ಜಮೀನು ವಿವಾದಕ್ಕೆ ಎರಡು ಕುಟುಂಬಗಳ ಒಬ್ಬರಿಗೊಬ್ಬರು ಹಲ್ಲೆ: ಆಸ್ಪತ್ರೆಗೆ ದಾಖಲು

ಸಂಜೆವಾಣಿ ವಾರ್ತೆ
ಹನೂರು ಡಿ 2 :
– ತಟ್ಟೆಕೆರೆ ಬಳಿ ಇರುವ ಜಮೀನು ವಿವಾದಕ್ಕೆ ಎರಡು ಕುಟುಂಬದವರು ಒಬ್ಬರಿಗೊಬ್ಬರು ಕುಡುಗೋಲು, ದೊಣ್ಣೆಗಳಿಂದ ಹೊಡೆದಾಡಿಕೊಂಡು ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮಪುರ ಪೆÇಲೀಸ್ ಠಾಣೆ ವ್ಯಾಪ್ತಿಯ ನಕ್ಕುಂದಿ ಗ್ರಾಮದಲ್ಲಿ ಭಾನುವಾರದಂದು ನಡೆದಿದೆ.


ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯ ನಕ್ಕುಂದಿ ತಟ್ಟೆಕೆರೆ ಇರುವ ಜಮೀನು ವಿವಾದಕ್ಕೆ ಒಬ್ಬರಿಗೊಬ್ಬರು ಕುಡುಗೋಲು ದೊಣ್ಣೆಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ನಕ್ಕುಂದಿ ಗ್ರಾಮದ ಸಿದ್ದಮರಿ, ಮಾದಮ್ಮ, ಸುಂದ್ರ, ಮಹೇಶ್ವರಿ ಇವರಿಗೆ ತೀವ್ರ ಗಾಯಗಳಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಶೀಲ ಎಂಬುವರಿಗೆ ತೀವ್ರ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.


ಮೀಣ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯ ನಕ್ಕುಂದಿ ತಟ್ಟೆಕೆರೆ ಇರುವ ಒಟ್ಟು ಸುಮಾರು 18 ಎಕರೆಯಷ್ಟು ಜಮೀನು ವಿವಾದಕ್ಕೆ ಈ ಘಟನೆ ನಡೆದಿದೆ. ಲೇಟ್ ದುಂಡಮಾದತಂಬಡಿ ಕುಟುಂಬ ಮಾದೇಶ ತಾಯಮ್ಮ. ಈರತಂಬಡಿ ಮತ್ತು ಬಸವರಾಜು, ಮಹೇಶ್ವರಿ, ಶಿವಮ್ಮ ಎರಡು ಕುಟುಂಬದವರು ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮತ್ತು ಕಾರಿನಲ್ಲಿ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಹಲವರನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆ ಸಂಭಂದ ಎರಡು ಕಡೆ ಅವರಿಂದಲೂ ರಾಮಪುರ ಪೆÇಲೀಸ್ ಠಾಣೆಗೆ ದೂರು ನೀಡಲಾಗಿದ್ದು. ಮುಂದಿನ ಕ್ರಮ ಕೈಗೊಳ್ಳಲಾಗಿದೆ.