
ಬೀಜಿಂಗ್,ಜ.7- ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮರುಡೋ ಅವರನ್ನು ಬಂಧಿಸುವ ಮೂಲಕ ವೆನಿಜುವೆಲಾ ಮತ್ತು ಚೀನಾ ನಡುವೆ ದಶಕಗಳಿಂದ ಇದ್ದ ಬಾಂಧವ್ಯಕ್ಕೆ ಕೊನೆ ಹಾಡಲು ಅಮೆರಿಕಾ ಮುಂದಾಗಿದೆ.
ಕೋವಿಡ್ ಸಮಯದಿಂದ ಅಮೆರಿಕಾ ಮತ್ತು ಚೀನಾ ನಡುವಿನ ಸಂಬಂಧ ತೀರಾ ಹದಗೆಟ್ಟಿದ್ದು ಇದಕ್ಕೆ ಪೂರಕ ಎನ್ನುವಂತೆ ಸುಂಕದ ವಿಷಯದಲ್ಲಿ ಎರಡೂ ದೇಶಗಳ ನಡುವಿನ ಶೀತಲ ಸಮರ ಮುಂದುವರಿದಿತ್ತು. ಇದರ ಬೆನ್ನಲ್ಲೇ ಇದೀಗ ಚೀನಾ ಮತ್ತು ವೆನಿಜೆವೆಲಾ ನಡುವಿನ ಸಂಬಂಧಕ್ಕೆ ಅಂತ್ಯ ಹಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
ನಿಕೋಲಸ್ ಮರುಡೊ ಅವರು ಚೀನಾದ ಹಿರಿಯ ರಾಜತಾಂತ್ರಿಕರೊಂದಿಗೆ ಸಭೆ ನಡೆಸಿದ ಕೆಲವೇ ಗಂಟೆಗಳಲ್ಲಿ ಅಮೆರಿಕಾದ ಭದ್ರತಾ ಪಡೆ ಅಪರಿಸಿ ಬಂಧಿಸಿದೆ. ಚೀನಾದ ಅಧ್ಯ್ಕಷ ಕ್ಸಿ ಜಿನ್‍ಪಿಂಗ್ ಅವರನ್ನು “ಜಗತ್ತಿಗೆ ನಾಯಕನಾಗಿ ಹೊರ ಹೊಮ್ಮಲು ಮುಂದಾಗುತ್ತಿರುವುದನ್ನು ಅರಿತು ಡೊನಾಲ್ಡ್ ಟ್ರಂಪ್ ಈ ರೀತಿ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬಂದಿವೆ.”
ಚೀನಾ ತನ್ನ ದಕ್ಷಿಣ ಅಮೆರಿಕಾದ ಹತ್ತಿರದ ಪಾಲುದಾರ ವೆನಿಜುವೆಲಾದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಇದರಿಂದ ತೈಲವನ್ನು ಚೀನಾ ತನ್ನ ಹಿಡಿತದಲ್ಲಿಟಟ್ಟುಕೊಳ್ಳಲು ಮುಂದಾಗಿದ್ದೇ ಅಮೆರಿಕಾವನ್ನು ಕಣ್ಣು ಕೆಂಪಗೆ ಆಗಲು ಕಾರಣ ಎಂದು ಹೇಳಲಾಗಿದೆ.
ಚೀನಾ ಮತ್ತು ವೆನಿಜುವೆಲಾ ನಡುವೆ ನೂರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಲ್ಲಿ ಉಭಯ ದೇಶಗಳ ನಡುವಿನ 600 ಪ್ರಸ್ತುತ ಒಪ್ಪಂದಗಳಲ್ಲಿ ಕೆಲವನ್ನು ಪರಿಶೀಲಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನಿಜುವೆಲಾದ ಮಧ್ಯಂತರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಸಾರ್ವಭೌಮ ರಾಷ್ಟ್ರದ ವಿರುದ್ಧ ಅಮೆರಿಕಾದ ಈ ಕ್ರಮವನ್ನು ಖಂಡಿಸುವಲ್ಲಿ ಚೀನಾವು ಪ್ರಪಂಚದಾದ್ಯಂತದ ಅನೇಕ ದೇಶಗಳೊಂದಿಗೆ ಸೇರಿಕೊಂಡಿದೆ. ಅಮೆರಿಕ “ವಿಶ್ವ ನ್ಯಾಯಾಧೀಶ” ನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದೆ.
“ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಭದ್ರತೆ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಸಂಪೂರ್ಣವಾಗಿ ರಕ್ಷಿಸಬೇಕು” ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದು ನಿಕೋಲಾಸ್ ಮರುಡೊ ಅವರನ್ನು ಬಂಧಿಸಿದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.


























