
ಸಂಜೆವಾಣಿ ವಾರ್ತೆ
ಸಂಡೂರು, ಫೆ.04:-ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಬಸಾಪುರ ಗ್ರಾಮದಲ್ಲಿ ರಂಗನೇಸರ ಸಾಂಸ್ಕೃತಿಕ ಕಲಾ ಸಂಘ ರಮ(ರಿ) ಎಂ .ಬಸಾಪುರ ಡೊಳ್ಳು ಕುಣಿತ ತರಬೇತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಂದಿನ ದಿನಗಳಲ್ಲಿ ಜನಪದ ಕಲೆಗಳು ನಶಿಸಿ ಮೂಲೆ ಗುಂಪಾಗಿರುವುರುವುದು ನಾವು ಪ್ರಸ್ತುತ ದಿನಗಳಲ್ಲಿ ಕಾಣುತ್ತಿದೀವಿ ಅಂತಹ ಕಲೆಗಳನ್ನು ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾ ಮತ್ತೆ ಜನಪದ ಕಲೆಗಳನ್ನು ಬೆಳೆಸುವಂತಹ ಕೆಲಸ ರಂಗಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ನಮ್ಮ ಗ್ರಾಮದ ಚಂದ್ರಶೇಖರ ಮಾಡುತ್ತಿದ್ದಾರೆ ಎಂದು ಡೊಳ್ಳು ಬಾರಿಸುತ್ತಾ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ. ಶಿವಲಿಂಗಪ್ಪ ಮಾತಾನಾಡಿದರು.
ಹಿಂದಿನ ಕಾಲದಲ್ಲಿ ಮನೆಗೊಬ್ಬರೂ ಕಲಾವಿದರನ್ನು ನಾವು ಕಾಣುತ್ತೀದ್ದೀವಿ ಈಗ ಕಲೆಗಳು ಬಗ್ಗೆ ಆಸಕ್ತಿ ಇಲ್ಲದಂತೆ ಇರುವುದು ಕಾಣುತ್ತೇವೆ.ಬಯಲಾಟ ಗ್ರಾಮೀಣ ಭಾಗದಲ್ಲಿ ಆಡುವುದು ಕಾಣುತ್ತಿದ್ದೀವಿ ಈಗೀನ ಸಂದರ್ಭದಲ್ಲಿ ಬಯಲಾಟ ಕಲಾವಿದರು ಕಣ್ಣಿಗೆ ಕಾಣದಂತೆ ಆಗಿದೆ ಜನಪದ ಗೀತೆಗಳು, ಲಾವಣಿಗಳು, ನಾಟಕಗಳು, ನೃತ್ಯಗಳು ,ಪುರಾಣ ಕಥೆಗಳು ಮತ್ತೆ ಗ್ರಾಮೀಣ ಕಲೆಗಳನ್ನು ಬೆಳೆಸಲು ಈಗೀನ ಯುವಕರು ಮುಂದಾಗಬೇಕು ಅಂತಹ ಕಾರ್ಯಗಳನ್ನು ರಂಗನೇಸರ ಸಾಂಸ್ಕೃತಿಕ ಕಲಾ ಸಂಘದವರು ಮಾಡುತ್ತಿದ್ದಾರೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿಎಂಸಿ ಅಧ್ಯಕ್ಷ ಶ್ರೀ.ಎನ್.ಯಲ್ಲಪ್ಪ ಮಾತಾಡಿದರು.
ಕಾರ್ಯಕ್ರಮದಲ್ಲಿ:- ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ಉಪಾಧ್ಯಕ್ಷರಾದ ಮುರುಣ್ಣೆ ಶಿಲಪ್ಪ ಕಾರ್ಯದರ್ಶಿ ಚಂದ್ರಶೇಖರ . ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ ಶಿವಣ್ಣ,ಶ್ರೀ. ದೇವರಾಜ,ಡೊಳ್ಳು ಕಲಾವಿದರು ಶ್ರೀ ಹನುಮಂತ ರೆಡ್ಡಿ, ಪ್ರವೀಣ್ ಕುಮಾರ್, ಮತ್ತು ಸಂಧ್ಯಾ ಶ್ವೇತಾ ಮತ್ತು ತಂಡದಿಂದ ಪ್ರಾರ್ಥನೆ, ಪುರುಷೋತ್ತಮ. ಇ ಸ್ವಾಗತಿಸಿದರು. ನಿರೂಪಣೆಯನ್ನ ರಾಜಶೇಖರ್ ಡಿ. ಬಿ (ಶಿಕ್ಷಕರು) ನಿರ್ವಹಿಸಿದರು.
























