
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಫೆ.02:- ಮುಂಬರುವ ವಿಧಾನಸಭಾ ಚುನಾವಣೆ ಮೊದಲೇ ಕುರುಬ ಸಮಾಜದ ಮುಖಂಡರು ಸೇರಿದಂತೆ ಅನೇಕರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿ ರುವುದರಿಂದ ಕ್ಷೇತ್ರದ ಜನತೆಯ ವಿಶ್ವಾಸ ಕಳೆದು ಕೊಂಡಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಬಸವೇಶ್ವರ ಬ್ಲಾಕ್ ನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ರಾಜ್ಯ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮಿಸುವ ಹಿನ್ನೆಲೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರದ ದುರಾಡಾಳಿದಿಂದ ಬೇಸತ್ತದಿರುವ ಜನತೆ ನಾನು ಹೋದ ಕಡೆ ಕಟುಕುಕರ ಕೈಗೆ ರಾಜ್ಯ ಸರ್ಕಾರದ ಅಧಿಕಾರ ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮುಂಬರುವ ತಾ.ಪಂ. ಹಾಗೂ ಜಿ.ಪಂ.ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಾ.ರಾ.ಮಹೇಶ್ ಭವಿಷ್ಯ ನುಡಿದರು.
ನನ್ನನ್ನು ರಾಜಕೀಯ ಕಾರಣಕ್ಕಾಗಿ ಕುರುಬ ಸಮಾಜ ವಿರೋಧಿ ಎಂದು ಕ್ಷೇತ್ರದ ಕೆಲ ಕುರುಬ ಸಮಾಜ ಮುಖಂಡ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಮಾಜಿ ಸಚಿವ ಸಾ.ರಾ.ಮಹೇಶ್, ಕರೋನದಲ್ಲಿ ಮೃತಪಟ್ಟಿದಾಗ ತಲಾ 25 ಸಾವಿರ ನೆರವು, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಮಾಡಿದಾಗ ಜಾರಿ ವ್ಯವಸ್ಥೆ ನೋಡಿ ಮಾಡಲಾಯಿತೇ ಎಂದು ಪ್ರಶ್ನ ಮಾಡಿದರು.
ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಶ್ರಮದಿಂದ ಇದುವರೆವಿಗೂ ಜೀವಂತವಾಗಿದ್ದು, ಯಾವ ಮುಖಂಡರು ಅಧಿಕಾರಕ್ಕೆಅಸೆ ಪಡೆದೆ ಪಕ್ಷದ ಉಳಿವಿಗಾಗಿ ಶ್ರಮ ವಹಿಸ ಬೇಕೆಂದರಲ್ಲದೆ, ಗೃಹ ಲಕ್ಷ್ಮಿ ಯೋಜನೆ ಮೂಲಕ ಎರಡು ಸಾವಿರ ನೀಡುವ ಕಾಂಗ್ರೆಸ್ ಸರ್ಕಾರ ಏಳು ಲಕ್ಷ ಕೋಟಿ ರೂ ಸಾಲ ಮಾಡಿ ತಲಾ ಒಂದು ಲಕ್ಣ ಸಾಲವನ್ನು ರಾಜ್ಯದ ಜನತೆ ಮೇಲೆ ವಿಧಿಸಿದೆ ಎಂದು ಕ್ಷೇತ್ರದ ಜನರಿಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ ,ಮಾಜಿ ಸದಸ್ಯರಾದ ಅಚ್ಯುತಾನಂದ, ಎಂ.ಟಿ.ಕುಮಾರ್, ಜೆಡಿಎಸ್ ರಾಜ್ಯ ಘಟಕದ ಪ್ರ.ಕಾರ್ಯದರ್ಶಿ ಚಂದ್ರಶೇಖರ್, ಪುರಸಭೆ ಸದಸ್ಯ ಉಮೇಶ್, ದಲಿತ ಮುಖಂಡ ಹನಸೋಗೆ ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷರಾದ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ತಾ.ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ತಾ.ಯುವ ಜೆಡಿಎಸ್ ಅಧ್ಯಕ್ಷ ಡಿ.ವಿ.ಗುಡಿ ಅಧ್ಯಕ್ಷ ಯೋಗೇಶ್ ಮಾತನಾಡಿದರು.
ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾದ ಎಂ.ಎಸ್.ಹರಿಚಿದಂಬರ್, ವಡ್ಡರಕೊಪ್ಪಲು ಮಹೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಗೀತಾಮಹೇಶ್, ಡಿ.ಕಾಂತರಾಜ್, ಮಾಜಿ ಸದಸ್ಯರಾದ ಕೆ.ಆರ್.ಗಿರೀಶ್, ಬಾರ್ ಶಿವಕುಮಾರ್, ತಾ.ಜಾದಳ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ಕಾರ್ಯದರ್ಶಿ ಭಾಗ್ಯಲಕ್ಷ್ನಿ, ಮೋಹನಕುಮಾರಿ,ಕಾರ್ಯದರ್ಶಿ ಪೂರ್ಣಿಮಾ, ಯುವ ಜೆಡಿಎಸ್ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ಜಾದಳ ಎಸ್.ಟಿ.ಘಕಟಕದ ಅಧ್ಯಕ್ಷ ಹಂಪಾಪುರ ಸೂರಿ, ತಾ.ಪಂ.ಮಾಜಿ ಅಧ್ಯಕ್ಷ ದೊಡ್ಡಕೊಪ್ಪಲು ನಾಗಣ್ಣ, ಕವಿತರವಿ, ಜೆಡಿಎಸ್ ಮುಖಂಡರಾದ ಗಂಧನಹಳ್ಳಿ ಜಲೇಂದ್ರ, ಬಾಲಾಜಿ ಗಣೇಶ್, ಅಂಗಡಿ ಶಿವಣ್ಣ, ಘನತೆ ಕುಮಾರ್, ಡೈರಿ ರವೀಶ್, ಹೊಸಹಳ್ಳಿ ಪುಟ್ಟರಾಜು, ಅನೀಪ್ ಗೌಡ, ಸಾ.ರಾ.ದೀಪು, ವಡ್ಡರಕೊಪ್ಪಲು ಶ್ರೀಧರ್, ಬಾಚಹಳ್ಳಿ ರಘು,ಮಂಚನಹಳ್ಖಿ ಗುರು, ದೇವೇಂದ್ರ, ಅನೀಲ್, ಚೌಕಹಳ್ಳಿ ಆನಂದ್ ಸೇರಿದಂತೆ ಸಾವಿರಾರು ಜನರು ಇದ್ದರು.


























