ಜಿ ಸ್ಕ್ವೆಯರ್ ನ ಜನಾರ್ಧನರೆಡ್ಡಿ  ಮನೆಗೆ ಬೆಂಕಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.24:  ನಗರದ ಬೆಳಗಲ್ಲು ರಸ್ತೆಯ ಜಿ.ಸ್ಕ್ವೆಯರ್  ಗೆ ಸಂಬಂಧಿಸಿದ ಲೇಔಟ್ ನಲ್ಲಿ  ಜನಾರ್ಧನರೆಡ್ಡಿ ನಿರ್ಮಿಸಿದ್ದ ಮಾಡೆಲ್ ಮನೆಗೆ ನಿನ್ನೆ ಸಂಜೆ ಬೆಂಕಿ ಹಚ್ಚಲಾಗಿತ್ತು.
ಈ ಲೇಔಟ್ ನಲ್ಲಿ ನಿವೇಶನ ಖರೀದಿ ಮಾಡುವವರು ಮನೆ ನಿರ್ಮಿಸಲು 60*60 ನಿವೇಶನದಲ್ಲಿ  ಮಾದರಿ(ಮಾಡೆಲ್) ಮನೆ ನಿರ್ಮಾಣ ಮಾಡಲಾಗಿತ್ತು. ಈ ಮನೆಗೆ  ನಿನ್ನೆ ಬೆಂಕಿಹಚ್ಚಲಾಗಿತ್ತು‌.  ದೂರದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಗಳು ಬರುವ ವೇಳೆಗೆ ದುಷ್ಕರ್ಮಿಗಳು ಓಡಿದ್ದಾರೆ. ಅಗ್ನಿ ಶಾಮಕ ವಾಹನ ಬಂದು ನಂದಿಸುವ ವೇಳೆಗೆ ಮನೆ ಬಹುತೇಕ ಸುಟ್ಟಿದೆ.
ವಿಷಯ ತಿಳಿದು ಎಸ್ಪಿ ಸುಮನ್ ಪೆನ್ನೇಕರ್, ಎಎಸ್ಪಿ ರವಿಕುಮಾರ್ ಸೇರಿದಂತೆ  ಪೊಲೀಸರು ಆಗಮಿಸಿ ಪರಿಶೀಲಿಸಿದರು. ಫೋರೆನ್ಸಿಕ್ ಟೀಂ ಸಹ ಬಂದಿತ್ತು. ಪೆಟ್ರೋಲ್ ಅಥವಾ ಡಿಸೇಲ್ ಬಳಸಲಾಗಿದೆಯಾ..? ಬೆಂಕಿ‌ ಹೇಗೆ ಹತ್ತಿರಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿತು.‌
ಜಿ ಸ್ಕ್ವೆಯರ್ ಸೈಟ್  ಇಂಜಿಯರ್  ರಿಜ್ವಾನ್ ಮತ್ತು ಮಾಡೆಲ್ ಹೌಸ್ ಮತ್ತು ಲೇಔಟ್ ಸುಪರ್ ವೈಸರ್ ಇನ್ರಾನ್  ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.‌