
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.16: ಇಲ್ಲಿನ ಕೌಲ್ ಬಜಾರ್ ನ ಮಸೀದಿ ಆವರಣದಲ್ಲಿ ಮುಸ್ಲಿಂ ಸಮುದಾಯದ ಜನತೆ ಜಮೀರ್ ಅಹಮ್ಮದ್ ಅವರಿಗೆ ಸಚಿವ ಸ್ಥಾನ ನೀಡದ್ದನ್ನು ಖಂಡಿಸಿ. ಸಚಿವ ಸಂಪುಟ ವಿಸ್ತರಣೆಯಲ್ಲಿ ಜಮೀರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಇಂದು ಶುಕ್ರವಾರದ ಪ್ರಾರ್ಥನೆ ಬಳಿಕ ಪಾಲಿಕೆ ಸದಸ್ಯ ಆಸಿಫ್ ಅವರ ನೇತೃತ್ವದಲ್ಲಿ ದಿವಾನಿಮಸ್ತಾನ್ ದರ್ಗಾ ಆವರಣದಲ್ಲಿ ಧರ್ಮದ ಗುರುಗಳು, ಮುಖಂಡರು ಸೇರಿ ಜಮೀರ್ ಅಹಮ್ಮದ್ ಅವರು ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೂ ದುಡಿದಿದ್ದಾರೆ. ಯಾರೋ ಉದ್ದೇಶ ಪೂರ್ವಕವಾಗಿ ದಾವಣಗೆರೆ ಚುನಾವಣೆಯ ವಿಷಯದಲ್ಲಿ ಎಐ ಆಡಿಯೋ ಬಿಡುಗಡೆ ಮಾಡಿ ಪಕ್ಷಕ್ಕೆ ಧಕ್ಕೆ ತರುವಂತೆ ಮಾಡಿದೆ.
ಇದೆಲ್ಲಾ ಉದ್ದೇಶ ಪೂರ್ವಕವಾಗಿ ಆಗಿದೆ. ಇದನ್ನು ಪರಿಗಣಿಸದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಮೀರ್ ಅಹಮ್ಮದ್ ಅವರಿಗೆ ಸಚಿವ ಸ್ಥಾನನೀಡಬೇಕು ಎಂದು ಆಗ್ರಹಿಸಲಾಯ್ತು.































