ಜಿ ರಾಮ್ ಜಿ ಮತ್ತು ಬೀಜ ಕಾಯ್ದೆ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಲು ಕರೆ

ಸಂಜೆವಾಣ ವಾರ್ತೆ

ಬಳ್ಳಾರಿ, ಡಿ.24: ನಗರದಲ್ಲಿ ಇಂದು ಎಐಕೆಕೆಎಂಎಸ್ ರೈತ ಸಂಘಟನೆಯ ಕಚೇರಿಯಲ್ಲಿ ರೈತರ ಜಿಲ್ಲಾ ಮಟ್ಟದ ಶಿಬಿರವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಮಾತನಾಡುತ್ತಾ, ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ. ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗಾಗಿ ವಶಪಡಿಸಿಕೊಂಡು, ರೈತರನ್ನು ದಿವಾಳಿಯನ್ನಾಗಿ ಮಾಡಲು ಹೊರಟಿವೆ. ಇತ್ತೀಚೆಗೆ ಕೇಂದ್ರ ಬಿಜೆಪಿ ಸರ್ಕಾರ ಬೀಜ ಕಾಯ್ದೆಯನ್ನು ಜಾರಿಗೆ ತರುವುದರ ಮೂಲಕ ಬೀಜಗಳ ಮೇಲಿನ ಸಂಪೂರ್ಣ ಹಿಡಿತವನ್ನು ಏಕಸೌಮ್ಯ ಬಂಡವಾಳಶಾಹಿ ಕಂಪನಿಗಳ ಕೈಗೊಪ್ಪಿಸುತ್ತಿದೆ ಮತ್ತು ನರೇಗಾ ಯೋಜನೆ ತಿದ್ದುಪಡಿ ಮಾಡಿ, ಜಿ ರಾಮ್ ಜಿ ಅನ್ನುವ ಯೋಜನೆಯ ಹೆಸರಿನ ಮೇಲೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಸಿಗುತ್ತಿದ್ದ ಕನಿಷ್ಠ ಜೀವನ ಭದ್ರತೆಯನ್ನು ಕಿತ್ತುಕೊಳ್ಳಲು ಮುಂದಾಗಿದೆ, ಹಾಗಾಗಿ ಇಂದು ರೈತರು ಮತ್ತು ಕೃಷಿ ಕಾರ್ಮಿಕರು ಇಂತ ಜನ ವಿರೋಧಿ, ರೈತ ಕಾರ್ಮಿಕ ವಿರೋಧಿ ಸರ್ಕಾರಗಳ ನೀತಿಗಳ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯರು ಈ.ಹನುಮಂತಪ್ಪ, ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಉಪಾಧ್ಯಕ್ಷ ಬಸಣ್ಣ ರೈತರಾದ ಮಾರೆಪ್ಪ, ಪಂಪನಗೌಡ, ಮಲ್ಲಪ್ಪ, ಹನುಮಂತಪ್ಪ, ಹೊನ್ನೂರಪ್ಪ, ಬಸವನ ಗೌಡ, ಬಸವರಾಜ್ ಸೇರಿದಂತೆ ಹಲವಾರು ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.