ತಂದೆಯ ಕಾಯಕ ಟೀ ಅಂಗಡಿಮಕ್ಕಳು ನ್ಯೂರೋ ಸರ್ಜನ್ ಇಂಜಿನೀಯರ್ ಗಳು


ಎನ್.ವೀರಭದ್ರಗೌಡ
ಬಳ್ಳಾರಿ, ಜೂ.17:
ಮನಸ್ಸಿದ್ದರೆ ಮಾರ್ಗ, ಶ್ರದ್ದೆ ಇದ್ದರೆ ಸ್ವರ್ಗ ಎಂಬಂತೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಕಾಣಬೇಕೆಂದುಕೊಂಡಿದ್ದ ಟೀ ಅಂಗಡಿಯ ಶೇಕ್ಷಾವಲಿ ಕನಸು ನನಸಾಗಿದೆ.
ನಗರದ ಕಮಿಂಗ್ ರಸ್ಥೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರಿನಲ್ಲಿ ಸಣ್ಣದೊಂದು ಟೀ ಅಂಗಡಿ ಇಟ್ಟುಕೊಂಡಿದ್ದಾರೆ ಈ ಪಿ. ಶೇಕ್ಷಾವಲಿ ಇವರಿಗೆ ಇಗ 58 ವರ್ಷ.
ಅಲ್ಲಂ ಬೀದಿಯ ನಿವಾಸಿಗಳಾಗಿದ್ದ ಇವರು ಓದಿದ್ದು ಅಷ್ಟಕ್ಕಷ್ಟೇ ಆದರೂ ತಮ್ಮ ಇಬ್ಬರು ಗಂಡು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಂಡವರು.
ಮೊದಲಿಗೆ ತಮ್ಮ ಜೀವನಕ್ಕೆ ಚೀಟಿ ವ್ಯವಹಾರ ಮಾಡಿ, ಬಳಿಕೆ ಸೈಕಲ್ ಬಾಡಿಗೆ ನೀಡುವ ಷಾಪ್ ಇಟ್ಟು, ಆ ಬಳಿಕ ಹೆಚ್ಚು ದಿನಗಳ ಕಾಲ‌ ಪೆಟ್ರೋಲ್ ಮಾರುತ್ತಿದ್ದರಿಂದ ಪೆಟ್ರೋಲ್ ವಲಿ ಎಂಬ ಹೆಸರೂ ಬಿದ್ದಿತ್ತು.
ಸುತ್ತಮುತ್ತ ಪೆಟ್ರೋಲ್ ಬಂಕ್ ಗಳು ಬಂದ ಮೇಲೆ ವ್ಯಾಪರ ಇಲ್ಲದೆ ಟೀ ಅಂಗಡಿ ಮೊರೆ ಹೋದರು.‌
ಬೆಳಿಗ್ಗೆ 4.30 ಯಿಂದ ಸಹೋದರನ ಜೊತೆ ರಾತ್ರಿ ಎಂಟು ಗಂಟೆ ವರೆಗೂ ಟೀ‌ ಮಾರಿಯೇ ಮಕ್ಕಳನ್ನು ಓದಿಸಿದ್ದಾನೆ.
ಕರೋನಾ ವೇಳೆ ದುಡಿಮೆ ಇಲ್ಲದೆ ಮಕ್ಕಳ ವಿದ್ಯಾಭ್ಯಸಕ್ಕೆ ಆರ್ಥಿಕ ಮುಗ್ಗಟ್ಟಾಯಿತೆಂದು ಸ್ಬಮನತ ಮನೆಯನ್ನೂ ಮಾರಾಟ ಮಾಡಿದ್ದಾನೆ. ಈಗ ಲೀಜ್ ಪಡೆದ ಹುಸೇನ್ ನಗರದ ಮನೆಯಲ್ಲಿದ್ದಾನಂತೆ.
ಹಿರಿಯ ಮಗ ಪಿ.ಮಹಮ್ಮದ್ ಸಾಹಿದ್ ಬೆಂಗಳೂರಿನ ರೇವ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಬಿಇ ಮುಗಿಸಿ, ಈಗ ಮುಂಬೈನಲ್ಲಿ
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಕಿರಿಯ ಮಗ ಪಿ.ಆಶಿಫ್ ಅಲಿ, ಮಕ್ಕಳ ಮಂಟಪ ಶಾಲೆ, ನಂತರ ಬಿಪಿಎಸ್ ಸಿ, ನಾರಾಯಣ ಕಾಲೇಜಿನಲ್ಲಿ ಓದಿ. ನಗರದ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದಾನೆ. ನಂತರ ತಮಿಳುನಾಡಿನ ಕೊಯಮತ್ತೂರಿನ ಕುಪ್ಪಸ್ವಾಮಿ ನಾಯ್ಡು ಮೆಮೋರಿಯಲ್ ಮೆಡಿಕಲ್ ಕಾಲೇಜ್ ನಲ್ಲಿ ಜನರಲ್ ಸರ್ಜರಿ ಮಾಡಿದ್ದಾರೆ ಸರ್ಕಾರಿ ಕೋಟಾದಲ್ಲಿಯೇ.
ಅಷ್ಟೇ ಅಲ್ಲದೆ ಈ ವರ್ಷ ಕೇರಳದ ತಿರುವನಂತಪುರಂ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನ್ಯೂರೋ ಸರ್ಜರಿ ಪಿಜಿ ಸೀಟ್ ಪಡೆದುಕೊಂಡಿದ್ದಾರೆ.
ತಮ್ಮ ಸಂಕಷ್ಟದ ಜೀವನದಲ್ಲಿ ಹೆತ್ತ ಮಕ್ಕಳಿಬ್ಬರು ಇಂಜಿನಿಯರ್ ಮತ್ತೊಬ್ವರು ತಜ್ಞ ವೈದ್ಯರಾದರೆ ಇದಕ್ಕಿಂತ ಸಂತೋಷ ಯಾವ ತಂದೆಗೆ ಬೇಕು.
ಜೊತೆಗೆ ತಮ್ಮ ಪಿಂಜಾರ್ ನದಾಫ್ ಸಮಾಜದ ಜನತೆ ಮಗ ನ್ಯೂರೋ ಸರ್ಜನ್ ಪಿಜಿ ಶೀಟ್ ಪಡೆದುಕೊಂಡಿದ್ದಕ್ಕೆ ಕರೆದು ಸನ್ಮಾನ ಮಾಡಿದ್ದು ಸಮಾಜದಲ್ಲೂ ತಮಗೆ ಗೌರವ ಘನತೆ ಹೆಚ್ಚುವಂತೆ ಮಾಡಿದ್ದರ ಬಗ್ಗೆಯೂ ಸಂತ ವ್ಯಕ್ತಪಡಿಸುತ್ತಾರೆ ಶೇಕ್ಷಾವಲಿ.