
ಸಂಜೆವಾಣಿ ನ್ಯೂಸ್
ಮೈಸೂರು,ನ.21:- ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ದಲ್ಲಿ, ಭಗವಾನ್ ಬರಸಾ ಮುಂಡಾರ ಜನ್ಮ ವಾರ್ಷಿಕೋತ್ಸವ ಗೌರವವಾರ್ಥವಾಗಿ ಪ್ರತಿ ರಷದ ನವೆಂಬರ್ 15 ರಂದು ನಡೆಯುವ “ಜನಜಾತಿಯ ಗೌರವ ದಿವಸ” ಆಚರಣೆಯ ಭಾಗವಾಗಿ ಭಾಷೆ, ಸಂಸ್ಕೃತಿ ಮತ್ತು ಜ್ಞಾನ ಪದ್ಧತಿಗಳ ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ಘಾಟಿಸಲಾಯಿತು.
ವಿಚಾರಗೋಷ್ಠಿಯ ಪರಿಚಯಾತ್ಮಕ ಭಾಷಣ ಮಾಡಿದ ಭಾ.ಭಾ.ಸಂ.ನ ಪ್ರಾಧ್ಯಾಪಕ ಹಾಗೂ ಉಪ ನಿರ್ದೇಶಕ ಡಾ.ಪಿ.ಆರ್. ಧರ್ಮೇಶ್ ಫರ?ನಾಂಡಿಸ್ ಮಾತನಾಡಿ, ರಾಷ್ಟ್ರದ ಅತ್ಯಂತ ಪ್ರಾಚೀನ ಭಾಷೆ, ಸಾಂಸ್ಕೃತಿಕ ಆಚರಣೆ ಮತ್ತು ಜ್ಞಾನ ಪದ್ಧತಿಗಳನ್ನು ರಕ್ಷಿಸುವಲ್ಲಿ ಬುಡಕಟ್ಟು ಸಮುದಾಯಗಳ ಅಮೂಲ್ಯ ಕೊಡುಗೆಗಳನ್ನು ಗುರುತಿಸುವಲ್ಲಿ ಭಾರತ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. ಪೆÇ್ರ.ಫರ್ನಾಂಡಿಸ್, ಭಗವಾನ್ ಬರ?ಸಾ ಮುಂಡಾ ಅವರ “ಜಲ್, ಜಂಗಲ್, ಜಮೀನ್” (ನೀರು, ಕಾಡು, ಭೂಮಿ) ಎಂಬ ನಿರಂತರ ಸಂದೇಶದ ದೃಢತೆಯನ್ನು ಪುನರುಚ್ಚರಿಸುತ್ತಾ, ಬುಡಕಟ್ಟು ಭಾಷೆಗಳಲ್ಲಿ ಆಳವಾಗಿ ಬೇರೂರಿರುವ ಸಾಂಪ್ರದಾಯಿಕ ಪರಿಸರ ಜ್ಞಾನವು ಸುಸ್ಥಿರ ಅಭಿವೃದ್ಧಿಗೆ ಪ್ರಮುಖ ಕೊಡುಗಳನ್ನು ನೀಡುತ್ತಿದೆ ಎಂದರು.
ತಮಿಳಿನ ಸಂಗಂ ಸಾಹಿತ್ಯದಲ್ಲಿ ನೈಸರ್ಗಿಕ ವಿಕೋಪಗಳು ಮತ್ತು 2004 ರ ಸುನಾಮಿಯ ಸಂದರ್ಭದಲ್ಲಿ ಅಂಡಮಾನ್ ಬುಡಕಟ್ಟು ಸಮುದಾಯಗಳು ಬದುಕುಳಿದ ಆರಂಭಿಕ ಉಲ್ಲೇಖಗಳನ್ನು ಪ್ರಸ್ತಾಪಿಸುತ್ತಾ, ಸ್ಥಳೀಯ ಪರಿಸರ ಜ್ಞಾನವು ದರ?ಘಕಾಲದವರೆಗೆ ಸಮುದಾಯದ ಸ್ಥಿತಿಸ್ಥಾಪಕತ್ವವನ್ನು ಹೇಗೆ ಪೀಳಿಗೆಗಳಿಗೆ ಮುಂದುವರಿಸಿಕೊಂಡು ಬಂದಿದೆ ಎಂಬುದನ್ನು ವಿವರಿಸಿದರು. ಪರಿಸರ ಸಂರಕ್ಷಣೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನಕ್ಕೆ ರಾಷ್ಟ್ರೀಯ ಬದ್ಧತೆಯನ್ನು ಪುನರುಚ್ಚರಿಸಲು ಈ ವಿಚಾರಗೋಷ್ಠಿಯು ಒಂದು ಪ್ರಮುಖ ವೇದಿಕೆಯಾಗಿದೆ ಎಂದರು.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಅಶೋಕ ಪರಿಸರ ಸಂಶೋಧನಾ ಮತ್ತು ಪರಿಸರ ವಿಜಾÐನ ಸಂಸ್ಥೆ (ಏಟ್ರಿ)ಯ ಯೋಜನಾ ವ್ಯವಸ್ಥಾಪಕ ಡಾ.ಸಿ.ಮಾದೇಗೌಡ ವಿಚಾರಗೋಷ್ಟಿ ಉದ್ಘಾಟಿಸಿ ಮಾತನಾಡಿ, ಆದಿವಾಸಿ ಹಕ್ಕುಗಳ ರಕ್ಷಕನಾದ ಮತ್ತು ಭಾರತದಾದ್ಯಂತ ಬುಡಕಟ್ಟು ಸಮುದಾಯಗಳಿಗೆ ಸ್ಫರ?ತಿಯ ಸೆಲೆಯಾದ ಭಗವಾನ್ ಬರ?ಸಾ ಮುಂಡಾ ಅವರ ನಿರಂತರ ಹೋರಾಟದ ಪರಂಪರೆಯನ್ನು ವಿವರಿಸಿದರು. ಅರಣ್ಯ ಭೂಸದೃಶ್ಯಗಳೊಂದಿಗೆ ಆದಿವಾಸಿಗಳ ಆಳವಾದ ಐತಿಹಾಸಿಕ ಸಂರ?ಕದ ಬಗ್ಗೆ ಮಾತನಾಡಿ ಸಾಂಪ್ರದಾಯಿಕ ಸಮುದಾಯಗಳು ಶತಮಾನಗಳಿಂದ ಅರಣ್ಯಗಳ ಪಾಲಕರಾಗಿ ಸೇವೆ ಸಲ್ಲಿಸಿವೆ ಎಂದರು.
ಬುಡಕಟ್ಟು ಜನಾಂಗದ ಕಲಿಕರ?ಥಿಗಳಿಗೆ ನೇರವಾಗಿ ಪ್ರಯೋಜನವಾಗುವ ಸಮಗ್ರ ಕ್ಷೇತ್ರ ಸಮೀಕ್ಷೆಗಳು, ಸಮುದಾಯಾಧಾರಿತ ಭಾಷಿಕ ನಕ್ಷೆ ಮತ್ತು ಕ್ರಿಯಾಶೀಲ ಸಂಶೋಧನೆಗಳನ್ನು ಕೈಗೊಳ್ಳುವಂತೆ ಡಾ. ಮಾದೇಗೌಡ ಭಾ.ಭಾ.ಸಂಸ್ಥೆಯನ್ನು ಒತ್ತಾಯಿಸಿದರು. ಬುಡಕಟ್ಟು ಮಕ್ಕಳ ಸಮಾಜೋ-ಸಾಂಸ್ಕೃತಿಕ ಸಂರ?ಭಗಳಿಗೆ ಅನುಗುಣವಾಗಿ ಆರಂಭಿಕ ಹಂತದ ಬೋಧನೆ ಮತ್ತು ಕಲಿಕಾ ಸಾಮಗ್ರಿಗಳು, ಪ್ರೈಮರ್(ಬಾಲಬೋಧೆ)ಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಭಾ.ಭಾ.ಸಂ. ಸ್ಥಳೀಯ ಸಮುದಾಯಗಳೊಂದಿಗೆ ಸಹಕರಿಸುವ ಅಗತ್ಯವನ್ನು ಒತ್ತಿ ಹೇಳಿದರು.
ರಾಷ್ಟ್ರೀಯ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷೀಯ ನುಡಿಗಳನ್ನಾಡಿದ ಭಾ.ಭಾ.ಸಂ.ನ ನಿರ್ದೇಶಕ ಪೆÇ್ರ.ಶೈಲೇಂದ್ರ ಮೋಹನ್ ಮಾತನಾಡಿ, ಭಾರತದ ಭಾಷಾ ವೈವಿಧ್ಯತೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಈ ಸಂಸ್ಥೆಯು ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ವಿವರಿಸಿದರು.ಸೋಲಿಗ ಸಮುದಾಯಕ್ಕಾಗಿ ನಿಘಂಟು ಮತ್ತು ಬೋಧನಾ-ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಿದೆ ಎಂದರು.
ಭಾ.ಭಾ.ಸಂ.ನ ಉಪನ್ಯಾಸಕರು-ಹಾಗೂ-ಕಿರಿಯ ಸಂಶೋಧನಾಧಿಕಾರಿ (ಎಲ್-ಜೆ.ಆರ್.ಒ) ಮತ್ತು ವಿಚಾರಗೋಷ್ಠಿಯ ಸಂಯೋಜಕ ಡಾ.ಸುಜೋಯ್ ಸರ್ಕಾರ್ ಇನ್ನಿತರರು ಇದ್ದರು.

























