
ಸಂಜೆವಾಣಿ ನ್ಯೂಸ್
ಮೈಸೂರು.ಫೆ.03:- ಶಿಕ್ಷಣವೆಂಬುದು ಪ್ರತಿ ವಿದ್ಯಾರ್ಥಿಗಳಿಗೂ ಅತಿ ಮುಖ್ಯ ಘಟ್ಟ. ಉತ್ತಮ ವಿದ್ಯಾಭ್ಯಾಸದೊಂದಿಗೆ ಸಾಧನೆಗೈದು ಉತ್ತಮ ಫಲಿತಾಂಶ ಪಡೆದು ಸಮಾಜದಲ್ಲಿ ಪ್ರಮುಖ ಹುದ್ದೆಗಳನ್ನು ಅಂಕರಿಸುವ ಮೂಲಕ ಹೆತ್ತವರಿಗೂ ಹಾಗೂ ಶಾಲಾ, ಕಾಲೇಜಿನವರಿಗೂ ಕೀರ್ತಿ ತರುವಂತಾಗಬೇಕೆಂದು ಸುದರ್ಶನ್ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಎನ್.ಶ್ರೀನಿವಾಸನ್ ಸಲಹೆ ನಿಡಿದರು.
ಇಲ್ಲಿನ ಹೂಟಗಳ್ಳಿಯ ಕೆಹೆಚ್‍ಬಿ ಕಾಲೋನಿ ಯಲ್ಲಿರುವ ಸುದರ್ಶನ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೇಯಲ್ಲಿ ಉನ್ನತ ಶೇಕಡಾವಾರು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದ ಅವಧಿಯಲ್ಲಿ ಓದಿನತ್ತ ತೋರಿಸುವ ಉದಾಸೀನತೆ ಭವಿಷ್ಯದಲ್ಲಿ ಭಾರೀ ತೊಂದರೆಗಳಿಗೆ ಕಾರಣವಾಗಬಹುದು. ಈ ದಿನಗಳಲ್ಲಿ ಒಂದು ನಿಮಿಷವೂ ಬಹಳ ಅಮೂಲ್ಯ. ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಅತ್ಯಂತ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳು ಇನ್ನಷ್ಟು ಕಷ್ಟಪಟ್ಟು ಓದಬೇಕು ಎಂದು ಕಿವಿಮಾತು ಹೇಳಿದರಲ್ಲದೇ, ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ಕಷ್ಟಕಾಲದಲ್ಲಿ ನೆರವಾದ ಸ್ನೇಹಿತರನ್ನು ಎಂದಿಗೂ ಮರೆಯಬಾರದು ಎಂದರು.
ಜೀವನದಲ್ಲಿ ಶಿಕ್ಷಣವು ಅತ್ಯಗತ್ಯವಾಗಿದ್ದು, ಅದು ಜ್ಞಾನ, ಆತ್ಮವಿಶ್ವಾಸ ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇದು ಉತ್ತಮ ವೃತ್ತಿಜೀವನ, ಆರ್ಥಿಕ ಭದ್ರತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಶಿಕ್ಷಣವು ಅಜ್ಞಾನವನ್ನು ಹೋಗಲಾಡಿಸಿ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ದಾರಿ ಮಾಡಿಕೊಡುತ್ತದೆ ಎಂದು ಶ್ರೀನಿವಾಸನ್ ಅವರು ಇದೇ ವೇಳೆ ಹೇಳಿದರು.
ಇದೇ ವೇಳೆ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಅಶ್ವಿನಿ, ಸೌಮ್ಯ ಎಂ.ಜೆ, ಭುವಂತ್ ಎನ್,ಗಗನ್ ಎಸ್, ಜಾನ್ಹವಿ, ರಮ್ಯಾ ಎಸ್,ಸುನೀತಾ ಎಸ್.ಆರ್, ಹರ್ಷಿತಾ.ಜಿ, ಸೋನಿ ಟಿ. ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನದ ಚೆಕ್ ಅನ್ನು ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸುರೇಶ್‍ಕುಮಾರ್, ಶಿಕ್ಷಣ ಸಂಘದ ನೇಹಾ ಪ್ರಕಾಶ್, ಮುಖ್ಯೋಪಧ್ಯಾಯಿನಿ ವಿನೂತ,ಮುಖ್ಯ ಶಿಕ್ಷಕಿ ಉಮಾ, ಎಫ್‍ಡಿಎ ಪ್ರವೀಣ್, ಸೇರಿದಂತೆ ಪೆÇೀಷಕರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




























