Home ಜಿಲ್ಲೆ ಮೈಸೂರು ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ ಅಧಿಕಾರಿಗಳು

ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ ಅಧಿಕಾರಿಗಳು

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಫೆ.08:-
ತಂಬಾಕು ರೈತರ ಹಿತ ಕಾಯುವಲ್ಲಿ ಶ್ರಮಿಸಿದ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರದ ಸಚಿವ ಎಚ್. ಡಿ. ಕುಮಾರಸ್ವಾಮಿ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ ಕೆ.ಮಹದೇವ್ ತಿಳಿಸಿದರು.


ಪಟ್ಟಣದ ಸಮೀಪವಿರುವ ಕಗ್ಗುಂಡಿಯ ತಂಬಾಕು ಹರಾಜು ಮಾರುಕಟ್ಟೆ 4ರಲ್ಲಿ ಕಳೆದ ಎರಡು ದಿನಗಳಿಂದ ತಂಬಾಕು ಖರೀದಿ ಪ್ರಕ್ರಿಯೆ ಸ್ಥಗಿತವಾದ ಹಿನ್ನೆಲೆಯಲ್ಲಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ಅಧಿಕಾರಿಗಳು, ರೈತರು ಹಾಗೂ ಖರೀದಿದ್ದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯದ ವರ್ಜಿನಿಯ ತಂಬಾಕು ಬೆಳೆಗೆ ಹೆಚ್ಚಿನ ಮಹತ್ವವಿದ್ದು, ಇದನ್ನೇ ನಂಬಿಕೊಂಡು ಅನೇಕ ತಂಬಾಕು ರೈತ ಕುಟುಂಬಗಳು ಜೀವನ ಸಾಗಿಸುತ್ತಿದೆ. ಇಂತಹ ಸಂದರ್ಭ ದಲ್ಲಿ ಖರೀದಿದಾರ ಕಂಪನಿಗಳು ಕೇಂದ್ರ ಸರ್ಕಾರದ ತೆರಿಗೆ ಶುಲ್ಕ ಹೆಚ್ಚಳದಿಂದಾಗಿ ತಂಬಾಕು ಖರೀದಿಯನ್ನು ಸ್ಥಗಿತಗೊಳಿಸಿದರಿಂದ್ದ ತಂಬಾಕು ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ವಿಚಾರವಾಗಿ ತಾಲೂಕಿನ ರೈತ ಸಂಘಟನೆ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಎಚ್. ಡಿ. ಕುಮಾರಸ್ವಾಮಿ ರವರನ್ನು ಭೇಟಿ ಮಾಡಿ ತಂಬಾಕು ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಯಿತು.ಸಮಸ್ಯೆ ಆಲಿಸಿದ ಇವರುಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಕೇಂದ್ರ ಸಚಿವ ಪಿಯೂಷ್ ಗೊಯಲ್ ರವರುಗಳನ್ನು ಸಂಪರ್ಕಿಸಿ ತಂಬಾಕು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲಾಗಿ ತಂಬಾಕು ಬೆಳೆಯ ಮೇಲೆ ವಿಧಿಸಲಾಗಿದ್ದ ಜಿಎಸ್‍ಟಿ ಹೆಚ್ಚುವರಿ ತೆರಿಗೆ ಶುಲ್ಕವನ್ನು ಕಡಿತಗೊಳಿಸಲಾಗಿದೆ.

ಈ ಪ್ರಕ್ರಿಯೆಯಿಂದಾಗಿ ರೈತರಿಂದ್ದ ತಂಬಾಕು ಖರೀದಿ ಮಾಡಲು ಕಂಪನಿಗೆ ಸಾಕಾರವಾಗುತ್ತದೆ ಹಾಗೂ ರೈತರು ಸರಾಸರಿ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ.ಈ ಬೆಳವಣಿಗೆಗೆ ಮೈಸೂರು ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಒಡೆಯರ್ ರವರು ಸಾಕಷ್ಟು ಬಾರಿ ಅಧಿವೇಶನಗಳಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಆದ್ದರಿಂದ ತಂಬಾಕು ರೈತರ ಸಮಸ್ಯೆಗೆ ಸ್ಪಂದಿಸಿರುವ ಇವರುಗಳಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಸಾಕಷ್ಟು ಸಹಕಾರ ನೀಡುತ್ತಿಲ್ಲ ಇದರಿಂದಾಗಿ ಕೇಂದ್ರ ಸರ್ಕಾರದ ಯೋಜನೆಗಳು ಅಭಿವೃದ್ಧಿಯಾಗದೆ ಕುಂಠಿತವಾಗುತ್ತಿದೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಎಂದರು.


ಸಭೆಯ ನಂತರ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿ ಪ್ರಾರಂಭಿಕವಾಗಿ ತಂಬಾಕಿಗೆ 315 ರೂಗಳ ಬೆಲೆಯನ್ನು ನಿಗದಿಗೊಳಿಸಿ ಖರೀದಿದಾರರು ತಂಬಾಕು ಖರೀದಿ ಮಾಡಿದರು.
ಈ ಸಂದರ್ಭದಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ, ಮಾಜಿ ನಿರ್ದೇಶಕ ರಾಜೇಂದ್ರ, ತಂಬಾಕು ಮಂಡಳಿ ಹರಾಜು ಅಧೀಕ್ಷಕ ಮಾರಣ್ಣ, ಹರಾಜು ವ್ಯವಸ್ಥಾಪಕ ಕಿರಣ್, ಧನಂಜಯ್, ಬ್ರಿಜ್ ಭೂಷಣ್,ಜೆಡಿಎಸ್ ಪಕ್ಷದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ರೈತ ಸಂಘದ ಲೋಕೇಶ್ ರಾಜೇ ಅರಸ್,ಕುಮಾರ್, ಶಿವಣ್ಣಶೆಟ್ಟಿ,ಮುಖಂಡರಾದ ಐಲಾಪುರ ರಾಮು, ಸಿ.ಎನ್.ರವಿ,ಪಾರೆ ಕೊಪ್ಪಲು ಚಂದ್ರು, ಸತೀಶ್ ಹಬಟೂರು,ಗಣೇಶ್,ವಕೀಲ ನಾಗರಾಜ್, ಅಶೋಕ್ ಪುನಾಡಳ್ಳಿ, ಶಿವಣ್ಣ,ಕಾಮರಾಜ್,ಚಂದ್ರು,ಶ್ರೀನಿವಾಸ್,ಮೋಹನ್,ವಿವಿಧ ಖರೀದಿದಾರ ಕಂಪನಿಯ ಪುಟ್ಟಣ್ಣ ಮಹದೇವ್ ಆನಂದ್ ಕೇಶವ ದಶರಥ ರಾಮಶೆಟ್ಟಿ ರಾಜು ರವಿ ವಾಸು ಸೇರಿದಂತೆ ಮತ್ತಿತರರು ಹಾಜರಿದ್ದರು.