
ಸುಳ್ಯ:ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ಪೇರೆಂಟ್ಸ್ ಮೀಟ್ ಹಾಗೂ ಸನ್ಮಾನ ಸಮಾರಂಭವು ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಬಿ. ಎಂ ರವರ ಅಧ್ಯಕ್ಷತೆಯಲ್ಲಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಎಸ್. ಜೆ. ಎಂ ರಾಜ್ಯ ಮಟ್ಟದ ಮುಅಲ್ಲಿಂ ಅವಾರ್ಡ್ ಪಡೆದ, ಮುಅಲ್ಲಿಂ ಮೆಹರ್ಜಾನ್ ಮದ್ರಸ ಅಧ್ಯಾಪಕರ ಸ್ಪರ್ಧೆಯಲ್ಲಿ ರೇಂಜ್ ಮಟ್ಟದ ಹೈ ಝೋನ್ ವಿಭಾಗದ ಕಲಾ ಪ್ರತಿಭೆ ರಾಜ್ಯ ಮಟ್ಟದ ಹ ಝೋನ್ ವಿಭಾಗ ಮಲಯಾಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬುಸ್ತಾನುಲ್ ಉಲೂಂ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಗಳನ್ನು ಗಾಂಧಿನಗರ ಮದ್ರಸ ಸದರ್ ಮುಅಲ್ಲಿಂ ಸಿರಾಜುದ್ದೀನ್ ಸಖಾಫಿ ಚಿಕ್ಕಮಗಳೂರು ಉದ್ಘಾಟಿಸಿದರು. .ಕಾರ್‍ಯಕ್ರಮದಲ್ಲಿ ಅಬ್ದುಲ್ಲ ಮುಸ್ಲಿಯಾರ್ ಗೂನಡ್ಕ, ಕಮಿಟಿ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ ಜಟ್ಟಿಪಳ್ಳ, ಕೋಶಾಧಿಕಾರಿ ಎನ್ ಎ ಅಬ್ದುಲ್ಲ, ಸದಸ್ಯರುಗಳಾದ ತಾಜುದ್ದೀನ್, ಅಬ್ದುಲ್ ರಜಾಕ್, ಗಾಂಧಿನಗರ ಮಸೀದಿಯ ಮುಅಲ್ಲಿಮರುಗಳಾದ ರಿಹಾನ್ ಸಅದಿ, ಶಿಹಾಬುದ್ದೀನ್ ಫಾಳಿಲಿ, ಹಿರಿಯರಾದ ಸಿ ಎ ಅಬ್ದುಲ್ಲ, ಮೊಯಿದೀನ್, ಇಸ್ಮಾಯೀಲ್, ಮುಸ್ತಫ ಮುಂತಾದವರು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಂ ಲತೀಫ್ ಸಖಾಫಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾಯಂದಿರ ಪಾತ್ರದ ಕುರಿತು ಮಾತನಾಡಿದರು. ಕಮಿಟಿ ಪ್ರಧಾನ ಕಾರ್ಯದರ್ಶಿ ಶರೀಫ್ ಸ್ವಾಗತಿಸಿ ಪ್ರಾಸ್ಥಾವಿಕ ಭಾಷಣಗೈದರು. ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸನ್ಮಾನ ಪತ್ರ ವಾಚಿಸಿದರು. .ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ನಿರೂಪಿಸಿ ವಂದಿಸಿದರು.




























