Home ಜಿಲ್ಲೆ ಮಂಗಳೂರು ಜಾಲ್ಸೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ಶಾಸಕರಿಂದ ಚಾಲನೆ

ಜಾಲ್ಸೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ಶಾಸಕರಿಂದ ಚಾಲನೆ

ಸುಳ್ಯ:ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅರ್ತಾಜೆ-ನಡುಬೆಟ್ಟು ರಸ್ತೆಗೆ ೧೦ ಲಕ್ಷ, ಆಡ್ಕಾರು- ಕಜೆಗದ್ದೆ ರಸ್ತೆ ಅಭಿವೃದ್ಧಿಗೆ ೧೦ಲಕ್ಷ ಮಳೆ ಹಾನಿ ಯೋಜನೆಯಲ್ಲಿ ಮಂಜೂರಾಗಿದ್ದು ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಾಲ್ಸೂರು ಶಕ್ತಿ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಾಟೂರು, ಬೂತ್ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಪಿಲಿಕೋಡಿ, ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಸಾವಿತ್ರಿ ಅಡ್ಕಾರು ಬೈಲು, ಕೆ. ಎಂ. ಬಾಬು ಜಾಲ್ಸೂರು. ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಅರ್ಬಡ್ಕ, ನಿರಂಜನ ಬೊಳುಬೈಲು, ಮಾಜಿ ಉಪಾಧ್ಯಕ್ಷ ಕರುಣಾಕರ ಕುಕ್ಕಂದೂರು, ಚಂದ್ರಶೇಖರ ನೆಕ್ರಾಜೆ, ಪದ್ಮನಾಭ ನೆಕ್ರಾಜೆ, ಚಂದ್ರಶೇಖರ ನಡುಬೆಟ್ಟು, ಬಾಲಚಂದ್ರ ನಡುಬೆಟ್ಟು. ಗಣೇಶ್ ಅಂಬಾಡಿ, ಗ್ರಾ.ಪಂ.ಮಾಜಿ ಸದಸ್ಯರಾದ ಲೀಲಾವತಿ ವಿನೋಬನಗರ, ನವೀನ್ ಜಬಳೆ, ಸುಳ್ಯ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ರವಿರಾಜ್ ಗಬ್ಲಡ್ಕ, ನವೀನ್ ಅಂಬಾಡಿ ಮೂಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಜಾ, ಸಿಬ್ಬದಿ ಚಿದಾನಂದ, ಗುತ್ತಿಗೆದಾರ ಯೊಗೀಶ್ ಪೂಜಾರಿ, ಶಾಸಕರ ಆಪ್ತ ಕಾರ್ಯದರ್ಶಿ ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.