ಬೆಂಗಳೂರು, ಸೆ. 16- ಕೇಂದ್ರ ಬಿಜೆಪಿ ಸರ್ಕಾರ ಪೆಹಲ್ಗಾಂ ಹುತಾತ್ಮರಿಗೆ ಹಾಗೂ ಭಯೋತ್ಪಾದನಾ ರಾಷ್ಟ್ರ ಪಾಕಿಸ್ತಾನದ ಉಗ್ರರ ದಾಳಿಯಲ್ಲಿ ಮೃತಪಟ್ಟ ಮುಗ್ಧ ಭಾರತೀಯರನ್ನ ಅಪಮಾನಿಸುವುದರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಕೂಡಲೇ ತನ್ನ ಸ್ಥಾನಕ್ಕೆ ನೈತಿಕ ಹೊಣೆ ಮತ್ತು ರಾಜೀನಾಮೆ ನೀಡಿ ಭಾರತೀಯರ ಕ್ಷಮೆ ಕೋರಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ನಕಲಿ ದೇಶ ಭಕ್ತಾರಾದ ಬಿಜೆಪಿ ಸರ್ಕಾರದವರು ಇಂದು ಪಾಕಿಸ್ತಾನದೊಂದಿಗೆ ಕೈಜೋಡಿಸಿ ಕ್ರಿಕೆಟ್ ಆಡುವುದರ ಮೂಲಕ ದೇಶದ ವೀರ ಯೋಧರನ್ನು ಹಾಗೂ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಮುಗ್ಧ ಕುಟುಂಬವನ್ನ ಅಪಮಾನಿಸಿದ್ದಾರೆ ಕೇವಲ ಹಣಕ್ಕಾಗಿ ಬಿಜೆಪಿ ಯಾವ ಅಂತಕ್ಕೂ ತಲುಪುತ್ತದೆ ಎಂಬುದಕ್ಕೆ ಈ ಕ್ರಿಕೆಟ್ ಪಂದ್ಯವೇ ಸಾಕ್ಷಿಯಾಗಿದೆ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಹಾಗೂ ಐಸಿಸಿ ಅಧ್ಯಕ್ಷ ದೇಶ ಕೂಡಲೇ ದೇಶದ ಜನರ ಕ್ಷಮೆ ಕೋರಬೇಕು ಹಾಗೂ ರಾಜೀನಾಮೆ ನೀಡಿ ತೊಲಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಆಗ್ರಹಿಸಿದರು.
ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದರ ಮೂಲಕ ಲಾಭಗಳಿಸುವ ಒಂದು ಅಂಶದ ಕಾರ್ಯಕ್ರಮ ಎಂಬುದು ಈಗ ಸಾಬೀತಾಗಿದೆ ಐಸಿಸಿ ಅಧ್ಯಕ್ಷ ನಾಗಿರುವ ಜಯ್ ಶಾ ಯಾರ ಪುತ್ರ ಎಂಬುದು ಜನರಿಗೆ ತಿಳಿದಿದೆ ಕೇಂದ್ರ ಗೃಹ ಸಚಿವನ ಪುತ್ರನಾಗಿ ಈ ರೀತಿ ಹಣಕ್ಕಾಗಿ ದೇಶದ ಗೌರವವನ್ನು ಕಾಪಾಡದೇ ದೇಶಕ್ಕೆ ಗೌರವ ತೋರಿಸಿರುವ ಇಂತಹ ನೀಚರನ್ನ ಕೂಡಲೇ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗೂ ದೇಶ ಭಾವಚಿತ್ರ ಸುಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂ ಇ ಐ ಅಧ್ಯಕ್ಷರಾದ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಎ.ಆನಂದ್,ಎಂ.ಎ.ಸಲೀಮ್,ಪ್ರಕಾಶ್,ಹೇಮರಾಜ್,ಆನಂದ್ ಕುಮಾರ್,ಕುಶಾಲ್ ಹರುವೇಗೌಡ,ಪುಟ್ಟರಾಜು,ಚಿನ್ನಿ ಪ್ರಕಾಶ್,ರಂಜಿತ್,ಉಮೇಶ್,ಪ್ರವೀಣ್ ರಾವ್,ಪವನ್,ಅಜಯ್ ಮೊಹಮ್ಮದ್ ಇಮ್ರಾನ್ ಬಾಣಾವರ,ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.


























