ಚಿಕನ್ ಮಲೈ ಕಬಾಬ್

ಬೇಕಾಗುವ ಸಾಮಗ್ರಿಗಳು:

  • ಬೋನ್ ಲೆಸ್ ಚಿಕನ್ – ಅರ್ಧ ಕೆಜಿ
  • ಫ್ರೆಶ್ ಕ್ರೀಮ್ ಕಾಲು ಕಪ್
  • ಹಸಿರುಮೆಣಸಿನಕಾಯಿ ೫
  • ಕಸೂರಿ ಮೇಥಿ ೧ ಚಮಚ
  • ನಿಂಬೆರಸ ೧ ಚಮಚ
  • ಮಾಸರೆಲ್ಲಾ ಚೀಸ್ ೧ ಚಮಚ
  • ಬೆಳ್ಳುಳ್ಳಿ ಪೇಸ್ಟ್ – ೧ ಟೀ ಸ್ಪೂನ್
  • ಕಾಳುಮೆಣಸಿನಪುಡಿ ೧ ಟೀ ಸ್ಪೂನ್
  • ಕೊತ್ತಂಬರಿಸೊಪ್ಪು ೨ ಚಮಚ
  • ಉಪ್ಪು ರುಚಿಗೆ ತಕ್ಕಷ್ಟು
  • ಎಣ್ಣೆ -೧೦೦ ೨. ?.

ಮಾಡುವ ವಿಧಾನ:ಬೌಲ್‌ಗೆ ಚಿಕನ್ ಪೀಸ್, ನಿಂಬೆರಸ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಮಾಸರೆಲ್ಲಾ ಚೀಸ್, ಉಪ್ಪು, ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಬೆರೆಸಿ, ೧೫-೨೦ ನಿಮಿಷ ನೆನೆಯಲು ಬಿಡಿ. ಹಸಿರುಮೆಣಸಿನಕಾಯಿ, ಕೊತ್ತಂಬರಿ ಸೊಪ್ಪುಗಳನ್ನು ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಬೌಲ್‌ನಲ್ಲಿ ನೆನೆಸಿಟ್ಟುಕೊಂಡ ಚಿಕನ್, ಫ್ರೆಶ್ ಕ್ರೀಮ್, ರುಬ್ಬಿದ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪಿನ ಪೇಸ್ಟ್, ಕಸೂರಿ ಮೇಥಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಚಿಕನ್ ಹಾಕಿ ಕಲಸಿ, ಮತ್ತೆ ಅರ್ಧ ಗಂಟೆ ನೆನೆಯಲು ಇಡಿ, ಕೊನೆಯಲ್ಲಿ ಈ ಚಿಕನ್ ಪೀಸ್‌ಗಳನ್ನು ಸ್ಟಿಕ್‌ನಲ್ಲಿ ಸಿಕ್ಕಿಸಿ, ಕಾದಎಣ್ಣೆಯಲ್ಲಿ ಎರಡೂ ಕಡೆ ಶ್ಯಾಲೋ ಪ್ರೈ ಮಾಡಿದರೆ ಸ್ವಾದಿಷ್ಟ ಚಿಕನ್ ಮಲೈ ಕಬಾಬ್ ಸವಿಯಲು ಸಿದ್ಧ.