Home ಜಿಲ್ಲೆ ಟಿ.ಹೆಚ್.ಎಂ.ಬಿ.ಯವರಿಂದ ಪ್ರಬಂಧ ಮಂಡನೆ

ಟಿ.ಹೆಚ್.ಎಂ.ಬಿ.ಯವರಿಂದ ಪ್ರಬಂಧ ಮಂಡನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ.15: ಉತ್ಸವದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಇವರು ಹಮ್ಮಿಕೊಂಡ  ವಿಜಯನಗರ ಅಧ್ಯಯನ ಕುರಿತು 28ನೇ ವಾರ್ಷಿಕ ವಿಚಾರ ಸಂಕೀರ್ಣದಲ್ಲಿ ಬಳ್ಳಾರಿ ಜಿಲ್ಲಾ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರು ಹಾಗೂ ಇತಿಹಾಸ ಸಂಶೋಧಕರು ಆದ ಟಿ ಹೆಚ್ ಎಂ ಬಸವರಾಜ್ ರವರು ವಿಜಯನಗರ ಸಾಮ್ರಾಜ್ಯದ ಶಾಸನೊಕ್ತ ತೆರಿಗೆಗಳು ಎಂಬ ಪ್ರಬಂಧವನ್ನು ಮಂಡಿಸಿದರು ಯಾವುದೇ ಆಡಳಿತ ವ್ಯವಸ್ಥೆಗೆ ಅತ್ಯಂತ ಮುಖ್ಯವಾದದ್ದು ರಾಜಪ್ರಭುತ್ವದಲ್ಲಿ ರಾಜನ ತೀರ್ಮಾನವೆ ಅಂತಿಮ ಹಣದ ಅಗತ್ಯವಿದ್ದಾಗ ರಾಜ ಏಕ ಪಕ್ಷಿಯವಾಗಿ ತೆರಿಗೆ ವಿಧಿಸುವ ಅಧಿಕಾರ ಪಡೆದಿದ್ದನು ರಾಜನ ಆದಾಯದ ಬಹುಬಾಗವು ಬರುತ್ತಿದೆ ರಾಜನು ದೇಶವನ್ನು ರಕ್ಷಿಸುವುದಕ್ಕೆ ಹಿಂದಿರುಗಿ  ಕೊಡುವ ಪ್ರತಿಫಲವೇ ತೆರಿಗೆಗಳು ಉತ್ಪನ್ನದ ಆರನೇ ತೆರಿಗೆಯ ರೂಪದಲ್ಲಿ ನೀಡಬೇಕಾಗಿತ್ತೆಂದು ತಿಳಿದು ಬರುತ್ತದೆ ಮಧ್ಯಕಾಲಿನ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಅವಲೋಕಿಸಿದಾಗ ರಾಜ್ಯಕ್ಕೆ ಆದಾಯವನ್ನು ತಂದುಕೊಡುವಲ್ಲಿ ತೆರಿಗೆಗಳು ಅತ್ಯಂತ ಮುಖ್ಯವಾಗಿದ್ದವು ಶಾಸನಗಳಲ್ಲಿ ಸುಂಕತರಿಗೆ ಹೇರೂ ತೆರೆ ಶುಲ್ಕ ಶ್ರೀಶೈ ಹರಿಕೆ ಆರಾಣೆ ಹೆಸರುಗಳಿಂದ ಸೂಚಿಸಲಾಗಿದೆ ಕಾಲ ಸರಿದಂತೆ ಹಳೆಯ ತೆರಿಗೆಗಳ ಬದಲು ಹೊಸ ತೆರಿಗೆಗಳು ಬಂದವು ವ್ಯಾಪಾರ ಸಂಬಂಧಿಕರಿಗೆ ಸಾರಿಗೆ ಸಾಗಾಣಿಕೆ ವೃತ್ತಿ ತೆರಿಗೆ ಧಾರ್ಮಿಕ ಶುಲ್ಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲಿನ ತೆರಿಗೆಗಳು ರಾಜ್ಯದ ಬೊಕ್ಕಸಕ್ಕೆ ಪ್ರಮುಖ ಆದಾಯ ಮೂಲಗಳಾಗಿದ್ದವು ಈ ಲೇಖನದಲ್ಲಿ ಶಾಸನಗಳಲ್ಲಿ ಉಲ್ಲೇಖ ಗೊಂಡಿರುವ ತೆರಿಗೆಗಳನ್ನು ವಿಶ್ಲೇಷಣಾ ಮಾಡಲಾಗಿದೆ ಅಸ್ಮಿತದಲ್ಲಿ ಪ್ರಮುಖ ತೆರಿಗೆಗಳ ಅಂದರೆ ಸಿದ್ದಾಯ ಧಾನ್ಯಾಯ ದಶ ವಂದ ವಡ್ಡಲಿ ಒಕ್ಕಲು ದೊರೆ ಬಾಲ ತೆರಿಗೆ ಒಡ್ಡಾಳ ಅರ್ಜುನ್ ಕಾ ಕೊಡವಿಸ ಬೀರುವಣ್ಣ ಮೂಲೆ ಸುಂಕ ಉಪ್ಪಿನ ಮೇಲಿನ ತೆರಿಗೆ ತಿಪ್ಪೇ ಸುಂಕ ಬನ್ನಿಯ ಕವಲಿ ಎದೆಯಾ ತೆರೆ ತೆರಿಗೆ ಕುದುರೆ ಮೇಲಿನ ಸುಂಕ ಕುದುರೆ ಗಾಡಿಯ ಸುಂಕ 12 ಏನ ಸುಂಕ ತೋಟದ ಎಲೆ ಅಡಿಕೆ ಮೇಲಿನ ತೆರಿಗೆ ಮನೆಯ ಮೇಲಿನ ತೆರಿಗೆ ಅಕ್ಕಸಾಲಿಗರ ಮೇಲಿನ ತೆರಿಗೆ ಪ್ರಾಣಿಗಳ ಮೇಲಿನ ಸುಂಕ ಮದುವೆ ಮೇಲಿನ ತೆರಿಗೆ ಇರುಕ್ಕಲ ಸುಂಕ ಗದ್ದೆ ಮೇಲಿನ ತೆರಿಗೆ ತೋಟದ ಮೇಲಿನ ತೆರಿಗೆ ತಳಭಾಗದ ತೆರಿಗೆ ಕೊಟ್ಟಲ್ಲಿ ಕೊಟ್ಟಲ್ಲಿನ ಮೇಲೆ ತೆರಿಗೆ ಮಾರಿದ ಕೊಂಡ ತೆರಿಗೆ ಸರಕುಗಳ ಮೇಲಿನ ತೆರಿಗೆ ಮೆಣಸಿನ ಮೇಲೆನೆ ತೆರಿಗೆ ಬೆಲ್ಲದ ಮೇಲೆ ತೆರಿಗೆ ಸಕ್ಕರೆ ಮೇಲಿನ ತೆರಿಗೆ ಅರಿಶಿಣ ಮೇಲಿನ ತೆರಿಗೆ ಅಜ್ವಾನದ ಮೇಲಿನ ತೆರಿಗೆ ಹಿಟ್ಟುದರೆ ಬಂದವನ ಉರಾಯಿ ಸುಂಕ ಮಾರಾಯರವನ ಸುಂಕ ಒಂಗೆದರೆ ಹಿರಿಯ ಮೇಲಿನ ತೆರಿಗೆ ಶೆಟ್ಟಿದರೆ ಸಂತೆ ಪನ್ನಾಯ ಮುಂತಾದವು ಕೃಷ್ಣದೇವರ ಕಾಲದಲ್ಲಿ ವಿಧಿಸುತ್ತಿದ್ದರು ಎಂದು ಶಾಸನಗಳ ಮುಖಾಂತರ ವಿದ್ವಾಂಸರ ಮುಂದೆ ಟಿ ಹೆಚ್ ಎಂ ಬಸವರಾಜ್ ರವರು ತಮ್ಮ ಪ್ರಬಂಧವನ್ನು ಮಂಡಿಸಿದರು ಈ ಸಂದರ್ಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಾದ ವಿರುಪಾಕ್ಷಿ ಪೂಜಾರಿ ಹಳ್ಳಿ ನಿರ್ದೇಶಕರಾದ ತೇಜಸ್ವರ ಮಂಜ ನಾಯಕ್ ಆಯುಕ್ತಾರಾದ ದೇವರಾಜ್ ಜಿಲ್ಲಾಧಿಕಾರಿಗಳಾದ ಕವಿತಾ ಮನಿಕೆರೆ ತಾಸಿಲ್ದಾರ್ ಶೃತಿ ಶಾಸಕ ಎಚ್ ಆರ್ ಗವಿಯಪ್ಪ ಶಾಸಕ ಶ್ರೀನಿವಾಸ್ ವಿವಿಧ ಸಂಶೋಧಕರು ಉಪಸ್ಥಿತರಿದ್ದರು