
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.02: ನಗರದ ಜನತಾ ಬಜಾರ್ ಸಭಾಂಗಣದಲ್ಲಿ ನಿನ್ನೆ ಜನತಾ ಬಜಾರ್ ನ ನಿರ್ದೇಶಕತ್ರಯರ ಜನ್ಮ ದಿನಾಚರಣೆ ನಡೆಯಿತು.
ಹಿರಿಯ ನಿರ್ದೇಶಕ ವೆಂಕಟಸ್ವಾಮಿ(ಅಲ್ಲಿಪುರ), ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಜಿ.ನೀಲಕಂಠಪ್ಪ ಹಾಗು ಮತ್ತೊಬ್ಬ ನಿರ್ದೇಶಕ ಪ್ರಸಾದ್ ರೆಡ್ಡಿ ಇವರ ಜನ್ಮ ದಿನಾಚರಣೆಯನ್ನು ಆಚರಿಸಲಾಯ್ತು.
ಈ ವೇಳೆ ಜನತಾ ಬಜಾರ್ ನ ಅಧ್ಯಕ್ಷ ಕೆ.ಎ.ವೇಮಣ್ಣ, ನಿರ್ದೇಶಕರಾದ ವೆಂಕಟೇಶ ಹೆಗಡೆ, ದಾನರೆಡ್ಡೀ, ನರೇಶ್ ಕುಮಾರ್, ಮಾಜಿ ನಿರ್ದೇಶಕ ಇಬ್ರಾಹಿಂ ಮೊದಲಾದವರು ಇದ್ದು ಶುಭಕೋರಿದರು.