ಜಿಲ್ಲೆಯಲ್ಲಿ ಮುಂದುವರೆದ ಮಳೆ ಅವಾಂತರಸಿಡಿಲ ಹೊಡೆತಕ್ಕೆ ಓರ್ವ ಸಾವು 5 ಜನರಿಗೆ ಗಾಯ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.21:  ಕಳೆದ ಎರಡ್ಮೂರು ದಿನಗಳಿಂದ ಬಳ್ಳಾರಿ ಮತ್ತು ವಿಜಯನಗರದಾದ್ಯಂತ ಕೃತಿಕ ಮಳೆಯ ಹೊಡೆತಕ್ಕೆ ಬೆಳೆ ಹಾನಿ ಜೊತೆಗೆ ಗಿಡ ಮರಗಳು ಉರುಳಿ ಬಿದ್ದಿವೆ. ಮಳೆಯ ರೌದ್ರ ನರ್ತನಕ್ಕೆ ಜನರು ಥಂಡ ಹೊಡೆದಿದ್ದಾರೆ ಇನ್ನೂ ಒಂದು ವಾರಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರೇಂಜ್ ಅಲರ್ಟ್ ಘೋಷಿಸಿಸಿದೆ  ಹವಾಮಾನ ಇಲಾಖೆ
ವಿಜಯನಗರ ಜಿಲ್ಲೆಯಲ್ಲಿನ ಧಾರಾಕಾರ ಮಳೆಯಿಂದ ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರತಿಯುತ್ತಿವೆ. ರಭಸವಾಗಿ ಹರಿಯೋ ಮಳೆ ನೀರಿಗೆ ಹೊಸಪೇಟೆ ತಾಲೂಕಿನ ಜಿ. ನಾಗಲಾಪುರಬಳಿಯ ಬ್ಯಾಲಕುಂದಿ ಗ್ರಾಮದ ನಡುವಿನ ಹಳ್ಳದಲ್ಲಿ ಹಸು ಒಂದು ಈಜಲು ಆಗದೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಇನ್ನು ಹೊಸಪೇಟೆ ತಾಲೂಕಿನ ಬೈಲುವದ್ದಿಗೆರಿ ಗ್ರಾಮದ ಬಳಿಯ ರೈಲ್ವೆ ನಿಲ್ದಾಣದ ಬಳಿ ವಿದ್ಯುತ್ ಕಾಮಗಾರಿಗಾಗಿ ಆಗಮಿಸಿದ್ದ ನೌಕರರು   ವಿದ್ಯುತ್ ಇಲಾಖೆಯ ಮಹೇಂದ್ರ ಗೂಡ್ಸ್ ವಾಹನದಲ್ಲಿ ಹಳ್ಳ ದಾಟುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಕೊಚ್ಚಿ ಹೋಗುತ್ತಿದ್ದಾಗ ಸ್ಥಳೀಯ ಜನತೆ ಕೂಡಲೇ ಕಾರ್ಯಪ್ರವೃತ್ತರಾಗಿ ನೀರಿನ ರಭಸದಲ್ಲಿ  ಕೊಚ್ಚಿ ಹೋಗುತ್ತಿದ್ದ ವಾಹನ
ವನ್ನು ರಕ್ಷಿಸಿದ್ದಾರೆ. 
ಇತ್ತ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಹಳ್ಳ ತುಂಬಿ ಹರಿಯುತ್ತಿದ್ದರೂ ಲೆಕ್ಕಿಸಿದೆ ಜನತೆ ಹಳ್ಳದಲ್ಲೇ ಸಂಚಾರ ಮಾಡ್ತಿದ್ದಾರೆ.  ನರೇಗಾ ಕೆಲಸಕ್ಕೆ ಹೋಗುವ ಕಾರ್ಮಿಕರೂ ಇದೇ ಹಳ್ಳ ದಾಟಿಕೊಂಡು ಹೋಗಬೇಕು ಬ್ಯಾಲೆನ್ಸ್ ಮಾಡಿಕೊಂಡು ಅಪಾಯದಲ್ಲೇ ಹಳ್ಳ ದಾಟುತ್ತಿದ್ದಾರೆ ನರೇಗಾ ಕಾರ್ಮಿಕರು
ಸಿಡಿಲು ಹೊಡೆತ:
ಸಿಡಿಲ ಹೊಡೆತದಿಂದ  ಕುರಿಗಾಹಿ ಮೃತ ಪಟ್ಟಿದ್ದು, 5 ಜನ ಗಾಯಗೊಂಡಿರುವ ಘಟನೆ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ  ನಡೆದಿದೆ. ದೇವಲಾಪುರ ಗ್ರಾಮದ ರಾಜನಮಟ್ಟಿ ಮತ್ತು ಸುಗ್ಗೇನಹಳ್ಳಿ ರಸ್ತೆಯ ಹಿರೇಹೊಲದಲ್ಲಿ ಕುರಿ ಕಾಯುವ ವೇಳೆ ಸಿಡಿಲು ಬಡಿದಿದ್ದು ಆರು ಜನ ಕುರಿಗಾಹಿಗಳು ಗಂಭೀರ ಸ್ಥಿತಿಯಲ್ಲಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆರು ಜನರನ್ನು ಬಳ್ಳಾರಿಯ ವಿಮ್ಸ್ ಗೆ ದಾಖಲಿಸಿತ್ತು. ಇವರಲ್ಲಿ ಕುರಿ ಕರಿಬಸಪ್ಪ  (23) ಎನ್ನುವಾತ   ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಸಿಡಿಲು ಆಘಾತಕ್ಕೆ ಒಳಗಾದ ಕುರಿ ದೊಡ್ಡಬಸಪ್ಪ(50), ಕುರಿ ಪಂಪಾಪತಿ(18), ತಿಪ್ಪೇಸ್ವಾಮಿ(22), ಹೇಮಣ್ಣ(35), ಮಣಿಕಂಠ(18)ಇವರು ವಿಮ್ಸ್ ನ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಘಟನೆಯಲ್ಲಿ 5 ಆಡುಗಳು ಮೃತ ಪಟ್ಟಿವೆ.