ಜೆಎಸ್‌ಡಬ್ಲ್ಯೂ ಟೌನ್‌ಶಿಪ್‌ನಲ್ಲಿ ಕರಡಿ ಸೆರೆ


ಸಂಜೆವಾಣಿ ವಾರ್ತೆ
ಬಳ್ಳಾರಿ,ನ.27:
ಸಂಡೂರಿನ ತೋರಣಗಲ್ಲಿನ ಜೆಎಸ್‌ಡಬ್ಲ್ಯೂ ಟೌನ್‌ಶಿಪ್ ನಲ್ಲಿ ಹಲವಾರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಕರಡಿಯನ್ನು ಮಂಗಳವಾರ ಸೆರೆ ಹಿಡಿಯಲಾಗಿದೆ.
ಬೆಂಗಳೂರಿನ ಮುಖ್ಯ ವನ್ಯಜೀವಿ ಪರಿಪಾಲಕರ ಅನುಮತಿ ಮೇರೆಗೆ ಬಳ್ಳಾರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಂಡೂರು ಪಶು ವೈದ್ಯಾಧಿಕಾರಿಗಳ ಸಮಕ್ಷಮದಲ್ಲಿ ಸೆರೆ ಹಿಡಿಯಲಾಗಿದೆ.
ಬನ್ನೇರುಘಟ್ಟ ವನ್ಯಜೀವಿ ಕರಡಿ ರಕ್ಷಣಾ ಕೇಂದ್ರ ಸಹಕಾರದೊಂದಿಗೆ ಅರವಳಿಕೆ ನೀಡಿ ಜಿಪಿಎಸ್ ಆಧಾರಿತ ರೇಡಿಯೋ-ಕಾಲರ್ ಐಡಿ ಅಳವಡಿಸಿ ಬೆಂಗಳೂರಿನ ಮುಖ್ಯ ವನ್ಯಜೀವಿ ಪರಿಪಾಲಕರ ಅನುಮತಿ ಪಡೆದು ಸೂಕ್ತವಾದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ.
ಕಾರ್ಯಾಚರಣೆಯನ್ನು ವಲಯ ಅರಣ್ಯಾಧಿಕಾರಿ, ಸಂಡೂರು ದಕ್ಷಿಣ ವಲಯ ಹಾಗೂ ಸಿಬ್ಬಂದಿಯವರು ಜೊತೆಗೂಡಿ ಕಾರ್ಯಗತಗೊಳಿಸಿದ್ದಾರೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ ಅವರು ತಿಳಿಸಿದ್ದಾರೆ.