ಜಾಸ್ಮಿನ್ ಮುಸ್ಲಿಂ ವಿವಾಹ ಮಾಹಿತಿ ಕೇಂದ್ರದಿಂದಶಾದಿ ಮೇಳ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.04:
ಜಾಸ್ಮಿನ್ ಮುಸ್ಲಿಂ ವಿವಾಹ ಮಾಹಿತಿ ಕೇಂದ್ರದಿಂದ ನಿನ್ನೆ ನಗರದ  ಶಾದಿ ಮೇಳ  ಕೆ.ಸಿ.ರಸ್ತೆಯಲ್ಲಿರುವ ಕಚೇರಿಯಲ್ಲಿನಡೆಸಲಾಯ್ತು.
ಇದರಲ್ಲಿ ಹಿರಿಯರು 70 ಮತ್ತು ಮಹಿಳೆಯರು 25 ಜನ  ಭಾಗವಹಿಸಿ. ವಧುವರರ ಮಾಹಿತಿ ಸಂಗ್ರಹಿಸಿದರು,
ಇದೇ ವೇಳೆ 45ನಿಮಿಷ ಗಳ ಕಾಲ ಮದುವೆ ಯ ಪ್ರಾಮುಖ್ಯತೆ ಯನ್ನು ಹಜರತ್ ಹಾಗೂ ಅಲೀಮ್ ಅವರಿಂದ ಜನಗಳಿಗೆ ತಿಳಿಸಲಾಯಿತು ಎಂದು ಆಯೋಜಕರಾದ ಬಿ. ಎಮ್. ರಫಿ ತಿಳಿಸಿದ್ದಾರೆ.‌