Home ಜಿಲ್ಲೆ ಮೈಸೂರು ಜಿಲ್ಲೆಯಲ್ಲಿ ಎಸ್‍ಐಆರ್ ಶೇ.83.90 ರಷ್ಟು ಸಾಧನೆ

ಜಿಲ್ಲೆಯಲ್ಲಿ ಎಸ್‍ಐಆರ್ ಶೇ.83.90 ರಷ್ಟು ಸಾಧನೆ

ಸಂಜೆವಾಣಿ ನ್ಯೂಸ್
ಮೈಸೂರು, ಜು.10:-
ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಜು.8ರವರೆಗೆ ಶೇ.83.90 ಪ್ರಗತಿಯಾಗಿದೆ.


ಜಿಲ್ಲೆಯಲ್ಲಿ ಒಟ್ಟು 27,99,693 ಮತದಾರರಿದ್ದು, ಈ ಪೈಕಿ ಇದುವರೆಗೆ 23,49,006 ಎನ್ಯುಮರೇಷನ್ ಫಾರ್ಮ್‍ಗಳನ್ನು ವಿತರಿಸಲಾಗಿದೆ. ಜಿಲ್ಲೆಯ ಒಟ್ಟು 2,915 ಮತಗಟ್ಟೆಗಳ ಪೈಕಿ 927 (ಶೇ.31.80) ಮತಗಟ್ಟೆಗಳಲ್ಲಿ ಈಗಾಗಲೇ ಶೇ.100ರಷ್ಟು ಫಾರ್ಮ್‍ಗಳನ್ನು ವಿತರಣೆ ಮಾಡಲಾಗಿದೆ. ಇನ್ನುಳಿದಂತೆ 726 (ಶೇ.24.90) ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಫಾರ್ಮ್‍ಗಳ ವಿತರಣೆಯಾಗಿದ್ದು, ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗಿದ್ದು, ಜಿಲ್ಲೆಯ 11,419 ಮತದಾರರು ಸ್ವತಃ ತಾವಾಗಿಯೇ ಆನ್‍ಲೈನ್ ಮೂಲಕ ಫಾರ್ಮ್‍ಗಳನ್ನು ಸಲ್ಲಿಸಿದ್ದಾರೆ. ವಿತರಿಸಲಾದ ಫಾರ್ಮ್‍ಗಳ ಪೈಕಿ ಇದುವರೆಗೆ ಒಟ್ಟು 1,13,643 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.


ಕ್ಷೇತ್ರವಾರು ವಿವರ: ಚಾಮುಂಡೇಶ್ವರಿ ಕ್ಷೇತ್ರದ ಒಟ್ಟು 3,57,327 ಮತದಾರರ ಪೈಕಿ 2,95,876 ನಮೂನೆಗಳ ವಿತರಣೆಯಾಗಿದ್ದು, 8,864 ಗಣಕೀಕರಣವಾಗಿದೆ. ನರಸಿಂಹರಾಜದ ಒಟ್ಟು 3,27,898 ಮತದಾರರ ಪೈಕಿ 2,14,468 ನಮೂನೆಗಳನ್ನು ವಿತರಿಸಿದ್ದು, 7,424 ಗಣಕೀಕರಣ ಪೂರ್ಣವಾಗಿದೆ. ಚಾಮರಾಜ ಕ್ಷೇತ್ರದ ಒಟ್ಟು 2,64,045 ಮತದಾರರ ಪೈಕಿ 1,76,266 ನಮೂನೆಗಳ ವಿತರಣೆಯಾಗಿದ್ದು, 2,514 ಗಣಕೀಕರಣವಾಗಿದೆ.
ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 2,63,632 ಮತದಾರರ ಪೈಕಿ 1,73,510 ನಮೂನೆಗಳ ವಿತರಣರ ಮಾಡಲಾಗಿದ್ದು, 2,300 ಗಣಕೀಕರಣಗೊಂಡಿದೆ. ಹುಣಸೂರಿನ ಒಟ್ಟು 2,53,248 ಮತದಾರರ ಪೈಕಿ 2,46,013 ನಮೂನೆ ವಿತರಣೆಯಾಗಿ, 16,288 ಗಣಕೀಕರಣ ಪೂರ್ಣವಾಗಿದೆ. ವರುಣಾದ ಒಟ್ಟು 2,42,363 ಮತದಾರರ ಪೈಕಿ 2,26,474 ನಮೂನೆ ವಿತರಿಸಿ, 13,964 ಗಣಕೀಕರಣಗೊಂಡಿದೆ. ಹೆಚ್.ಡಿ.ಕೋಟೆಯ ಒಟ್ಟು 2,34,521 ಮತದಾರರ ಪೈಕಿ 2,21,159 ನಮೂನೆಗಳ ವಿತರಣೆಯಾಗಿ 16,258 ಗಣಕೀಕರಣ ಮಾಡಲಾಗಿದೆ.


ನಂಜನಗೂಡಿನ ಒಟ್ಟು 2,23,279 ಮತದಾರರ ಪೈಕಿ 2,09,745 ನಮೂನೆಗಳ ವಿತರಣೆ ಮಾಡಿ, 11,945 ಗಣಕೀಕರಣ ಆಗಿದೆ. ಕೃಷ್ಣರಾಜನಗರ ಕ್ಷೇತ್ರದ ಒಟ್ಟು 2,20,922 ಮತದಾರರ ಪೈಕಿ 1,99,931 ನಮೂನೆಗಳ ವಿತರಣೆ ಮಾಡಲಾಗಿದ್ದು, 8,323 ಗಣಕೀಕರಣವಾಗಿದೆ. ತಿ.ನರಸೀಪುರದ ಒಟ್ಟು 2,12,752 ಮತದಾರರ ಪೈಕಿ 1,90,566 ನಮೂನೆಗಳ ವಿತರಣೆಯಾಗಿ, 9,003 ಗಣಕೀಕರಣ ಮಾಡಲಾಗಿದೆ. ಪಿರಿಯಾಪಟ್ಟಣ ಕ್ಷೇತ್ರದ ಒಟ್ಟು 1,99,706 ಮತದಾರರ ಪೈಕಿ 1,94,998 ನಮೂನೆಗಳ ವಿತರಣೆ ಮಾಡಿ, 16,760 ಅರ್ಜಿಗಳ ಗಣಕೀಕರಣ ಪೂರ್ಣಗೊಳಿಸಲಾಗಿದೆ.


4,327 ಜನ ಎಎಸ್‍ಡಿಡಿಒ ಪಟ್ಟಿಗೆ: ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬಿಎಲ್‍ಒಗಳು ನಡೆಸುತ್ತಿರುವ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಪಟ್ಟಿಯಲ್ಲಿದ್ದ ಹಲವು ದೋಷಗಳನ್ನು ಪತ್ತೆ ಹಚ್ಚಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 4,327 ಜನರನ್ನು ಎಎಸ್‍ಡಿಡಿಒ (ಗೈರು, ಸ್ಥಳಾಂತರ, ಮೃತ, ನಕಲಿ, ಇತರೆ) ಪಟ್ಟಿಗೆ ಗುರುತಿಸಲಾಗಿದೆ. ಇದರಲ್ಲಿ ಗೈರುಹಾಜರಾದ ಮತದಾರರು 2,873, ಶಾಶ್ವತವಾಗಿ ಸ್ಥಳಾಂತರಗೊಂಡವರು 1,033, ಮರಣ ಹೊಂದಿದ ಮತದಾರರು 362, ಈಗಾಗಲೇ ಹೆಸರು ನೋಂದಾಯಿತವಾಗಿರುವವರು 51 ಹಾಗೂ ಇತರ 8 ಪ್ರಕರಣಗಳು ಸೇರಿವೆ. ಅರ್ಹವಲ್ಲದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ, ಮುಂಬರುವ ದಿನಗಳಲ್ಲಿ ಅತ್ಯಂತ ನಿಖರವಾದ ಹಾಗೂ ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.