ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ರಾಜಕೀಯ ಅಂತ್ಯ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.13:-
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಯಿ ಚಾಮುಂಡಿಯ ಶಾಪ ತಟ್ಟಲಿದೆ. ತಾಯಿ ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ರಾಜಕೀಯ ಅಂತ್ಯವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯನವರ ಭÀ್ರಷ್ಟಾಚಾರ ಮುಗಿಲು ಮುಟ್ಟಿದೆ. ನೇಪಾಳದ ಪರಿಸ್ಥಿತಿ ರಾಜ್ಯಕ್ಕೂ ಬರಲಿದೆ. ರಾಜ್ಯದಲ್ಲಿ ಜನರಿಂದ ಕ್ರಾಂತಿಯಾಗಲಿದೆ. ಸಿದ್ದರಾಮಯ್ಯ ಇದೇ ಧೋರಣೆಯಲ್ಲಿದ್ದರೆ ಶೀಘ್ರವೇ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ. ರಾಜ್ಯದ ಜನರು ತಾಳ್ಮೆ ಕಳೆದುಕೊಂಡಿz್ದÁರೆ. ಸದ್ಯದ¯್ಲÉೀ ಕ್ರಾಂತಿಯ ಹಾದಿ ಹಿಡಿಯಲಿz್ದÁರೆ ಎಂದು ಭÀವಿಷ್ಯ ನುಡಿದರು.

ಮೌಲ್ವಿಗಳು ಮಾತನಾಡಲಿ: ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ ಹಿಂದೆ ಸರಿಯಲಿ. ಮೂರ್ತಿ ಪೂಜೆ ಮಾಡುವವರು ಇಸ್ಲಾಮ್ ಪ್ರಕಾರ ಕಾಫೀರರು. ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಎಂದು ಇಸ್ಲಾಮ್ ಹೇಳುತ್ತದೆ. ಈಗ ಬಾನು ಮುಷ್ತಾಕ್ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಮುಂದಾಗಿz್ದÁರೆ. ಮೌಲ್ವಿಗಳು ಈ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.

ಮೂರ್ತಿ ಪೂಜೆಗೆ ಬರುತ್ತಿರುವ ಬಾನು ಮುಷ್ತಾಕ್ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಾ? ಮೌಲ್ವಿಗಳು ಈ ಬಗ್ಗೆ ಉತ್ತರ ನೀಡಬೇಕು. ಅಥವಾ ನಾನು ಎP್ಸï ಮುಸ್ಲಿಂ ಎಂದು ಬಾನು ಮುಷ್ತಾಕ್ ಘೋಷಣೆ ಮಾಡಬೇಕು. ಇಸ್ಲಾಮ್ ಧÀರ್ಮದ ಬಗ್ಗೆ ನನಗೆ ನಂಬಿಕೆಯಿಲ್ಲವೆಂದು ಹೇಳಿ ದಸರಾ ಉದ್ಘಾಟನೆ ಮಾಡಲಿ. ಇಲ್ಲದಿದ್ದರೆ ದಸರಾ ಉದ್ಘಾಟನೆಯಿಂದ ಹಿಂದೆ ಸರಿದು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ ಮಾಡಲಿ. ಇಡೀ ವಿಶ್ವದಾದ್ಯಂತ ಎP್ಸï ಮುಸ್ಲಿಂ ಸಮುದಾಯ ಎಂಬ ಪ್ರತ್ಯೇಕ ಸಮುದಾಯ ಹುಟ್ಟಿಕೊಳ್ಳುತ್ತಿದೆ. ಇಸ್ಲಾಮ್ ಧÀರ್ಮವನ್ನು ಒಪ್ಪದವರು ಇದರಲ್ಲಿz್ದÁರೆ ಎಂದರು.

ರಾಜ್ಯದಲ್ಲಿ ಇನ್ನೂ ಹೊಂದಾಣಿಕೆ ರಾಜಕಾರಣ ಇದೆ. ಇನ್ನಾದರೂ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಒತ್ತಡಕ್ಕೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು. ಈಗ ಕೇಂದ್ರದ ನಾಯಕರಿಗೂ ಕೂಡ ತಪ್ಪು ಮಾಡಿದೆ ಎಂದು ಎನಿಸಿದೆ. ಮದ್ದೂರಿನಲ್ಲಿ ನನಗೆ ಸಿಕ್ಕ ಪ್ರೀತಿ ನೋಡಿ ಎಲ್ಲರಿಗೂ ಜ್ಞಾನೋದಯವಾಗಿದೆ. ರಾಜ್ಯದಲ್ಲಿ 2028ಕ್ಕೆ ಕ್ರಾಂತಿಯಾಗುತ್ತದೆ. ಎಲ್ಲರೂ ಕೂಡಿ ಬದಲಾವಣೆ ತರುತ್ತೇವೆ ಎಂದರು.

ಬಿಜೆಪಿ ಹೈಕಮಾಂಡ್ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಬಿಜೆಪಿ ಹೈಕಮಾಂಡನ್ನು ಭೇಟಿ ಮಾಡುವುದಿಲ್ಲ. ನಮ್ಮ ಜತೆ ಬಿಜೆಪಿಯ ಎಲ್ಲರೂ ಇz್ದÁರೆ. ಪೂಜ್ಯ ತಂದೆ ಮತ್ತು ಮಗ ಇಬ್ಬರನ್ನು ಬಿಟ್ಟರೆ ನಮ್ಮ ಜತೆ ಎಲ್ಲರೂ ಇz್ದÁರೆ ಎಂದು ಪರೋP್ಷÀವಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪನವರ ಕೊಡುಗೆ ಏನು? ಒಕ್ಕಲಿಗ ಸಮುದಾಯಕ್ಕೆ ಡಿ.ಕೆ.ಶಿವಕುಮಾರ್ ಕೊಡುಗೆ ಏನು?, ಕಾಂಗ್ರೆಸ್‍ಗೆ ಯಾವ ಹಿಂದೂಗಳು ವೋಟ್ ಹಾಕಿಲ್ಲವೇ? ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದಲ್ಲೂ ನೇಪಾಳ ರೀತಿ ಆಗುತ್ತದೆ ಎಂದು ಎಚ್ಚರಿಸಿದರು.
ಮದ್ದೂರಿನ ಕಲ್ಲು ತೂರಾಟ ಪ್ರಕರಣದಲ್ಲಿ ಹಿಂದೂಗಳದ್ದು ತಪ್ಪಿಲ್ಲ ಎಂದು ಸಚಿವ ಚೆಲುವರಾಯ ಸ್ವಾಮಿ ಹೇಳಿಕೆ ನೀಡಿz್ದÁರೆ. ಇದನ್ನು ಸ್ವಾಗತಿಸುತ್ತೇನೆ. ಆದರೆ, ರಾಜ್ಯದಲ್ಲಿ ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಇಲ್ಲದಿದ್ದರೆ ರಾಜ್ಯ ಸರ್ಕಾರ ಹೆಚ್ಚಿನ ದಿನ ಉಳಿಯುವುದಿಲ್ಲ ಎಂದರು.

ಶಾಸಕ ಪ್ರದೀಪ್ ಈಶ್ವರ್ ಕೋತಿ ಹೇಳಿಕೆಗೆ, ನಾನು ಮನುಷ್ಯರ ಹೇಳಿಕೆಗೆ ಅಷ್ಟೇ ಉತ್ತರ ಕೊಡುತ್ತೇನೆ. ಯಾರು ಕೋತಿ ಎಂದು ಜನರಿಗೆ ಗೊತ್ತಿದೆ. ಸುಧಾಕರ್ ಎಂಪಿಯಾದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ, ವರ್ಷವಾದರೂ ಕೊಟ್ಟಿಲ್ಲ. ನನ್ನ ಉತ್ತರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಯಡಿಯೂರಪ್ಪನವರಿಗೆ ಮಾತ್ರ ಎಂದರು.

ಎಫ್‍ಐಆರ್‍ಗೆ ಹೆದರುವುದಿಲ್ಲ: ತಮ್ಮ ಮೇಲೆ ಎಫ್‍ಐಆರ್ ಹಾಕಿರುವ ಬಗ್ಗೆ ಮಾತನಾಡಿ, ಮದ್ದೂರಿಗೆ ಕಾರ್ಯಕರ್ತರು ಬರುವಂತೆ ಕೇಳಿಕೊಂಡ ಹಿನ್ನೆಲೆ ನಾನು ಹೋಗಿz್ದÉ. ಅಲ್ಲಿರುವ ಮಸೀದಿ ಅಕ್ರಮವಾಗಿದ್ದು, ಆ ಕಡೆಯಿಂದಲೇ ಕಲ್ಲು ಹೊಡೆದಿz್ದÁರೆ. ನಾನು ಈ ಹಿಂದೆಯೇ ಅಕ್ರಮ ಮಸೀದಿಗಳ ತಪಾಸಣೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿz್ದÉ. ಆದರೆ, ಅದು ಆಗಿಲ್ಲ. ನಿನ್ನೆ ಮದ್ದೂರಿನಲ್ಲಿ ನನ್ನ ವಿರುದ್ಧ ಎಫ್‍ಐಆರ್ ಹಾಕಿz್ದÁರೆ. ಈಗಾಗಲೇ 70 ಕೇಸ್‍ಗಳಿವೆ. ಇದಕ್ಕೆ¯್ಲÁ ಹೆದರುವುದಿಲ್ಲ. ಎಷ್ಟು ಕೇಸ್ ಬೇಕಾದರೂ ಹಾಕಿಕೊಳ್ಳಲಿ ಎಂದು ಯತ್ನಾಳ್ ಹೇಳಿದರು.