ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.12: ತಾಲ್ಲೂಕು ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಬಲದೇವ ಉಪಾಧ್ಯಕ್ಷರಾಗಿ ಲತಾಮಣಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಆಯ್ಕಗೆ ಶುಕ್ರವಾರ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ತರ?ನೇನಹಳ್ಳಿ ಬಲದೇವ ಹಾಗೂ ಉಪಾದ್ಯಕ್ಷ ಸ್ಥಾನ ಬಯಸಿ ಲತಾಮಣಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದನ್ನು ಬಿಟ್ಟರೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನೂತನ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.
ಕೆಲ ದಿನಗಳ ಹಿಂದೆ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಎ ವರ್ಗದಿಂದ ಮೂರು ಸ್ಥಾನ ಹಾಗೂ ಬಿ ವರ್ಗದಿಂದ ಎಲ್ಲಾ ಎಂಟು ಸ್ಥಾನಗಳನ್ನು ಕ್ಲೀನ್‍ಸ್ವೀಪ್ ಮಾಡಿ 14 ಕ್ಕೆ 11 ಸ್ಥಾನಗಳಲ್ಲಿ ಜಯಗಳಿಸಿ ಅಭೂತಪೂರ್ವ ಗೆಲುವನ್ನು ತಂದುಕೊಟ್ಟಿದ್ದ ಜೆಡಿಎಸ್ ಪಾಳಯಕ್ಕೆ ಟಿಎಪಿಸಿಎಂಎಸ್ ಚುನಾವಣೆ ಹುಮ್ಮಸ್ಸನ್ನು ನೀಡಿತ್ತು. ಎರಡನೇ ಬಾರಿಗೆ ಆಯ್ಕೆಯಾಗಿದ್ದ ಬಲದೇವ ಕಳೆದ ಬಾರಿಯೂ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಶಾಸಕ ಹೆಚ್.ಟಿ.ಮಂಜು ಹಾಗೂ ಜೆಡಿಎಸ್ ವರಿಷ್ಟರ ಸೂಚನೆಯಂತೆ ಬಲದೇವ ರನ್ನು ಅಧ್ಯಕ್ಷರನ್ನಾಗಿ ಮಾಡಲು ಎಲ್ಲಾ ನಿರ್ದೇಶಕರುಗಳು ಸಹಮತ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಚುನಾವಣೆಗೆ ಆಸ್ಪದ ನೀಡದಂತೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಬಲದೇವ ಮಾತನಾಡಿ ಜೆಡಿಎಸ್ ವರಿಷ್ಟರ ಆಶೀರ್ವಾದ ಹಾಗೂ ಶಾಸಕ ಹೆಚ್.ಟಿ,ಮಂಜು ರವರ ಸಹಕಾರದೊಂದಿಗೆ ರೈತಪರವಾದ ಪಕ್ಷಕ್ಕೆ ತಾಲ್ಲೂಕಿನ ಜನತೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದು ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಸಂಸ್ಥೆಯನ್ನು ಅಭಿವೃದ್ದಿಯ ಕಡೆಗೆ ತೆಗೆದುಕೊಂಡು ಹೋಗಲು ಶ್ರಮಿಸುತ್ತೇನೆ ಎಂದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ರೈತರ ಬಗ್ಗೆ ಅಪಾರವಾದ ಕಾಳಜಿಯಿರುವ ದೇವೇಗೌಡರ ಆಶೀರ್ವಾದ ಹಾಗೂ ಕುಮಾರಣ್ಣನವರ ಜನಪರ ಕಾರ್ಯಕ್ರಮಗಳು ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಇವೆ. ಸಂಸ್ಥೆ ರೈತರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಲಿ ಎಂದು ಶುಭಕೋರಿ ನೂತನ ಅಧ್ಯಕ್ಷ ಹಾಗೂ ಉಪಾದ್ಯಕ್ಷರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ಲತಾಮಣಿ, ನಿರ್ದೇಶಕರಾದ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಮೋಹನ್, ಹೆಚ್.ಟಿ.ಲೋಕೇಶ್, ಜ್ಯೋತಿ, ದಿಲೀಪ್‍ಕುಮಾರ್, ಮಂಜುನಾಥ್, ನಾಗರಾಜು, ಕಿಕ್ಕೇರಿ ಮಧು, ಮುಖಂಡರಾದ ಹೆಚ್.ಕೆ.ಅಶೋಕ್, ದಿನೇಶ್, ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್ ಸೇರಿದಂತೆ ಹಲವರಿದ್ದರು.




























