Home Uncategorized ಜನಸೇವಾ ಸಾಮಾಜಿಕ ಕಾರ್ಯಕ್ರಮಗಳ ಮುಕ್ತ ಮಾತುಕತೆ

ಜನಸೇವಾ ಸಾಮಾಜಿಕ ಕಾರ್ಯಕ್ರಮಗಳ ಮುಕ್ತ ಮಾತುಕತೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.24:  ಡಾಕ್ಟರ್ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ನಮ್ಮ ನಾಯಕರಾದ ಮುಂಡರಗಿ ನಾಗರಾಜ್ ರವರು ಚಿತ್ರದುರ್ಗದ ಪ್ರಧಾನ ಮಠ ಶ್ರೀ ಮುರುಘ ಮಠದ ಆವರಣದಲ್ಲಿರುವ ಅನುಭವ ಮಂಟಪದ ಸಭಾ ಗಣದ ಮುಂಭಾಗ  ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್  ಎಸ್ ಲಾಡು ಫೌಂಡೇಶನ್ ಸ್ವಯಂ ಸೇವಕರೊಂದಿಗೆ ಫೌಂಡೇಶನ್ ವತಿಯಿಂದ ಜನಸಾಮಾನ್ಯರಿಗೆ ದಿನರಿಗೆ ದಲಿತರಿಗೆ ಬಡವರಿಗೆ ವಿದ್ಯಾರ್ಥಿಗಳಿಗೆ ಅಂಗವಿಕಲರಿಗೆ ಮಹಿಳೆಯರಿಗೆ ಅನಾಥರಿಗೆ ರೋಗಿಗಳಿಗೆ ಮಾಡುವಂತ ಜನಸೇವಾ ಸಾಮಾಜಿಕ ಕಾರ್ಯಕ್ರಮಗಳ ಕುರಿತು ಮುಕ್ತ ಮಾತುಕತೆ ನಡೆಸಿದರು.

 ಈ ಸಂದರ್ಭದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ಕಾರ್ಯಕರ್ತರಾದ ದೇವರಾಜ್ ಕೆ ಗುತ್ಯಪ್ಪ ಕಾಳಿ ಪ್ರವೀಣ್ ನಾಗರಾಜ್ ತಳವಾರ್ ಅಶೋಕ ಅಂಗಡಿ ಸಂತೋಷ್ ಶಂಕರ್ ಸಂಗೀತ ಅನುರಾಧ ಗಜೇಂದ್ರ ಆಲಮಾನಂದ ಮಹೇಶ್ ಬಸವರಾಜ್ ಹನುಮೇಶ್ ಮಲ್ಲಿಕಾರ್ಜುನ ಹಾಗೂ ಧರ್ಮರಾಜ್ ಮಹೇಂದ್ರ ಗಾಳೆಪ್ಪ ಮೊದಲಾದವರು ಹಾಜರಿದ್ದರು.