
ಸುಳ್ಯ:ಅಮರಪಡ್ನೂರು ಗ್ರಾಮದ ಶೇಣಿ ಕೋಟೆಬನ ಎಂಬಲ್ಲಿ ಮನೆಯಿಂದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಕೋಟೆಬನ ಪುರುಷೋತ್ತಮ ಎಂಬವರು ಫೆಬ್ರವರಿ ತಿಂಗಳಲ್ಲಿ ಶಬರಿಮಲೆಗೆ ಹೋಗಲು ಮಾಲೆ ಧರಿಸಿದ್ದರು. ಈ ವೇಳೆ ಶಬರಿಮಲೆಗೆ ತೆರಳುವಾಗ ಮನೆಯಲ್ಲಿ ನಿಲ್ಲಲು ತನ್ನ ಸಂಬಂಧಿಕ ಸುಳ್ಯದ ಕಾಲೇಜಿನಲ್ಲಿ ಕಲಿಯುತ್ತಿದ್ದ ಮಡಿಕೇರಿ ಚೆಂಬುವಿನ ಹರಿಪ್ರಸಾದ್ ಎಂಬವರನ್ನು ನಿಲ್ಲಿಸಿದ್ದರು. ಈ ವೇಳೆ ಮನೆಯಲ್ಲಿದ್ದ ಪೆಂಡೆಂಟ್ ಇರುವ ೩೦ ಗ್ರಾಂ.ನ ಚಿನ್ನದ ಚೈನ್ ಕಳವಾಗಿತ್ತು. ಈ ಬಗ್ಗೆ ಸಂಶಯಗೊಂಡ ಪುರುಷೋತ್ತಮ ಅವರು ಫೆ.೨೫ ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಮಾಡುತ್ತಿದ್ದ ಪೊಲೀಸರು ಮಾ.೩೧ ರಂದು ಆರೋಪಿಯನ್ನು ಬಂಧಿಸಿ ಕಳವುಗೈದ ಚಿನ್ನಾಭರಣವನ್ನು ಪೊಲೀಸರ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.





















