
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ. 28: ಜಾರ್ಖಂಡ್ ನ ಡಿಐಜಿ ಆಗಿ ಬಡ್ತಿ ಪಡೆದಿರುವ ನಗರದ ವೈ.ಎಸ್. ರಮೇಶ್ ಅವರವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ನಿನ್ನೆ ಸಂಜೆ ಸನ್ಮಾನಿಸಿ ಗೌರವಿಸಲಾಯ್ತು.
ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್ ಮತ್ತು ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು. ರಮೇಶ್ ಅವರು ಬಳ್ಳಾರಿಯಲ್ಲಿ ಹುಟ್ಟಿ ಬೆಳೆದು, ಜಾರ್ಖಂಡ್ ರಾಜ್ಯದಲ್ಲಿ ಎಸ್ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿ ವಿವಿಧ ಹುದ್ದೆಗಳಲ್ಲಿ ಬಡ್ತಿಯನ್ನು ಪಡೆದು, ಈಗ ಡಿಐಜಿ ಆಗಿದ್ದಾರೆ. ಅವರು ನಮ್ಮ ಬಳ್ಳಾರಿಯ, ಕರ್ನಾಟಕದ ಹೆಮ್ಮೆಯ ಪುತ್ರರಾಗಿದ್ದಾರೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಅವರು, ಐಪಿಎಸ್ ತೇರ್ಗಡೆ ಆದ ನಂತರ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನೀಡಿದ ಗೌರವ ಸನ್ಮಾನ ಸ್ವೀಕರಿಸಿದ್ದೆ. ಪ್ರಸ್ತುತ ಡಿಐಜಿಯಾಗಿ ಬಡ್ತಿ ಪಡೆದ ಮೇಲೆ ಈ ಸಂಸ್ಥೆ ನನ್ನನ್ನು ಗೌರವಿಸುತ್ತಿರುವುದು ಅಭಿಮಾನದ ಪ್ರತೀಕ ಎಂದರು.
ನಾನು, ಬಳ್ಳಾರಿಯವನಾಗಿ, ಕನ್ನಡಮ್ಮ – ಕರ್ನಾಟಕ ಮಾತೆಯ ಸೇವೆ ಸಲ್ಲಿಸಲು ಉತ್ಸುಕನಾಗಿದ್ದೇನೆ. ಬಳ್ಳಾರಿ ಜಿಲ್ಲೆಯ ಹಾಗೂ ಕರ್ನಾಟಕದ ವಿದ್ಯಾರ್ಥಿಗಿಗೆ ಯುಪಿಎಸ್ಇ ಪರೀಕ್ಷೆ ತೇರ್ಗಡೆಗೆ ಅಗತ್ಯವಾಗಿರುವ ಮಾರ್ಗದರ್ಶನ ನೀಡಲು ಉತ್ಸುಕನಾಗಿರುವೆ ಎಂದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಸ್ಕಿಲ್ ಡೆವಪಲ್ಮೆಂಟ್ ಸಂಸ್ಥೆಯು ಏರ್ಪಡಿಸುವ ವಿದ್ಯಾರ್ಥಿ ಮಾರ್ಗದರ್ಶನ ಶಿಬಿರಕ್ಕೆ ಆಗಮಿಸಬೇಕೆಂದು ರಮೇಶ್ ಅವರಿಗೆ ಮನವಿ ಮಾಡಿದರು.
ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷರುಗಳಾದ ಸೊಂತ ಗಿರಿಧರ್, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಖಜಾಂಚಿ ನಾಗಳ್ಳಿ ರಮೇಶ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮಿತಿಗಳ ಚೇರ್ಮನ್ ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಇದ್ದರು.






















