ಡಿ.3 ರಂದು ವೀರಶೈವ ಲಿಂಗಾಯತ ಮಹಾಸಭಾದ ನವೀಕೃತ ಸಭಾ ಭವನ ಉದ್ಘಾಟನೆ: ಪ್ರಕಾಶ್

ಸಂಜೆವಾಣಿ ವಾರ್ತೆ
ತಿ.ನರಸೀಪುರ ನ.25-
ಪಟ್ಟಣದ ವಿವೇಕಾನಂದ ನಗರದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ನವೀಕೃತ ಸಭಾ ಭವನದ ಉದ್ಘಾಟನೆ ಹಾಗೂ ಎಪಿಎಂಸಿ ಆವರಣದಲ್ಲಿ ಉದ್ಘಾಟನಾ ಸಮಾರಂಭ ಮತ್ತು ಬೃಹತ್ ಧಾರ್ಮಿಕ ಸಭೆಯನ್ನು ಡಿ.3ರ ಬುಧವಾರ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಸಿ.ಎಂ.ಪ್ರಕಾಶ್ ಹೇಳಿದರು.


ಪಟ್ಟಣದ ಹೆಳವರಹುಂಡಿ ವೃತ್ತದಲ್ಲಿ ಶುಕ್ರವಾರ ಸಂಜೆ ಕಾರ್ಯಕ್ರಮದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ, ವೀರಶೈವ ಲಿಂಗಾಯತ ಸಮುದಾಯವನ್ನು ವಿದ್ಯುಕ್ತವಾಗಿ ಆಹ್ವಾನಿಸಿ ಮಾತನಾಡಿದ ಅವರು ಮಹಾಸಭಾದ ಕ್ರಿಯಾಶೀಲತೆಯ ಮೊದಲ ಹೆಗ್ಗುರುತಾಗಿ ವೀರಶೈವ ವಿದ್ಯಾರ್ಥಿ ನಿಲಯವನ್ನು ನವೀಕರಣಗೊಳಿಸಿ ಡಿಸೆಂಬರ್ ಮೊದಲ ವಾರದಲ್ಲಿ ಲೋಕಾರ್ಪಣೆ ಗೊಳಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಮುಖ ಮಠಾಧೀಶರು, ರಾಜಕೀಯ ಪಕ್ಷಗಳ ಗಣ್ಯರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದರು.


ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ, ನವಿಕೃತ ಸಭಾಭವನದ ಉದ್ಘಾಟನೆ ಸಮಾರಂಭ ಹಾಗೂ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ದಿವ್ಯ ಸಮ್ಮುಖವನ್ನು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಮ್ಮಡಿ ನಿರ್ವಾಣ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ವಹಿಸಲಿದ್ದು, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅವರು ನವೀಕೃತ ಭವನವನ್ನು ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಮಹದೇವ ಬಿದರಿ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಮಹಾಸಭಾ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರೇಣುಕ ಪ್ರಸನ್ನ ಸೇರಿದಂತೆ ಎಂ.ಜಿ.ಸುದೀಪ್, ಡಾ.ಎಮ್.ರೇವಣ್ಣ, ಅಬ್ಬಿಗೆರೆ ಮನೋಹರ್, ಕೆ.ಪಿ.ಮಹದೇವಸ್ವಾಮಿ, ಎಂ. ರುದ್ರೇಶ್, ನಿಶಾಂತ್, ಹಿನಕಲ್ ಬಸವರಾಜು, ಎಂ.ಪ್ರದೀಪ್ ಕುಮಾರ್, ಮೊತ್ತ ಬಸವರಾಜು, ಅರ್ಜುನ್ ಪಾರ್ಥ, ಮುಕ್ತಾಂಬ, ಎಚ್ ಕೆ ಚನ್ನಪ್ಪ, ಧನ್ಯ ಸತ್ಯೇಂದ್ರ ಮೂರ್ತಿ ಹಾಗೂ ಇನ್ನಿತರರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.


ಮಹಾಸಭಾ ಉಪಾಧ್ಯಕ್ಷ ಉಪಾಧ್ಯಕ್ಷ ಎಸ್.ಕೆ ಕಿರಣ ಮಾತನಾಡಿ, ನವಿಕೃತ ಸಭಾಭವನ ಹಾಗೂ ಧಾರ್ಮಿಕ ಸಮಾರಂಭಕ್ಕೆ ಮೊದಲ ಹಂತದಲ್ಲಿ ಆಹ್ವಾನಿತ ಮಠಮಾನ್ಯಗಳ ಸ್ವಾಮೀಜಿಗಳು ಹಾಗೂ ಗಣ್ಯರನ್ನು ಆಹ್ವಾನಿಸಿದ ಬಳಿಕ ಸಮುದಾಯದ ಜನರನ್ನು ಅಧಿಕೃತವಾಗಿ ಆಹ್ವಾನಿಸುವ ಕಾರ್ಯವನ್ನು ಪಟ್ಟಣದಲ್ಲಿ ಇಂದಿನಿಂದ ವಿದ್ಯುಕ್ತವಾಗಿ ಆರಂಭಿಸುತ್ತಿದ್ದೇವೆ. ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಎಲ್ಲರಿಗೂ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.


ಮಹಾಸಭಾ ನಿರ್ದೇಶಕರಾದ ಪೂಜಿತ್ ಮೆಡಿಕಲ್ಸ್ ಕುಮಾರ್, ಬಿ.ಎಂ.ವಿಜಯಕುಮಾರ್, ಕಿರಗಸೂರು ಎಂ.ಸುರೇಶ್, ಕೆ ಇ ಬಿ ಸಿದ್ದಲಿಂಗಸ್ವಾಮಿ, ತೊಂಟೇಶ್, ಮಹಾ ಪೆÇೀಷಕ ಎಂ.ಎಸ್.ಮಂಜುನಾಥ್, ಮಹಿಳಾ ಅಧ್ಯಕ್ಷೆ ರೂಪಶ್ರೀ ಪರಮೇಶ್, ನಿರ್ದೇಶಕರಾದ ವಿಜಯಲಕ್ಷ್ಮಿ, ಶೋಭ, ಆಲಗೂಡು ಪಿ ಎ ಸಿ ಸಿ ಎಸ್ ಅಧ್ಯಕ್ಷ ಪಿ.ನಟರಾಜು, ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ನಿಲಸೋಗೆ ಶೇಖರಪ್ಪ, ಗೌಡ್ರಾರಾದ ಕುಮಾರ್, ರಾಜೇಂದ್ರ, ನಾಗೇಂದ್ರ, ರೇವಣ್ಣ, ಕೇಬಲ್ ರಾಜಶೇಖರ್, ಅಡಿಗೆ ಪ್ರಭು, ನಂದೀಶ್, ಎನ್.ಲೋಕೇಶ್, ಅಂಗಡಿ ನಾಗೇಶ, ಆಂಡ್ರಕಾಳಿ ರಮೇಶ, ಡಿ.ಎಲ್.ಮಹದೇವಪ್ಪ, ನಿಲಸೋಗೆ ಪ್ರಸಾದ್, ಭೋಗಯ್ಯನಹುಂಡಿ ಪ್ರಭುಸ್ವಾಮಿ, ಮಣಿಕಂಠ, ಸಾಮಿಯಾನ ನಾಗೇಶ, ಚಿಕ್ಕಬೂವಳ್ಳಿ ನವೀನ್, ಛಾಯಾಗ್ರಾಹಕ ಮಂಜುನಾಥ್ ಹಾಗೂ ಇತರರು ಇದ್ದರು.