ವಾಷಿಂಗ್ಟನ್, ಸೆ.16- ಚೀನಾದ ಸಾಮಾಜಿಕ ಮಾಧ್ಯಮ ಟಿಕ್‍ಟಾಕ್ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಚೀನಾ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಅಮೆರಿಕಾ ಹೇಳಿದೆ
ಟಿಕ್‍ಟಾಕ್ ಅನ್ನು ಅಮೆರಿಕನ್ ಕಾರ್ಯಾಚರಣೆಯ ಮಾಲೀಕತ್ವ ವಹಿಸಿಕೊಳ್ಳುವ ಕುರಿತು ಚೀನಾದೊಂದಿಗೆ ಅಮೆರಿಕಾ ಮಾತುಕತೆ ನಡೆಸಿದೆ. ಒಪ್ಪಂದ ಅಂತಿಮ ಹಂತ ತಲುಪಿದೆ ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಮ್ಯಾಡ್ರಿಡ್‍ನಲ್ಲಿ ನಡೆದ ವ್ಯಾಪಾರ ಮಾತುಕತೆಗಳಲ್ಲಿ ಅಮೆರಿಕದ ಮಾಲೀಕತ್ವಕ್ಕೆ ದಾರಿ ಮಾಡಿಕೊಡಲು ಟಿಕ್‍ಟಾಕ್ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಮಾತುಕತೆಯ ಅಂತಿಮ ಚೌಕಟ್ಟು ನೀಡಲಾಗಿದೆ ಎಂದಿದ್ದಾರೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಒಪ್ಪಂದವನ್ನು ಅಂತಿಮಗೊಳಿಲಿದ್ದಾರೆ ಎಂದು ಹೇಳಿರುವ ಅವರು ಅಮೆರಿಕಾ ಮತ್ತು ಚೀನಾದ ನಡುವೆ ಫಲಪ್ರದ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟಿಕ್ ಟಾಕ್ ವಿಷಯವಾಗಿ ಚೀನಾದ ಕಂಪನಿಯ ಜೊತೆ ಚರ್ಚೆ ನಡೆಸಲಾಗಿದೆ. ಈ ಒಪ್ಪಂದವನ್ನು ಅಂತಿಮವಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಟಿಕ್‍ಟಾಕ್‍ನ ಚೀನಾದ ಮಾಲೀಕರು ಟಿಕ್ ಟಾಕ್ ಅನ್ನು ಅಮೆರಿಕನ್ ಕಾರ್ಯಾಚರಣೆಗಳಿಗೆ ಖರೀದಿಸಲು ಮಾತುಲತೆ ನಡೆದಿದೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಟಿಕ್ ಟಾಕ್ ಖರೀದಿ ಮಾಡಲು ಅಮೇರಿಕಾ ಮುಂದಾಗಿದೆ
ಮ್ಯಾಡ್ರಿಡ್‍ನಲ್ಲಿರುವ ಅಮೆರಿಕಾದ ನಿಯೋಗದ ಭಾಗವಾಗಿರುವ ಅಮೇರಿಕಾ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್, ಒಪ್ಪಂದ “ನಾಯಕರ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದಿದ್ದಾರೆ.
ಚೀನಾದ ಉನ್ನತ ವ್ಯಾಪಾರ ಸಮಾಲೋಚಕ ಲಿ ಚೆಂಗ್‍ಗ್ಯಾಂಗ್, ತನ್ನ ದೇಶ ತನ್ನದೇ ಆದ ತತ್ವಗಳು ಮತ್ತು ಚೀನೀ ಕಂಪನಿಗಳ ಹಿತಾಸಕ್ತಿಗಳನ್ನು ಹಾಳುಮಾಡಿ ಅಮೆರಿಕಾದೊಂದಿಎ ಒಪ್ಪಂದ ಮಾಡಿಕೊಂಡಿಲ್ಲ ಮಾಡಿಕೊಳ್ಳುವುದೂ ಇಲ್ಲ ಎಂದು ಹೇಳಿದ್ದಾರೆ.

























