ಜಿಎಸ್‍ಟಿ ಸುಧಾರಣೆಯಿಂದ ಆರ್ಥಿಕತೆಗೆ ದುಪ್ಪಟ್ಟು ವೇಗ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:-
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‍ಟಿಯಲ್ಲಿ ಸುಧಾರಣೆ ತರುವ ಮೂಲಕ ಭಾರತದ ಆರ್ಥಿಕತೆಗೆ ದುಪ್ಪಟ್ಟು ವೇಗ ನೀಡಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧÀ್ಯಕ್ಷ ಎನ್.ಮಹೇಶ್ ಹೇಳಿದರು.


ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.3ರಂದು ನವದೆಹಲಿಯಲ್ಲಿ ನಡೆದ ಜಿಎಸ್‍ಟಿ ಕೌನ್ಸಿಲ್‍ನ 56ನೇ ಸಭೆಯಲ್ಲಿ 2017ರಲ್ಲಿ ಜಾರಿಗೆ ಬಂದ ಜಿಎಸ್‍ಟಿಯನ್ನು 8 ವರ್ಷಗಳ ಬಳಿಕ ಸರಳೀಕರಿಸಿ ನಾಲ್ಕು ಶ್ರೇಣಿಯ ತೆರಿಗೆಯನ್ನು ಮೂರು ಶ್ರೇಣಿಗೆ ಇಳಿಸುವ ಮೂಲಕ ಸಾಮಾನ್ಯ ಜನರಿಗೆ ಹೊರೆಯಾಗದ ರೀತಿ ಜಿಎಸ್‍ಟಿ 2.0 ಸುಧಾರಣೆ ಮಾಡಿz್ದÁರೆ ಎಂದು ತಿಳಿಸಿದರು.


ಕೇಂದ್ರ ಸರ್ಕಾರದ ಈ ಕ್ರಮ ಜನರ ಮೇಲಿನ ಹೊರೆ ಕಡಿಮೆ ಮಾಡುವ ಮೂಲಕ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಬಾರಿಯ ಜಿಎಸ್‍ಟಿಯ ಕೌನ್ಸಿಲ್‍ನ 56ನೇ ಸಭೆಗೆ ರಾಜ್ಯದ ಕಂದಾಯ ಸಚಿವ ಕೃಷ್ಣಭೈರೇಗೌಡ ಭಾಗವಹಿಸಿದ್ದರು. ಸಭೆಯಲ್ಲಿ ಜಿಎಸ್ಟಿಯ 2.0 ಸರಳೀಕರಣಕ್ಕೆ ಸರ್ವಾನು ಮತದ ಒಪ್ಪಿಗೆ ಸಿಕ್ಕಿದೆ. ಸೆ.22ರಿಂದ ಇದು ಜಾರಿಗೆ ಬರಲಿದೆ ಎಂದರು.


ಸರ್ಕಾರಗಳಿಗೆ ಅಧಿಕಾರ ನೀಡುವವರು ಹಾಗೂ ಸರ್ಕಾರ ನಡೆಸಲು ಹಣ ಕೊಡುತ್ತಿರುವವರೇ ಪ್ರಜೆಗಳು. ಹೀಗಾಗಿ ಪ್ರಜೆಗಳು ಕೊಡುವ ಅಧಿಕಾರ ಹಾಗೂ ಹಣ ದೇಶದ ಅಭಿವೃದ್ಧಿಗೆ, ಪ್ರಜೆಗಳ ರP್ಷÀಣೆಗೆ ಸಮರ್ಪಪಕವಾಗಿ ಬಳಕೆಯಾಗಬೇಕು. ಇದರಿಂದ ತೆರಿಗೆ ಸರಳೀಕರಣ ಮಾಡಿz್ದÁರೆ. ಆರ್ಥಿಕ ಪರಾವಲಂಬನೆಯು ಮನುಷ್ಯನ ಗೌರವವನ್ನು ತೆಗೆದುಬಿಡುತ್ತದೆ. ಕಾಂಗ್ರೆಸ್‍ನ ಕಳೆದ 70 ವರ್ಷಗಳ ಆಳ್ವಿಕೆಯಲ್ಲಿ ಪ್ರಜೆಗಳನ್ನು ಪರಾವಲಂಬಿ ಮಾಡಿದೆ ಎಂದು ಹೇಳಿದರು.


ಪರಾಲಂಬಿ ಪ್ರಜೆಗಳಿಂದ ಪರಾವಲಂಬಿ ದೇಶ ಸೃಷ್ಟಿಯಾಗುತ್ತದೆ. ಪ್ರಜೆಗಳು ಸ್ವಾವಲಂಬಿಯಾದರೆ ದೇಶವೂ ಸ್ವಾವಲಂಬಿಯಾಗುತ್ತದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸಮಯದಲ್ಲಿ ಆತ್ಮ ನಿರ್ಧಾರ ಭಾರತಕ್ಕೋಸ್ಕರ 20 ಲP್ಷÀ ಕೋಟಿ ಹಣ ವ್ಯಯಿಸಿದ್ದಾರೆ. ಇದರ ಪರಿಣಾಮ ಈಗ ನಮ್ಮ ದೇಶ ಇಡೀ ಜಗತ್ತಿನಲ್ಲಿ ಆರ್ಥಿಕತೆಯಲ್ಲಿ 4ನೇ ಸ್ಥಾನದಲ್ಲಿದೆ. ಇದನ್ನು 2027ಕ್ಕೆ 3ನೇ ಸ್ಥಾನಕ್ಕೆ ಹಾಗೂ 2047ಕ್ಕೆ ಅಂದರೆ ಭಾರತದ 100ನೇ ವರ್ಷದ ಸ್ವಾತಂತ್ರ್ಯದ ಸಮಯಕ್ಕೆ ಮೊದಲ ಸ್ಥಾನಕ್ಕೆ ಬರಬೇಕು. ಇದು ಆತ್ಮ ನಿರ್ಧಾರ ಭಾರತದ ಕಲ್ಪನೆ ಎಂದು ತಿಳಿಸಿದರು.


ಜಿಎಸ್‍ಟಿ ಸರಳೀಕರಣದಿಂದಾಗಿ ಪ್ರತಿಯೊಬ್ಬ ಪ್ರಜೆ ತನ್ನ ದಿನ ನಿತ್ಯದ ಸರಕುಗಳನ್ನು ಕೊಳ್ಳುವ ಸಮಯದಲ್ಲಿ ಅವನ ಬಳಿ ಹಣ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿP್ಷÀಣ ಕ್ಷೇತ್ರದಲ್ಲಿನ ಸರಕುಗಳು ಟ್ಯಾP್ಸï ಫ್ರೀಯಾಗಿ ಸಿಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿಯೂ ಕೂಡ ಭಾರಿ ಬದಲಾವಣೆ ತಂದಿದ್ದು, ಈ ಕ್ಷೇತ್ರದಲ್ಲಿಯೂ ಸಹ ಟ್ಯಾP್ಸï ಫ್ರೀಯಾಗಿ ಔಷಧಗಳು ಸಿಗುತ್ತವೆ ಎಂದರು.
ಪ್ರಜೆಗಳ ತಲಾ ಆದಾಯ ಹೆಚ್ಚಾದಾಗ ಅವನ ವಾರ್ಷಿಕ ಆದಾಯ ಹೆಚ್ಚಾಗುತ್ತದೆ. ಇದರಿಂದ ಅವನು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಾನೆ. ವ್ಯಕ್ತಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡುವುದಕ್ಕೆ ಜಿಎಸ್ಟಿ 2.0 ದೊಡ್ಡ ಕ್ರಾಂತಿಯನ್ನು ಮಾರುಕಟ್ಟೆಯಲ್ಲಿ ಸೃಷ್ಟಿ ಮಾಡಲಿದೆ. ರೈತರಿಗೆ ಅನುಕೂಲವಾಗಲೆಂದು ಕೃಷಿಗೆ ಸಂಬಂಧಿಸಿದ ಪರಿಕರಗಳ ಮೇಲೆ ಶೇ.18ರಷ್ಟು ಇದ್ದ ತೆರಿಗೆಯನ್ನು ಶೇ.2ರಷ್ಟಕ್ಕೆ ಇಳಿಸಿz್ದÁರೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ 48 ಸಾವಿರ ಕೋಟಿ ಹೊರೆಯಾಗಲಿದೆ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧÀ್ಯಕ್ಷ ಎಲï.ನಾಗೇಂದ್ರ, ಗ್ರಾಮಾಂತರ ಅಧÀ್ಯP್ಷÀ ಕೆ.ಎನ್.ಸುಬ್ಬಣ್ಣ, ಮುಖಂಡರಾದ ಮಂಗಳ ಸೋಮಶೇಖರ್ ಸೇರಿದಂತೆ ಇತರರು ಹಾಜರಿದ್ದರು.