ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಶಾಸಕರಾದ ರೂಪಕಲಾ ಸುಬ್ಬರೆಡ್ಡಿ ಅವಿರೋಧ ಆಯ್ಕೆ ?

ಕೋಲಾರ,ಮೇ,೨೨- ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಇಬ್ಬರು ಶಾಸಕರು ಅವಿರೋಧವಾಗಿ ಆಯ್ಕೆಯಾಗಲಿರುವುದು ಬಹುತೇಕ ಖಚಿತ ಎಂದು ವಿಶ್ವಾನೀಯ ಮೂಲಗಳು ಖಚಿತಪಡಿಸಿದೆ.


ನಾಮಪತ್ರಗಳ ಸಲ್ಲಿಕೆ ಹಾಗೂ ಪರಿಶೀಲನೆ ಕಾರ್ಯವು ಅಂತ್ಯಗೊಂಡಿದ್ದು ನಾಮಪತ್ರಗಳ ವಾಪಾಸಾತಿಗೆ ನಾಳೆ ಕೊನೆಯ ದಿನವಾಗಿದ್ದು ಮೇ ೨೮ ರಂದು ಚುನಾವಣೆ ನಡೆಯಲಿದೆ.


ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಶಾಸಕಿ ರೂಪಕಲಾ ಶಶಿಧರ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಶಾಸಕ ಎಸ್.ಎನ್ ಸುಬ್ಬರೆಡ್ಡಿ ಅವರುಗಳು ನಾಮಪತ್ರ ಸಲ್ಲಿಕೆ ಮಾಡಿದ್ದು ನಾಳೆ ಅವರ ಪ್ರತಿಸ್ವರ್ಧಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಗೊಳಿಸಲಿದ್ದಾರೆ.


ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಶಾಸಕರಾದ ಬಾಗೇಪಲ್ಲಿ ಎಸ್.ಎನ್.ಸುಬ್ಬಾರೆಡ್ಡಿ, ಕೆ.ಜಿ.ಎಫ್. ರೂಪಕಲಾ ಶಶಿಧರ್ ಹಾಗೂ ಕೋಲಾರದ ಕೊತ್ತೂರು ಜಿ.ಮಂಜುನಾಥ್ ಅವರುಗಳು ನಿರ್ದೇಶಕ ಸ್ಥಾನಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದು ಎಲ್ಲಾ ಶಾಸಕರ ನಾಮಪತ್ರಗಳು ಅಂಗೀಕೃತವಾಗಿದೆ. ಅದರೆ ಈ ಮೂವರು ಮಂದಿ ಶಾಸಕರಲ್ಲಿ ಇಬ್ಬರು ಶಾಸಕರ ಆವಿರೋಧ ಆಯ್ಕೆಯಾಗಲಿದ್ದು ಮತ್ತೊಬ್ಬರು ಚುನಾವಣೆಯನ್ನು ಎದುರಿಸ ಬೇಕಾಗ ಬಹುದು ಎನ್ನಲಾಗಿದೆ.


ಉಳಿದಂತೆ ೧೬ ಕ್ಷೇತ್ರಗಳಿಗೆ ಚುನಾವಣೆ ನಡೆಯಲ್ಲಿದೆ. ಎರಡು ಜಿಲ್ಲೆಯ ಟಿ.ಎ.ಪಿ.ಸಿ.ಎಂ.ಎಸ್. ಕ್ಷೇತ್ರದಿಂದ (ಮುಳಬಾಗಿಲು ಟಿ.ಎ.ಪಿ.ಸಿ.ಎಂ.ಎಸ್.) ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಚುನಾವಣಾ ಕಣದಲ್ಲಿದರುವುದು ಕುತೂಹಲಕಾರಿಯಾಗಿದೆ.