ಸುಳ್ಯ:ಸಾಲ ಪಡೆದು ಬಳಿಕ ಮರು ಪಾವತಿಗಾಗಿ ಚೆಕ್ ನೀಡಿ ಅಮಾನ್ಯಗೊಂಡ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸಾಲ ಪಡೆದಿದ್ದ ಪುತ್ತೂರು ತಾಲೂಕು ಬಿರುಮಲೆ ನಿವಾಸಿ ಪ್ರಾಥಮಿಕ ಶಾಲಾ ಶಿಕ್ಷಕ ಪುರುಷೋತ್ತಮ ಬಿ. ಎಂಬವರು ಸಾಲದ ಮರುಪಾವತಿಗಾಗಿ ಚೆಕ್ ನೀಡಿದ್ದು ಇದು ಬ್ಯಾಂಕಿನಲ್ಲಿ ಸಾಕಷ್ಟು ಮೊತ್ತ ಇಲ್ಲದೆ ಅಮಾನ್ಯಗೊಂಡಿತ್ತು. ಈ ಬಗ್ಗೆ ಸೊಸೈಟಿಯವರು ಸುಳ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಈ ಸಂಬಂಧ ಒಂದು ಬಾರಿ ಕೋರ್ಟಿಗೆ ಹಾಜರಾಗಿದ್ದ ಆರೋಪಿಯು ಬಳಿಕ ಸಮನ್ಸ್, ವಾರಂಟ್‌ಗಳಾದರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಅವರನ್ನು ಸೆ.೧೯ರಂದು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.



























