರೆಗೆ ಕೈಜೋಡಿಸುವ ನಿಟ್ಟಿನಲ್ಲಿ ಸಹಕಾರ ನೀಡಿದರೆ ತರಬೇತಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂಬುದಾಗಿ ನುಡಿದರು

 ಕಾರ್ಯಕ್ರಮ ದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿನೋದ್ ಮತ್ತು ವೈದ್ಯ. ಪ್ರಕಾಶ್ ಭಗವತಿ ಜಿಲ್ಲಾ ಆಸ್ಪತ್ರೆ ವೈದ್ಯರು ಭಾಗವಹಿಸಿದ್ದರು ಪ್ರಾರ್ಥನ ಗೀತೆಯನ್ನು ಕುಮಾರಿ ತನ್ಮಯಿ ನೆರವೇರಿಸಿದರು ಕಾರ್ಯಕ್ರಮದಲ್ಲಿ ಕುಮಾರಿ ಸಿಂಚನ ಅವರಿಂದ ಶಾಸ್ತ್ರೀಯ ನೃತ್ಯ ಕುಮಾರಿ ನೇತ್ರ ತಂಡದಿಂದ ಜನಪದ ನೃತ್ಯಗಳನ್ನು ಪ್ರದರ್ಶನ ಮಾಡಲಾಯಿತು . ದಿನಾಂಕ 27 12 2025 ರಂದು ಸಂಜೆ ಆರು ಮೂವತ್ತಕ್ಕೆ ಕೃಷ್ಣ ಪ್ಲಾಜಾದಲಿ ಸ್ಥಳದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಸಂಸ್ಥೆಯ ಅಧ್ಯಕ್ಷರಾದ ವಿನೋದ್ ಅವರು ಪತ್ರಿಕ ಪ್ರಕಟಣೆ ತಿಳಿಸಿದ್ದಾರೆ