Home ಜಿಲ್ಲೆ ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ ಭೇಟಿ: 29.97 ಲಕ್ಷ ಮೌಲ್ಯದ ವಸ್ತು ವಶ

ಜಿಲ್ಲಾ ಪೊಲೀಸರ ಭರ್ಜರಿ ಭೇಟಿ: 29.97 ಲಕ್ಷ ಮೌಲ್ಯದ ವಸ್ತು ವಶ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.10:-
ಕಳೆದೆರೆಡು ತಿಂಗಳಲ್ಲಿ ಜಿಲ್ಲಾ ವ್ಯಾಪ್ತಿ ಅಪರಾಧ ಕೃತ್ಯಗಳ ಬೆನ್ನು ಹತ್ತಿದ ಜಿಲ್ಲಾ ಪೆÇಲೀಸರ ತಂಡ 29.97 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಎರಡು ತಿಂಗಳಲ್ಲಿ 24 ಅಪರಾಧ ಕೃತ್ಯಗಳು ಜರುಗಿದ್ದು, ಇವುಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅದರಂತೆ ಪೆÇಲೀಸರು ಅಷ್ಟೂ ಪ್ರಕಕರಣ ತನಿಖೆ ನಡೆಸಿ 29.97 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, 14 ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಎನ್‍ಡಿಪಿಎಸ್ ಕಾಯಿದೆಯಡಿ 55 ಪ್ರಕರಣ ದಾಖಲಿಸಿಕೊಂಡು 1ಕೆಜಿ 860 ಗ್ರಾಂ ತೂಕದ ಗಾಂಜಾ ಮತ್ತು 0.10 ಎಂಎಲ್ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಜತೆಗೆ ಲಾಟರಿ ಕಾಯಿದೆಯಡಿ 14 ಪ್ರಕರಣ ದಾಖಲಿಸಿಕೊಂಡು 2.26 ಲಕ್ಷ ರೂ.ವೌಲ್ಯದ ಲಾಟರಿ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತಂಡ ರಚನೆ: ಜಿಲ್ಲೆಯ ಪ್ರತಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ಸ್‍ಪೆಕ್ಟರ್, ಎಸ್‍ಐ ನೇತೃತ್ವದಲ್ಲಿ ಅಪರಾಧ ಪತ್ತೆಗಾಗಿ ನಾಲ್ಕರಿಂದ ಐದು ಮಂದಿ ಸಿಬ್ಬಂದಿಯ ಪ್ರತ್ಯೇಕ ತಂಡ ರಚಿಸಲಾಗಿದ್ದು, ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಪತ್ತೆಗೆ ಈ ತಂಡ ಕಾರ್ಯಾಚರಣೆ ನಡೆಸುವ ಮೂಲಕ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು. 9 ಪ್ರಕರಣಗಳಲ್ಲಿ 10.46 ಲಕ್ಷ ರೂ. ಮೌಲ್ಯದ 279 ಗ್ರಾಂ. ಚಿನ್ನಾಭರಣ, 5 ಪ್ರಕರಣಗಳಲ್ಲಿ 3.76 ಲಕ್ಷ ರೂ. ನಗದು, 6 ಪ್ರಕರಣಗಳಲ್ಲಿ 14.33 ಲಕ್ಷ ರೂ. ಮೌಲ್ಯದ 8 ವಾಹನ ವಶ ಪಡಿಸಿಕೊಳ್ಳಲಾಗಿದೆ. 3 ಪ್ರಕರಣಗಳಲ್ಲಿ 82 ಸಾವಿರ ರೂ. ಮೌಲ್ಯದ ಹಾರ್ಡ್‍ವೇರ್ ಮತ್ತು ಎಲೆಕ್ಟ್ರೀಕ್ ವಸ್ತು ವಶ ಪಡಿಸಿಕೊಂಡಿದ್ದರೆ, 1 ಪ್ರಕರಣದಲ್ಲಿ 58 ಸಾವಿರ ರೂ.ಮೌಲ್ಯದ 2 ಜಾನುವಾರು ವಶಕ್ಕೆ ಪಡೆಯಲಾಗಿದೆ.

ಮಾದಕ ವಸ್ತು ಮುಕ್ತ: ಮೈಸೂರು ಜಿಲ್ಲೆಯಲ್ಲಿ ಮಾದಕ ವಸ್ತು ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಶೇಷವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದುಘಿ, 56 ಮಂದಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಗಾಂಜಾ ಪತ್ತೆಯಾಗಿರುವುದೇ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ಜೈಲಿನಲ್ಲಿದ್ದಾಗಲೇ ಕಳ್ಳತನಕ್ಕೆ ಸ್ಕೆಚ್: ಹುಣಸೂರು ತಾಲೂಕಿನ ಬಿಳಿಕೆರೆ ಬಳಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದ್ದ ಸುಲಿಗೆ ಪ್ರಕರಣ ಭೇದಿಸಿರುವ ಪೆÇಲೀಸರು ಪೆಟ್ರೋಲ್ ಸಿಬ್ಬಂದಿ ಬಳಿ 15 ಸಾವಿರ ಹಣ ಸುಲಿಗೆ ಮಾಡಿದ್ದ 5 ಮಂದಿ ಖದೀಮರನ್ನು ಬಂಧಿಸಿದ್ದಾರೆ. ಆರೋಪಿಗಳ ಜಾಡು ಹಿಡಿದು ಸಾಗಿದ್ದ ಪೆÇಲೀಸರಿಗೆ ಸಿಕ್ಕಿ ಬಿದ್ದಿರುವ ಖದೀಮರು, ಈ ಮೊದಲೇ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿಗಳು ಜೈಲಿನಲ್ಲಿದ್ದುಕೊಂಡೇ ಕಳ್ಳತನಕ್ಕೆ ಸ್ಕೆಚ್ ಹಾಕಿ, ಹೊರಬಂದ ನಂತರ ಕಳ್ಳತನ ಮಾಡಿದ್ದರು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದರು.

ಈ ಸಂದರ್ಭದಲ್ಲಿ ಎಎಸ್ಪಿಗಳಾದ ಎಲ್.ನಾಗೇಶ್, ಸಿ.ಮಲ್ಲಿಕ್, ಡಿವೈಎಸ್ಪಿಗಳಾದ ಜಿ.ಎಸ್.ರಘು, ರವಿ,ಟಿ.ಬಿ.ರಾಜಣ್ಣ ಇದ್ದರು.