
ಟೆಹ್ರಾನ್, ಜೂ.39- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇವರ ಶತ್ರುಗಳು” ಎಂದು ಕರೆದಿರುವ ಇರಾನ್‍ನ ಉನ್ನತ ಶಿಯಾ ಧರ್ಮಗುರು ಇಬ್ಬರ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಇಸ್ಲಾಮಿಕ್ ಗಣರಾಜ್ಯ ಇರಾನ್ ನಾಯಕತ್ವಕ್ಕೆ ಬೆದರಿಕೆ ಹಾಕುತ್ತಿರುವ ಅಮೆರಿಕ ಮತ್ತು ಇಸ್ರೇಲ್ ನಾಯಕರನ್ನು ಸೋಲಿಸಲು ವಿಶ್ವದಾದ್ಯಂತ ಮುಸ್ಲಿಮರು ಒಗ್ಗೂಡಬೇಕುಬೆಂದು ಕರೆ ನೀಡುವ ಜತೆಗೆ ಇಬ್ಬರು ನಾಯಕರ ವಿರುದ್ಧ ಧಾರ್ಮಿಕ ಆದೇಶ ಫತ್ವಾ ಹೊರಡಿಸಿದ್ದಾರೆ.
ಈ ಕುರಿತು ಶಿಯಾ ಧರ್ಮಗುರು ಗ್ರ್ಯಾಂಡ್ ಅಯತೊಲ್ಲಾ ನಾಸರ್ ಮಕರೆಮ್ ಶಿರಾಜಿ ಅವರು ಈ ಸಂಬಂಧ ಫತ್ವಾ ಹೊರಡಿಸಿದ್ದು ಮುಸ್ಲಿಂ ದೇಶಗಳು ಈ ಎರಡೂ ದೇಶಗಳ ವಿರುದ್ಧ ಒಂದಾಗಬೇಕು ಎಂದಿದ್ದಾರೆ.
ಬೆದರಿಕೆ ಹಾಕುವ ಯಾವುದೇ ವ್ಯಕ್ತಿ ಅಥವಾ ಆಡಳಿತವನ್ನು `ಯುದ್ಧನಾಯಕ’ ಅಥವಾ ‘ಮೊಹರೆಬ್’ ಎಂದು ಪರಿಗಣಿಸಲಾಗುತ್ತದೆ” ಎಂದು ಮಕರೆಮ್ ತೀರ್ಪಿನಲ್ಲಿ ಹೇಳಿದ್ದಾರೆ .
ಮೊಹರೆಬ್ ಎಂದರೆ ದೇವರ ವಿರುದ್ಧ ಯುದ್ಧ ಮಾಡುವ ವ್ಯಕ್ತಿ, ಮತ್ತು ಇರಾನಿನ ಕಾನೂನಿನ ಪ್ರಕಾರ, ಮೊಹರೆಬ್ ಎಂದು ಗುರುತಿಸಲ್ಪಟ್ಟವರು ಮರಣದಂಡನೆ, ಶಿಲುಬೆಗೇರಿಸುವಿಕೆ, ಅಂಗಾಂಗ ಕತ್ತರಿಸುವಿಕೆ ಅಥವಾ ಗಡಿಪಾರುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
“ಶತ್ರುವಿಗೆ ಮುಸ್ಲಿಮರು ಅಥವಾ ಇಸ್ಲಾಮಿಕ್ ರಾಷ್ಟ್ರಗಳು ನೀಡುವ ಯಾವುದೇ ಸಹಕಾರ ಅಥವಾ ಬೆಂಬಲ ಹರಾಮ್ ಅಥವಾ ನಿಷಿದ್ಧ. ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಈ ಶತ್ರುಗಳು ತಮ್ಮ ಮಾತುಗಳು ಮತ್ತು ತಪ್ಪುಗಳಿಗೆ ವಿಷಾದಿಸುವಂತೆ ಮಾಡುವುದು ಅವಶ್ಯಕ” ಎಂದು ಫತ್ವಾದಲ್ಲಿ ಹೇಳಲಾಗಿದೆ.
“ಮುಸ್ಲಿಂ ಕರ್ತವ್ಯವನ್ನು ಪಾಲಿಸುವ ಮುಸ್ಲಿಂ ತಮ್ಮ ಅಭಿಯಾನದಲ್ಲಿ ಕಷ್ಟ ಅಥವಾ ನಷ್ಟವನ್ನು ಅನುಭವಿಸಿದರೆ, ದೇವರು ಇಚ್ಛಿಸಿದರೆ, ದೇವರ ಮಾರ್ಗದಲ್ಲಿ ಹೋರಾಟಗಾರನಾಗಿ ಪ್ರತಿಫಲ ಪಡೆಯುತ್ತಾನೆ” ಎಂದು ಅದು ಹೇಳಿದೆ.
ಜೂನ್ 13 ರಂದು ಇಸ್ರೇಲ್ ಇರಾನ್‍ನಲ್ಲಿ ಬಾಂಬ್ ದಾಳಿ ನಡೆಸಿ ಉನ್ನತ ಮಿಲಿಟರಿ ಕಮಾಂಡರ್‍ಗಳು ಮತ್ತು ವಿಜ್ಞಾನಿಗಳನ್ನು ಕೊಂದ ನಂತರ ನಡೆದ 12 ದಿನಗಳ ಯುದ್ಧದ ನಂತರ ಧಾರ್ಮಿಕ ತೀರ್ಪು ನೀಡಿದೆ.
ಇರಾನ್‍ನ ಮೂರು ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕಾ ದಾಳಿ ಮಾಡಿದೆ. ಆ ಬಳಿಕ ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಜಾರಿ ಮಾಡಲಾಗಿದೆ.