ಡಿ.23ರಂದು ಕಲಬುರ್ಗಿಯಲ್ಲಿ ರಾಜ್ಯ ಮಟ್ಟದ ರೈತರ ಸಮಾವೇಶ

ಸಂಜೆವಾಣಿ ವಾರ್ತೆ
ತಿ.ನರಸೀಪುರ ಡಿ.16-
ರೈತರ ಹಕ್ಕೋತ್ತಾಯಗಳನ್ನು ಆಡಳಿತರೂಢ ಸರ್ಕಾರಗಳ ಮುಂದೆ ಮಂಡಿಸಲು, ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಹುಟ್ಟು ಹಬ್ಬದ ಅಂಗವಾಗಿ ಕಲ್ಬುರ್ಗಿಯಲ್ಲಿ ವಿಶ್ವ ರೈತ ದಿನಾಚರಣೆ, ರೈತರ ಹಬ್ಬವಾಗಿ ರಾಜ್ಯಮಟ್ಟದ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್ ಹೇಳಿದರು.


ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಸೋಮವಾರ ವಿಶ್ವ ರೈತ ದಿನಾಚರಣೆ, ರೈತರ ಹಬ್ಬ ಹಾಗೂ ರಾಜ್ಯಮಟ್ಟದ ರೈತ ಸಮಾವೇಶ ಕಲಬುರ್ಗಿ ಪೆÇೀಸ್ಟರ್ ಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಅವರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ – ಹಸಿರು ಸೇನೆ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ರೈತ ರತ್ನ ಕುರುಬೂರು ಶಾಂತಕುಮಾರ್ ನೇತೃತ್ವದ ಕಲ್ಬುರ್ಗಿಯ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಆಯೋಜನೆಗೊಳ್ಳ ಲಿರುವ ಬೃಹತ್ ಸಮಾವೇಶದಲ್ಲಿ ರೈತರ ಬಗ್ಗೆ ಕಾಳಜಿ ಉಳ್ಳ ಪ್ರಗತಿಪರ ಚಿಂತಕರು, ರೈತ ಸಂಘಟನೆಗಳ ಮುಖಂಡರು ಒಗ್ಗೂಡಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಸಲಾಗುವುದು ಎಂದರು.


ಸಮಾವೇಶದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ 10ಜನ ರೈತರಿಗೆ ಐಎಎಸ್ ಪದವಿಯೊಂದಿಗೆ ಸನ್ಮಾನೀಡಲಾಗುವುದು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು.


ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಕೃಷಿ ಸಾಲ ನೀತಿ ಬದಲಾಗಲಿ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಲಿ. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಭೂಮಿ ಮುಟ್ಟುಗೋಲು ಕಾಯ್ದೆ ರದ್ದಾಗಿ, ಕಬ್ಬಿನ ಎಫ್‍ಆರ್‍ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಕಠಿಣ ಕಾನೂನು ಜಾರಿಯಾಗಬೇಕು ಎಂಬಂತಹ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಿರಗಸೂರು ಶಂಕರ್ ತಿಳಿಸಿದರು.


ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ಉತ್ತರ ಭಾಗದ ರೈತರ ಧ್ವನಿಯಾಗಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾದರೆ ಎಕರೆಗೆ 25000, ನೀರಾವರಿ ಬೆಳೆಗೆ 40,000 ಹಾಗೂ ತೋಟಗಾರಿಕೆ ಬೆಳೆಗೆ 60,000 ಪರಿಹಾರ ಬಿಡುಗಡೆ ಮಾಡಬೇಕು ಇನ್ನು ಮುಂತಾದ ರೈತರ ಹಕ್ಕೋತ್ತಾಯಗಳನ್ನು ಸಲ್ಲಿಸಲಾಗುವುದು. ಆದ್ದರಿಂದ
ತಾಲೂಕಿನಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ರೈತರ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.


ಕಬ್ಬು ಬೆಳೆಗಾರರ ಸಂಘದ ಟೌನ್ ಅಧ್ಯಕ್ಷ ಅಪ್ಪಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್ ನಾಯಕ, ಕುರುಬೂರು ಪ್ರದೀಪ್, ವಾಚ್ ಕುಮಾರ್, ಬನ್ನಳ್ಳಿಹುಂಡಿ ರಾಜೇಂದ್ರ, ಯೋಗೇಶ್ ಕರೋಹಟ್ಟಿ, ಉಮೇಶ್, ವೆಂಕಟ್ರಾಜು ಚಿದರಹಳ್ಳಿ ಹಾಗೂ ಇತರರು ಇದ್ದರು.