ತಮಿಳುನಾಡಿನ ಜಿಲ್ಲೆಗೆ 2.2 ಲಕ್ಷ ಎಚ್-1ಬಿ ವೀಸಾ ನೀಡಿಕೆ

ವಾಷಿಂಗ್ಟನ್, ನ.27:- ಅಮೆರಿಕದ ಮಾಜಿ ಪ್ರತಿನಿಧಿ ಮತ್ತು ಅರ್ಥಶಾಸ್ತ್ರಜ್ಞ ಡಾ. ಡೇವ್ ಬ್ರಾಟ್ ಅವರು ಎಚ್-1ಬಿ.ವೀಸಾ ವ್ಯವಸ್ಥೆಯಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ನೀತಿಯ ಪ್ರಕಾರ, ಯಾವುದೇ ದೇಶಕ್ಕೆ 85,000 ವೀಸಾಗಳ ಮಿತಿ ಇದೆ, ಆದರೆ ತಮಿಳುನಾಡಿನ ಒಂದೇ ಜಿಲ್ಲೆಗೆ 2.2 ಲಕ್ಷ ವೀಸಾಗಳನ್ನು ನೀಡಲಾಗಿದೆ. ಇದು ಯುಎಸ್ ಕಾಂಗ್ರೆಸ್ ನಿಗದಿಪಡಿಸಿದ ಮಾನದಂಡಕ್ಕಿಂತ ಎರಡೂವರೆ ಪಟ್ಟು ಹೆಚ್ಚು. ನಾನು ಈ ಹಗರಣದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಬ್ರೆಟ್ ಹೇಳಿದ್ದಾರೆ.


ಭಾರತದ ಒಂದು ಜಿಲ್ಲೆ ಒಂದು ದೇಶ ಪಡೆಯಬೇಕಾದ ಎರಡು ಪಟ್ಟು ವೀಸಾಗಳನ್ನು ಪಡೆದಿದೆ ಎಂದು ಅಮೆರಿಕದ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ವರದಿಗಳ ಪ್ರಕಾರ, 2024 ರಲ್ಲಿ ಅಮೆರಿಕ ಕಾನ್ಸುಲೇಟ್ ಚೆನ್ನೈಗೆ 220,000 ಊ-1ಃ ವೀಸಾಗಳು ಮತ್ತು ಹೆಚ್ಚುವರಿಯಾಗಿ 140,000 ಊ-4 ವೀಸಾಗಳನ್ನು ಅನುಮೋದಿಸಿದೆ. ಕಾನ್ಸುಲೇಟ್ ಪ್ರಾಥಮಿಕವಾಗಿ ನಾಲ್ಕು ಭಾರತೀಯ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ತೆಲಂಗಾಣ ಅರ್ಜಿಗಳನ್ನು ಸ್ವೀಕರಿಸಿದೆ.
ಪಾಡ್‍ಕ್ಯಾಸ್ಟ್‍ನಲ್ಲಿ, ಭಾರತದ ಒಂದು ಜಿಲ್ಲೆಯು ದೇಶಾದ್ಯಂತ ಕಾನೂನುಬದ್ಧವಾಗಿ ಅನುಮೋದಿಸಲಾದ ವೀಸಾಗಳ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಒಂದು ಜಿಲ್ಲೆಯು 220,000 ಎಚ್-1ಬಿ ವೀಸಾಗಳನ್ನು ಪಡೆದಿದೆ ಎಂದು ಅವರು ಆರೋಪಿಸಿದ್ದಾರೆ, ಇದು ಕಾನೂನುಬದ್ಧ ವಾರ್ಷಿಕ ಮಿತಿಯಾದ 85,000 ಕ್ಕಿಂತ 2.5 ಪಟ್ಟು ಹೆಚ್ಚು. ಅವರು ಇದನ್ನು ಭಾರಿ ವಂಚನೆ ಎಂದು ಕರೆದಿದ್ದಾರೆ.


ಬ್ರಾಟ್ ಭಾರತವನ್ನು ಗುರಿಯಾಗಿಸಿಕೊಂಡು ಎಚ್-1ಬಿ ವೀಸಾ ಕಾರ್ಯಕ್ರಮದಲ್ಲಿ “ಕೈಗಾರಿಕಾ ಪ್ರಮಾಣದ ವಂಚನೆ” ಎಂದು ಆರೋಪಿಸಿದ್ದಾರೆ.
ಟ್ರಂಪ್ ಆಡಳಿತವು ಎಚ್-1ಬಿ ವೀಸಾಗಳ ಮೇಲೆ ತನ್ನ ಕ್ರಮವನ್ನು ತೀವ್ರಗೊಳಿಸುತ್ತಿರುವ ಸಮಯದಲ್ಲಿ ಬ್ರಾಟ್ ಈ ಹೇಳಿಕೆ ನೀಡಿದ್ದಾರೆ.ಇದು ಅಮೆರಿಕನ್ ಕಾರ್ಮಿಕರ ಭವಿಷ್ಯದ ಬಗ್ಗೆ ಕಳವಳ ಮೂಡಿಸಿದೆ.
ಚೆನ್ನೈಗೆ 220,000 ವೀಸಾಗಳು ಬಂದಿವೆ.


ಡೇವ್ ಬ್ರಾಟ್ ಪಾಡ್‍ಕ್ಯಾಸ್ಟ್‍ನಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದು, ಎಚ್-1ಬಿ ವೀಸಾಗಳಲ್ಲಿ ಶೇ. 71 ರಷ್ಟು ಭಾರತದಿಂದ ಬರುತ್ತವೆ, ಆದರೆ ಶೇ. 12 ರಷ್ಟು ಮಾತ್ರ ಚೀನಾದಿಂದ ಬರುತ್ತವೆ. ಈ ಅಸಮಾನತೆಯನ್ನು ಪ್ರಶ್ನಿಸಿದ ಅವರು, ವಾರ್ಷಿಕ ರಾಷ್ಟ್ರೀಯ ಮಿತಿ 85,000 ವೀಸಾಗಳಾಗಿದ್ದರೂ, ಭಾರತದ ಒಂದು ಪ್ರದೇಶವಾದ ಮದ್ರಾಸ್ (ಚೆನ್ನೈ) 220,000 ವೀಸಾಗಳನ್ನು ಪಡೆದುಕೊಂಡಿದೆ ಎಂದು ಹೇಳಿದರು. ಬ್ರಾಟ್ ಇದನ್ನು ವಂಚನೆ ಎಂದು ಕರೆದರು, ಏಕೆಂದರೆ ಇದು ಕಾಂಗ್ರೆಸ್ ನಿಗದಿಪಡಿಸಿದ ಮಿತಿಗಿಂತ 2.5 ಪಟ್ಟು ಹೆಚ್ಚಾಗಿದೆ.