
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಜೂ.04: ನಗರದ ತೇರು ಬೀದಿಯಲ್ಲಿರುವ ಶ್ರೀ ಪಾರ್ಶ್ವನಾಥ ಜೈನ್ ಶ್ವೇತಂಬರ್ ಮಂದಿರದ ಶತಮಾನೋತ್ಸವದ ಅಂಗವಾಗ ನಿನ್ನೆ ವಿಮಲ್ ಸಾಗರ್ ಸುರೀಶ್ಚರ್ ಜೀ ಸಾನಿಧ್ಯದಲ್ಲಿ ಶಾಂತಿ ಸ್ನತ್ರ ಮಹಾ ಪೂಜೆ, ಅಭಿಷೇಕ, ಸ್ವಾಮೀಜಿಗಳ ಪ್ರವಚನ ನಡೆಯಿತು.
ಮಧ್ಯಾಹ್ನ 3 ಗಂಟೆಯಿಂದ ನಗರದ ಪುತ್ರಿಯರಿಂದ ವಿವಿಧ ಕಾರ್ಯಕ್ರಮ, ಸಂಜೆ ಸುಪ್ರಸಿದ್ಧ ಸಂಗೀತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ನಗರದ ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ ಮೊದಲಾದವರು ಆಗಮಿಸಿ ಆಶಿರ್ವಾದ ಪಡೆ್ರು.
ನಾಳೆ ಪಾರ್ಶ್ವನಾಥ ನ ಶೋಭಾಯಾತ್ರೆ ಬೆಳ್ಳಿಗೆ 8.30ಕ್ಕೆ ದೇವಸ್ಥಾನದಿಂದ ಪ್ರಾರಂಭ ಗೊಂಡು ಜೈನ್ ಮಾರ್ಕೆಟ್ , ಹೆಚ್.ಆರ್.ಜಿ.ಸರ್ಕಲ್, ಕಾಳಮ್ಮ ಬೀದಿ, ಬೆಂಗಳೂರು ರೋಡ್ ಮುಖಾಂತರವಾಗಿ ಜೈನ ಮಂದಿರಕ್ಕೆ ಬಂದು ತಲುಪಲಿದೆಂದು ಜೈನ ಸಂಘದ ಕಾರ್ಯದರ್ಶಿ ರೋಷನ್ ಜೈನ್ ತಿಳಿಸಿದ್ದಾರೆ.