
ಸಂಜೆವಾಣಿ ವಾರ್ತೆ
ಹುಣಸೂರು: ಜ.20:- ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನ ಸಂಭ್ರಮಾಚರಣೆ ಹಾಗೂ ಅಯೋಧ್ಯ ರಾಮಮಂದಿರದ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಅಂಗವಾಗಿ ಹಿಂದೂ ಸಮಾಜೋತ್ಸವ ಶೋಭಾ ಯಾತ್ರೆ ಕಾರ್ಯಕ್ರಮವನ್ನು ಜನವರಿ 22 ರಂದು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತ ದೇಶದ ಐಕ್ಯತೆ ಹಿಂದೂ ಸಮಾಜದ ಸಂಸ್ಕೃತಿ ಮತ್ತು ರಾಷ್ಟ್ರ ಭಾವನೆಗಳನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಮುಖಾಂತರ ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ ಹಾಗೂ ನಾಗರಿಕ ಸಿಷ್ಟಾಚಾರ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜೋತ್ಸವ ಸಮಿತಿ ಪದಾಧಿಕಾರಿಗಳಾದ ರಘುವೀರ್, ವಿ.ಎನ್. ದಾಸ್, ಮಹದೇವ್ ಭಾಗಲ್, ರವಿಕುಮಾರ್ ಉಪಸ್ಥಿತರಿದ್ದರು.




























