ಸಂಜೆವಾಣಿ ನ್ಯೂಸ್
ಮೈಸೂರು: ಆ.14:- ಸಹಕಾರ ಕ್ಷೇತ್ರಕ್ಕೆ ಮಹತ್ವದ ತೆರಿಗೆ ಸೌಲಭ್ಯಗಳನ್ನು ಸೌಲಭ್ಯಗಳನ್ನು ನ್ಯೂನೀರುವ ಆದಾಯ ತೆರಿಗೆ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಯಶಸ್ವಿಯಾಗಿ ಅಂಗೀಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವು ದೇಶದಾದ್ಯಂತ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಮತ್ತು ಆರ್ಥಿಕ ಶಕ್ತಿಕರಣಕ್ಕೆ ಶಕ್ತಿಕರಣಕ್ಕೆ ಮಹತ್ವದ ಮಹತ್ವದ ಹೆಜ್ಜೆಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ. ಎಂ. ಬಿ. ಮಂಜೇಗೌಡ ರವರು ತಿಳಿಸಿದ್ದಾರೆ.
ಪರಿಷ್ಕೃತ ತೆರಿಗೆ ಸೌಲಭ್ಯಗಳು ಸಹಕಾರ ಸಂಸ್ಥೆಗಳ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡುತ್ತವೆ ಮತ್ತು ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಪ್ರೇರೇಪಿಸುತ್ತೇವೆ, ಈ ತೀರ್ಮಾನವು ಸಮಗ್ರ ಬೆಳವಣಿಗೆ, ಗ್ರಾಮೀಣ ಮತ್ತು ನಗರ ಸಹಕಾರ ಚಳುವಳಿಗೆ ನೂತನ ಶಕ್ತಿಯನ್ನು ನೀಡಿ ಲೋಕಸಭೆಯಲ್ಲಿ ಅಂಗೀಕರಿಸಿರುವುದಕ್ಕೆ ಶ್ಲಾಘನೀಯವನ್ನು ವ್ಯಕ್ತಪಡಿಸಿದರು.


























