ಚಿಟ್ಟೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸಿ.ಎನ್.ರವಿ ಆಯ್ಕೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.28:-
ತಾಲೂಕಿನ ಚಿಟ್ಟೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಎನ್.ರವಿ, ಉಪಾಧ್ಯಕ್ಷರಾಗಿ ಜಗದೀಶ್ ಅವಿರೋಧವಾಗಿ ಆಯ್ಕೆಯಾದರು.


ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನೆಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಎನ್.ರವಿ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಜಗದೀಶ್ ಇವರಿಬ್ಬರು ಹೊರೆತುಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸದ ಹಿನ್ನಲೆ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಸಿ.ಡಿ.ಓ ಹಿತೇಂದ್ರ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷತೆ ವಹಿಸಿದ ಸಿ.ಎನ್ ರವಿ ಮಾತನಾಡಿ ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳು ಸಕಾಲಕ್ಕೆ ಸರಿಯಾಗಿ ಅಗತ್ಯವಾದ ಸಾಲ ಸೌಲಭ್ಯ ಹಾಗೂ ಕೃಷಿ ಸಲಕರಣೆಗಳನ್ನು ನೀಡಿ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಿದ್ದು ಹಾಗೆಯೇ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ನಿರ್ದೇಶಕರ ಬೆಂಬಲದಲ್ಲಿ ಈ ಸಂಘವನ್ನು ಅಭಿವೃದ್ಧಿ ಪತದತ್ತ ಕೊಂಡೋಯ್ಯಬೇಕು ಎಂದಲ್ಲದೆ,ಅಪಾರ ನಂಬಿಕೆಯೊಂದಿಗೆ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅಲಂಕರಿಸಲು ಸಹಕರಿಸಿದ ಮಾಜಿ ಶಾಸಕ ಕೆ.ಮಹದೇವ್ ಹಾಗೂ ಮಾಜಿ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಹಾಗೂ ಸಂಘದ ಸದಸ್ಯರು ಮತ್ತು ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು.ಕಳೆದ ಬಾರಿ ಈ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಯಲ್ಲಿತ್ತು.ಜೆ.ಡಿ.ಎಸ್ ಭದ್ರಕೋಟೆಯಾಗಿರುವ ಈ ಸಂಘವು ಮತ್ತೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಜೆ.ಡಿ.ಎಸ್ ಪಾಳಯಕ್ಕೆ ಸಂತಸ ತಂದಿದೆ ಎಂದರು. ಈ ವೇಳೆ ಜೆ.ಡಿ.ಎಸ್ ಕಾರ್ಯಕರ್ತರು,ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರೆ,
ಸಂಘದ ಕಾರ್ಯದರ್ಶಿ ಅಭಿ,ನೂತನ ನಿರ್ದೇಶಕರಾದ ಜಿ.ಎನ್.ನಾಗರಾಜ್, ಸ್ವಾಮಿಗೌಡ,ದಿನೇಶ್,ನಾಗು, ಆಶಾ, ತಮ್ಮೇಗೌಡ, ಚಂದ್ರನಾಯ್ಕ, ಜಯರಾಂ,ಮಲ್ಲಿಕಾರ್ಜನ್, ಮಾಜಿ ಗ್ರಾ.ಪಂ.ಸದಸ್ಯ ಸಿ.ಟಿ ರವಿಕುಮಾರ್,ಮಾಜಿ ತಾ.ಪಂ.ಸದಸ್ಯ ಶಿವಶಂಕರ್,ಸಿ.ಕೆ.ನಾಗರಾಜು,ರಾಜು,ತಿಮ್ಮಪ್ಪ ಚನ್ನೇನಹಳ್ಳಿ ಸಿ.ಎಸ್ ರಾಜೇಗೌಡ,ರಾಜು ಕಂದೇಗಾಲ,ಹರೀಶ್ ಪಿ.ಚೌಡೇನಹಳ್ಳಿ ಮಾಸ್ಟರ್ ತಿಮ್ಮೇಗೌಡ,ಆಗ್ರೋ ಪ್ರದೀಪ್ ಹಾಗೂ ಗ್ರಾಮದ ಮುಖಂಡರುಗಳು ಗ್ರಾಮಸ್ಥರು ,ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಮತ್ತಿತರಿದ್ದರು.