ತಂತ್ರಜ್ಞಾನದ ಬಳಕೆಯಿಂದ ಸಂಶೋಧನೆಗಳಲ್ಲಿ ಕೃತಿಚೌರ್ಯ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.29:-
ಪ್ರಸ್ತುತ ತಂತ್ರಜ್ಞಾನದ ಬಳಕೆಯಿಂದಾಗಿ ಸಂಶೋಧನೆಗಳಲ್ಲಿ ಹೆಚ್ಚಿನ ಕೃತಿಚೌರ್ಯವಾಗುತ್ತಿವೆ. ಅಲ್ಲದೇ ಹಲವರಲ್ಲಿ ಸಮರ್ಥವಾದ ಗ್ರಹಿಕೆಯ ಕೊರತೆ ಕಾಣುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಎನ್.ಕೆ ಲೋಕನಾಥ್ ಅಭಿಪ್ರಾಯಪಟ್ಟರು.


ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಹಾಗೂ ಮಿಲನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ
ಪುಟಗಳಿಂದಾಚೆ: ಸಂವಹನ ಮತ್ತು ಸೃಜನಶೀಲತೆಯತ್ತ ಗ್ರಂಥಪಾಲನೆ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ದಶಕಗಳ ಹಿಂದೆ ಗ್ರಂಥಾಲಯಗಳಲ್ಲಿ ಕುಳಿತು ಹೆಚ್ಚು ಓದುವ, ಬರೆಯುವ ಕೆಲಸಗಳಾಗುತ್ತಿದ್ದವು. ಇದರಿಂದ ಸೃಜನಾತ್ಮಕ ವಿಚಾರಗಳು ಹುಟ್ಟಲು ಸಾಧ್ಯವಾಗಿತ್ತು. ಆದರೆ ಈಗ ಡಿಜಿಟಲ್ ಗ್ರಂಥಾಲಯಗಳು ನಿರ್ಮಾಣವಾಗುತ್ತಿವೆ. ಎಲ್ಲರೂ ಜೆರಾಕ್ಸ್ ಮೂಲಕ ಓದುವ ಸುಲಭ ಹಾದಿ ಕಂಡುಕೊಳ್ಳುತಿದ್ದಾರೆ. ಗ್ರಂಥಾಲಯ ಉಪಯೋಗಿಸದೇ ಎಷ್ಟೇ ವಿಷಯ ತಿಳಿದುಕೊಂಡರು, ಜೀವನದಲ್ಲಿ ಅಮೂಲ್ಯವಾದ ಕಲಿಕೆಗೆ ಮೂಲವನ್ನು ಕಳೆದುಕೊಂಡಂತೆ ಎಂದರು.


ಇವತ್ತಿ?ನ ವಿದ್ಯಾರ್ಥಿಗಳೆಲ್ಲ ಮೊಬೈಲ್ ಮೂಲಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮೊಬೈಲ್ ಮಾಹಿತಿ ಪರಿಕರವೇ ಹೊರತು ಜ್ಞಾನವಲ್ಲ. ಇದರಿಂದ ಯಾವುದೇ ವಿಚಾರಗಳು ಜ್ಞಾನವಾಗಿ ತಲೆಯಲ್ಲಿ ಉಳಿಯುವುದಿಲ್ಲ ಎಂದರು.


ಇವತ್ತಿ?ನ ದಿನಮಾನಗಳಲ್ಲಿ ಇಂಟರ್‍ನೆಟ್ ಅಗಾಧವಾಗಿದ್ದು, ಏನನ್ನು ಬೇಕಾದರೂ ಹುಡುಕುವ ಸಾಮಥ್ರ್ಯವಿದೆ.ಅತೀವ ಮಾಹಿತಿ, ಅವಕಾಶ, ಅನುಕೂಲ ದೊರೆಯುತ್ತಿದೆ. ಆದರೆ ಯುವಕರಿಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದೇ ತಿಳಿದಿಲ್ಲ. ಕೆಟ್ಟದ್ದು ಇದೆ. ಒಳ್ಳೆಯದು ಇದೆ. ನಮಗೆ ಯಾವುದು ಬೇಕು ಎನ್ನುವುದನ್ನು ಆಯ್ದುಕೊಳ್ಳುವ ಆಯ್ಕೆ ಯುವಕರಲ್ಲಿದೆ ಎಂದರು.


ವಿಶ್ರಾಂತ ಕುಲಪತಿ ಡಾ.ಬಿ.ಜೆ.ಸಂಗಮೇಶ್ವರ ಮಾತನಾಡಿ, ಗ್ರಂಥಾಲಯಗಳು ಯಾವುದೋ ಕಟ್ಟಡದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಬದಲಿಗೆ ಮನೆಯಿಂದಲೇ ಸ್ಥಾಪಿತವಾಗಿರುತ್ತವೆ. ಮಕ್ಕಳಿಗೆ ತಾತ, ಅಜ್ಜಿಯರು ವಚನ, ಕಥೆಗಳು, ಗಾದೆಗಳನ್ನು ಹೇಳುವ ಮೂಲಕ ಪುಸ್ತಕದ ರೂಪದಲ್ಲಿ ಇರುವ ಮೌಲ್ಯಗಳನ್ನು ಮಾತಿನ ಮೂಲಕ ತಿಳಿಸುತಿದ್ದರು. ಆದರೆ, ಕಾಲ ಬದಲಾಗಿದೆ. ಇವತ್ತು ಅವರ ಸ್ಥಾನಗಳನ್ನು ತಂತ್ರಜ್ಞಾನ, ಇಂಟರ್‍ನೆಟ್, ಗ್ಯಾಜೆಟ್‍ಗಳು ಆವರಿಸಿಕೊಂಡಿವೆ. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಗ್ರಂಥಾಲಯಗಳು ಒಂದು ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಇವತ್ತು ಆ ಗ್ರಹಿಕೆ ಮರೆಯಾಗುತ್ತಿದೆ. ಹೆಚ್ಚಿನ ಭಾಗ ವಿದ್ಯಾ?ರ್ಥಿಗಳು ಗ್ರಂಥಾಲಯಕ್ಕೆ ಹೋಗುವ ಹವ್ಯಾಸವನ್ನೇ ಮೆರೆಯುತಿದ್ದಾರೆ. ಒಳ್ಳೆಯ ಕಟ್ಟಡ, ವ್ಯವಸ್ಥೆ ಸೌಲಭ್ಯಗಳು ಇದ್ದರೆ ಗ್ರಂಥಾಲಯಕ್ಕೆ ಶ್ರೇಷ್ಠತೆ ದೊರಕುವುದಿಲ್ಲ. ಹೆಚ್ಚಿನ ಓದುಗರು ಇದ್ದಲ್ಲಿ ಮಾತ್ರ ಗ್ರಂಥಾಲಯಕ್ಕೆ ಮೆರುಗು ಸಾಧ್ಯ. ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ. ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ, ಸೃಜನಾತ್ಮಕರನ್ನಾಗಿಸುವ ಕಡೆಗೆ ಒತ್ತು ನೀಡಬೇಕಾಗಿದೆ ಎಂದರು.


ಬೆಂಗಳೂರು ಇನ್ ಫಾರ್ಮೇಟಿಕ್ಸ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ ಸತ್ಯನಾರಾಯಣ, ಮಿಲನ್ ಅಧ್ಯಕ್ಷೆ ಡಾ.ಬಿ.ಎಂ ಮೀರಾ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪೆÇ್ರ.ಎಂ ಚಂದ್ರಶೇಖರ ಕಾರ್ಯಕ್ರಮದಲ್ಲಿ ಹಾಜರಿದ್ದರು.