ಟಿಬಿ ಡ್ಯಾಂ 12 ಗೇಟ್ ಓಪನ್ನದಿಗೆ 35 ಸಾವಿರ ಕ್ಯೂಸೆಕ್ ನೀರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.03:
ತುಂಗಭದ್ರ ಜಲಾಶಯದಿಂದ ಇಂದು ಮಧ್ಯಾಹ್ನ 12 ಗಂಟೆಗೆ ಜಲಾಶಯದ 12 ಗೇಟುಗಳನ್ನು  ಎರೆಡು ವರೆ ಅಡಿ ಎತ್ತರಕ್ಕೆ ತೆರೆದು 35100 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಒಳ ಹರಿವಿನ‌ ಪ್ರಮಾಣ ಇನ್ನು ಹೆಚ್ಚುವ ಸಾಧ್ಯತೆ ಇದ್ದು. ನದಿಗೆ ಬಿಡುವ ನೀರಿನ ಪ್ರಮಾಣ 50 ಸಾವಿರಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ತುಂಗಭದ್ರ ಮಂಡಳಿ.
ಇಂದು ಜಲಾಶಯದ ಮಟ್ಟ 1625.25 ಅಡಿ ಇದ್ದು ಜಲಾಶಯದಲ್ಲಿ 78.31 ಟಿಎಂಸಿ ನೀರು ಸಂಗ್ರಹವಾಗಿದೆ.‌ಜಲಾಶಯಕ್ಕೆ 36 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.