
ಸಂಜೆವಾಣಿ ವಾರ್ತೆ
ಹೊಸಪೇಟೆ.ಮೇ.25 ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಜರುಗಿದ ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ಸಭೆಯಲ್ಲಿ ಸಂಘಕ್ಕೆÀ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಘದ ನೂತನ ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಡಿ.ರಾಮಲಿಂಗಪ್ಪ, ಜಿಲ್ಲಾ ಅಧ್ಯಕ್ಷರನ್ನಾಗಿ ನಿವೃತ್ತ ಎಎಸ್ಐ ಹೆಚ್.ಶ್ರೀನಿವಾಸ್, ಖಜಾಂಚಿಯಾಗಿ ಸಾರಿಗೆ ಇಲಾಖೆ ನಿವೃತ್ತ ನೌಕರ ಎಸ್. ಮನೋಹರ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ವೀರೇಂದ್ರ ನಾಗಲದಿನ್ನಿ, ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮರಿಯಮ್ಮನಹಳ್ಳಿಯ ನಿವೃತ್ತ ಶಿಕ್ಷಕ ಕೆ.ನಾಗರಾಜ, ಕೂಡ್ಲಿಗಿ ತಾಲೂಕಿನ ನ್ಯಾಯಾಂಗ ಇಲಾಖೆಯ ಕೃಷ್ಣವೇಣಿ, ಹಗರಿಬೊಮ್ಮನಹಳ್ಳಿಯ ರಾಮಕೃಷ್ಣ, ಕೊಟ್ಟೂರಿನ ದೈಹಿಕ ಶಿಕ್ಷಕ ರಮೇಶ್ ಹಾಗೂ ಹೂವಿನಹಡಗಲಿಯ ಉಪನ್ಯಾಸಕಿ ಕು.ನಾಗವೇಣಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಸಮಾಜದ ಮುಖಂಡ ಸೂರ್ಯ ನಾರಾಯಣ, ಮುಖ್ಯ ಶಿಕ್ಷಕಿ ಪಿ.ಎಲ್. ಉಷಾ, ರಾಜಶೇಖರ್ ಪತ್ರಕರ್ತ ಸಿ.ಕೆ.ನಾಗರಾಜ್, ಮಹೇಶ್, ಗಿರೀಶ್, ಸಂಧ್ಯಾರಾಣಿ, ಡಾ.ಗುಣಪ್ರಿಯ, ದೀಪಕ್ ಇತರರು ಭಾಗವಹಿಸಿದ್ದರು.

























