ಚಾಮರಾಜು, ಹೊನ್ನೂರು ಗುರುಪ್ರಸಾದ್, ನಂದೀಶ್ ರವರೆಗೆ ಸನ್ಮಾನ

ಸಂಜೆವಾಣಿ ವಾರ್ತೆ
ಯಳಂದೂರು:.ಜೂ.02:-
ತಾಲ್ಲೂಕಿನ ವಡೆಗೆರೆ ಗ್ರಾಮದಲ್ಲಿ ಭಾನುವಾರ ಕೊಳ್ಳೇಗಾಲದ ಚಾಮರಾಜು ಸಮಾಜ ಸೇವಕ ಹಾಗೂ ನಿವೃತ್ತ ಎಲ್ ಐ ಸಿ ಅಧಿಕಾರಿ, ಛಲವಾದಿ ಮಹಾಸಭಾ ಹಾಗೂ ಹೊನ್ನೂರು ಗ್ರಾಮಪಂಚಾಯತಿ ಅಧ್ಯಕ್ಷರು ಹಾಗೂ ಯಜಮಾನರಾದ ಎಂ ಗುರುಪ್ರಸಾದ್ ಮತ್ತು ಪುಟ್ಟನಪುರ ನಂದೀಶ್ ಛಲವಾದಿ ಮಹಾಸಭಾ ಈ ಮೂವರಿಗೆ ಸನ್ಮಾನ ಕಾರ್ಯಕ್ರಮವನ್ನು ಅಭಿಮಾನಿಗಳು ಆಯೋಜಿಸಿದರು.


ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಛಲವಾದಿ ಮಹಾಸಭಾದ ಹೊನ್ನೂರು ವೆಂಕಟೇಶ್ ಮಾತನಾಡಿ ಈ ಮೂವರ ಕಾರ್ಯ ವೈಖರಿ ನಮಗೆಲ್ಲಾ ಸ್ಪೂರ್ತಿಯಾಗಿದೆ. ಇವರ ಕಾರ್ಯವನ್ನು ಮೆಚ್ಚಿ ನಾವು ಇವರನ್ನು ಗೌರವಿಸುತ್ತೇವೆ ಎಂದರು.


ಈ ಸಂದರ್ಭದಲ್ಲಿ ಕೆಸ್ತೂರು ಸುನೀಲ್, ಹೊನ್ನೂರು ಸೋಮಶೇಖರ್ ಮಾಸ್ಟರ್ ಗುರುಪ್ರಸಾದ್, ಮಾಲಂಗಿ ಮಲ್ಲೇಶ್, ಬಳೇಪೇಟೆ ಮಲ್ಲಿಕಾರ್ಜುನ, ಮಲ್ಲು, ರಾಜೇಂದ್ರ, ಗೌತಮ್ ಬಡಾವಣೆ ಮಹೇಶ್, ನಾಗೇಶ್ ಕಾವುದವಾಡಿ. ಮಾಲಂಗಿ ಗ್ರಾಮದ ಅಂಬೇಡ್ಕರ್ ಸಂಘದ ಕಾರ್ಯದರ್ಶಿಗಳು ಹಾಜರಿದ್ದರು