
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:, ಜೂ.02 ಕೈಗಾರಿಕೆಗಳಿಗೆಂದು ಸ್ವಾಧೀನ ಪಡಿಸಿಕೊಂಡಿರುವ ಬಳ್ಳಾರಿ ಜಿಲ್ಲೆಯ ಕುಡಿತಿನಿ, ಹರಗಿನದೋಣಿ, ಜಾನೆಕುಂಟೆ, ವೇಣಿವೀರಪುರ, ಕೊಳಗಲ್ಲು, ಯರ್ರಂಗಳಿ , ಸಿದ್ದಮ್ಮನಹಳ್ಲಿ ಗ್ರಾಮಗಳ ಕೃಷಿ ಭೂಮಿಗೆ ಜಿಲ್ಲಾ ನ್ಯಾಯಾಲಯದ ತೀರ್ಪಿನಂತೆ ಪರಿಹಾರ ನೀಡುವ ಕುರಿತಾಗಿ ಚರ್ಚಿಸಲು ಸಭೆ ನಡೆಸಲು ನಾವು ನಮ್ಮ ತಾಳ್ಮೆಯನ್ನು ಜೂ. 9 ವರೆಗೆ ಕಾಯುತ್ತೇವೆ ಎಂದು
ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ , ಭೂ ಸಂತಸ್ತ್ರ ಹೋರಾಟ ಸಮಿತಿ ಕುಡಿತಿನಿ ಹಾಗು ಕನ್ನಡ ಪರ ಸಂಘಟನೆ ಗಳ ಜಂಟಿ ಸಮಿತಿ ತಿಳಿಸಿದೆ.
ನಗರದಲ್ಲಿಂದು ಸುದ್ದಿ ಗೋಷ್ಠಿ ನಡೆಸಿದ ಸಮಿತಿ ಮುಖಂಡ ಯು ಬಸವರಾಜ್, ಸತ್ಯಬಾಬು ಮೊದಲಾದವರು. ಕಳದ 14 ವರ್ಷದ ಹಿಂದೆ 3 ಬ್ರಹುಲತ್ ಕಾರ್ಖಾನೆ ಸ್ಥಾಪನೆಗಾಗಿ 12500 ಎಕರೆ ಭೂಮಿಯನ್ನು ಕೆ ಐ ಡಿ ಬಿ ಮುಖಾಂತರ ವಶಪಡಿಸಿಕೊಂಡಿದ್ದು. ಅಂದು ರೈತರಿಗೆ ಮೋಸದ ಭೂ ಬೆಲೆ ನಿಗಧಿ ಮಾಡಿ ಬಲವಂತವಾಗಿ ಸ್ವಾಧೀನ ಮಾಡಿಕೊಂಡಿತ್ತು.
ಇದರ ವಿರುದ್ದ ನ್ಯಾಯಯುತ ಬೆಲೆ ನೀಡಿಲು ಪಾದಯಾತ್ರ, ಕುಡಿತಿನಿ ಬಂದ್, ರಸ್ತೆ ತಡೆ ಮತ್ತು ಕಳೆದ 898 ದಿನಗಳಿಂದ ಹೋರಾಟ ಮಾಡುತ್ತಾ ಬಂದಿದೆ.
ಆದರೂ ಪ್ರಯೋಜನೆ ಆಗಿಲ್ಲ. ಅದಕ್ಕಾಗಿ ಸ್ಥಳೀಯ ಶಾಸಕರು, ಸಂಸದರು ತಾವು ನೀಡಿದ ಭರವಸೆಯಂತೆ ಈ ತಿಂಗಳ 9 ರೊಳಗೆ ಸಭೆ ಕರೆದು ಸೂಕ್ತ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.