ಡಾ.ಜಿ.ಪರಮೇಶ್ವರ್ ಜನ್ಮದಿನಾಚರಣೆ: ಅಭಿಮಾನಿಗಳ ಸಂಘದಿಂದ ಸಾರ್ವಜನಿಕರಿಗೆ ಸಿಹಿ ವಿತರಣೆ

ಸಂಜೆವಾಣಿ ನ್ಯೂಸ್
ಮೈಸೂರು: ಆ.07:-
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹುಟ್ಟುಹಬ್ಬವನ್ನು ಅರಮನೆ ಆವರಣದಲ್ಲಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಮೈಸೂರು ಜಿಲ್ಲಾ ಡಾ.ಜಿ.ಪರಮೇಶ್ವರ್ ಅಭಿಮಾನಿಗಳ ಸಂಘದಿಂದ ವಿಶೇಷ ಪೂಜೆ ನೆರವೇರಿಸಿ, ಸಿಹಿ ಹಂಚುವುದರ ಮೂಲಕ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.


ಸಾರ್ವಜನಿಕರಿಗೆ ಸಿಹಿ ಹಂಚಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಕೆಲವು ವಿಶೇಷ ವ್ಯಕ್ತಿತ್ವಗಳು- ತಮ್ಮ ದೂರದೃಷ್ಟಿ, ನಾಯಕತ್ವ, ನಡವಳಿಕೆ, ಸೌಜನ್ಯ, ಸಾಮರಸ್ಯ ಮತ್ತು ಸಾಮಥ್ರ್ಯದ ಕಾರಣಕ್ಕೆ ಗಮನಸೆಳೆಯುತ್ತವೆ. ಡಾ.ಜಿ.ಪರಮೇಶ್ವರ್ ಇಂತಹ ಹಲವಾರು ವಿಶೇಷಣಗಳಿಂದ ಭೂಷಿತರಾದವರು ಎಂದರು.


ರಾಜ್ಯ ರಾಜಕಾರಣದಲ್ಲಿ ಎದ್ದು ಕಾಣುವ ವ್ಯಕ್ತಿಯಾಗಿರುವ ಜಿ.ಪರಮೇಶ್ವರ್ ಅವರು ತಮಗೆ ವಹಿಸಿದ ಎಲ್ಲಾ ಖಾತೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತ ಬಂದಿದ್ದಾರೆ.ಉನ್ನತ ಶಿಕ್ಷಣ ಸಚಿವರಾಗಿ ಇವರು ಕೈಗೊಂಡ ಕ್ರಾಂತಿಕಾರಿ ನಿಲುವುಗಳ ಕಾರಣಕ್ಕೆ ರಾಜ್ಯ ಶೈಕ್ಷಣಿಕವಾಗಿ ಬಹಳಷ್ಟು ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿ, ಜಿ.ಪರಮೇಶ್ವರ್ ಅವರಿಗೆ ರಾಜಕೀಯವಾಗಿ ಇನ್ನೂ ಉನ್ನತ ಸ್ಥಾನ ಸಿಗಲಿ ಎಂದರು.


ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನಗೌಡ, ಹಾಗೂ ವೈ ಎಸ್ ನಾಗರಾಜ್, ಡಾ.ಎಸ್.ಮರಿದೇವಯ್ಯ, ಮಣಿಕಂಠ, ಮಹೇಂದ್ರ ಕುಮಾರ್, ಕೋಟೆ ಮಂಜು, ಬಿ ಎಲ್ ಪುಟ್ಟಸ್ವಾಮಿ ( ವಿಕ್ರಾಂತ್ ), ಜೆ ಪುನೀತ್ ಮತ್ತಿತರ ಮುಖಂಡರು ಹಾಜರಿದ್ದರು.